ಸ್ಮಾರ್ಟ್ಫೋನ್ ಚಾರ್ಜ್ ಮಾಡುವಾಗ ಮಾಡುವ ಕೆಲವು ತಪ್ಪುಗಳಿಂದಾಗಿ ಈ ರೀತಿಯ ಅಪಘಾತಗಳು ಸಂಭವಿಸಬಹುದು. ಅಂತಹ ಕೆಲವು ತಪ್ಪುಗಳ ಬಗ್ಗೆ ತಿಳಿಯೋಣ...
Smartphone Tips And Tricks:ಪ್ರಸ್ತುತ ಜಗತ್ತಿನಲ್ಲಿ ಯಾರು ಏನೇ ಮರೆತರೂ ಸಹ ಸ್ಮಾರ್ಟ್ಫೋನ್ ಮತ್ತು ಅದರ ಚಾರ್ಜರ್ ಅನ್ನು ಮರೆಯುವ ಮಾತೇ ಇಲ್ಲ. ಯಾರು ಎಲ್ಲೇ ಹೋದರೂ ಯಾವಾಗಲೂ ತಮ್ಮೊಂದಿಗೆ ಮಿಸ್ ಮಾಡದೇ ಕೊಂಡೊಯ್ಯುವ ವಸ್ತು ಎಂದರೆ ಅದುವೇ ಫೋನ್ ಚಾರ್ಜರ್. ಏಕೆಂದರೆ ಇದರೊಂದಿಗೆ ಸ್ಮಾರ್ಟ್ಫೋನ್ ಅನ್ನು ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಿ ಚಾರ್ಜ್ ಮಾಡಬಹುದು. ಆದರೆ, ಆಗಾಗ್ಗೆ ಸ್ಮಾರ್ಟ್ಫೋನ್ ಬ್ಯಾಟರಿ ಸ್ಫೋಟಗೊಂಡ ಹಲವು ಘಟನೆಗಳ ಬಗ್ಗೆ ವರದಿ ಆಗುತ್ತಲೇ ಇರುತ್ತದೆ. ಕೆಲವು ಸಂದರ್ಭಗಳಲ್ಲಿ, ಹೆಚ್ಚಿನ ಸ್ಮಾರ್ಟ್ಫೋನ್ ಘಟಕಗಳಲ್ಲಿ ದೋಷವಿದ್ದರೆ, ಇನ್ನೂ ಕೆಲವು ಸಂದರ್ಭಗಳಲ್ಲಿ ಬಳಕೆದಾರರ ತಪ್ಪಿನಿಂದಾಗಿ ಈ ಅವಘಡ ಸಂಭವಿಸುತ್ತದೆ. ವಾಸ್ತವವಾಗಿ, ಸ್ಮಾರ್ಟ್ಫೋನ್ ಚಾರ್ಜ್ ಮಾಡುವಾಗ ಮಾಡುವ ಕೆಲವು ತಪ್ಪುಗಳಿಂದಾಗಿ ಈ ರೀತಿಯ ಅಪಘಾತಗಳು ಸಂಭವಿಸಬಹುದು. ಅಂತಹ ಕೆಲವು ತಪ್ಪುಗಳ ಬಗ್ಗೆ ತಿಳಿಯೋಣ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ರಾತ್ರಿಯಿಡೀ ಮೊಬೈಲ್ ಚಾರ್ಜ್ ಮಾಡಬೇಡಿ: ನೀವು ರಾತ್ರಿಯಿಡೀ ಮೊಬೈಲ್ ಅನ್ನು ಚಾರ್ಜ್ನಲ್ಲಿ ಇಟ್ಟರೆ, ಇಂತಹ ತಪ್ಪನ್ನು ಮಾಡುವುದನ್ನು ನಿಲ್ಲಿಸಿ. ಏಕೆಂದರೆ ಇದು ನಿಮ್ಮ ಮೊಬೈಲ್ನ ಬ್ಯಾಟರಿಯನ್ನು ಹಾಳುಮಾಡುತ್ತದೆ. ವಾಸ್ತವವಾಗಿ, ಮೊಬೈಲ್ನ ಅತಿಯಾದ ಬಳಕೆಯಿಂದಾಗಿ, ಜನರು ಅನೇಕ ಬಾರಿ ಮೊಬೈಲ್ ಅನ್ನು ಚಾರ್ಜ್ ಮಾಡಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜನರು ರಾತ್ರಿಯಿಡೀ ಮೊಬೈಲ್ ಅನ್ನು ಚಾರ್ಜ್ಗೆ ಹಾಕಿ ಹಾಗೆಯೇ ಬಿಡುತ್ತಾರೆ. ಆದರೆ, ಇದರಿಂದ ಫೋನ್ ತುಂಬಾ ಬಿಸಿ ಆಗುತ್ತದೆ. ಇದು ಫೋನ್ ಸ್ಫೋಟಗೊಳ್ಳಲೂ ಕಾರಣವಿರಬಹುದು.
ಸ್ಥಳೀಯ ಚಾರ್ಜರ್ ಮತ್ತು ಬ್ಯಾಟರಿ ಬಳಸಬೇಡಿ: ಸ್ಮಾರ್ಟ್ಫೋನ್ ಚೆನ್ನಾಗಿ ಬಾಳಿಕೆ ಬರಬೇಕಾದರೆ ಮೊಬೈಲ್ ಚಾರ್ಜ್ಗಾಗಿ ನೀವು ಕಂಪನಿಯಿಂದ ನೀಡಲಾದ ಚಾರ್ಜರ್ ಅನ್ನು ಮಾತ್ರ ಬಳಸಿ. ಒಂದೊಮ್ಮೆ ನಿಮ್ಮ ಚಾರ್ಜರ್ ಹಾಳಾಗಿದ್ದರೆ, ನೀವು ಯಾವ ಕಂಪನಿಯ ಫೋನ ಅನ್ನು ಬಳಸುತ್ತೀರೋ ಅದೆ ಕಂಪನಿಯ ಚಾರ್ಚರ್ ಅನ್ನು ಮಾತ್ರ ಬಳಸಿ. ಅಂದರೆ, ನೀವು ಯಾವಾಗಲೂ ಮೊಬೈಲ್ನ ಮೂಲ ಚಾರ್ಜರ್ ಅನ್ನು ಬಳಸಬೇಕು. ಇದಲ್ಲದೆ, ನಿಮ್ಮ ಮೊಬೈಲ್ ಫೋನ್ನ ಬ್ಯಾಟರಿ ಹದಗೆಟ್ಟಿದ್ದರೆ ಮತ್ತು ನೀವು ಸ್ಥಳೀಯ ಬ್ಯಾಟರಿಯನ್ನು ಬಳಸುವ ಬಗ್ಗೆ ಯೋಚಿಸುತ್ತಿದ್ದರೆ, ಅದನ್ನು ತಪ್ಪಿಸಿ. ಏಕೆಂದರೆ ಯಾವುದೋ ಕಂಪನಿಯ ಫೋನಿಗೆ ಬೇರೆ ಯಾವುದೋ ಕಂಪನಿಯ ಬ್ಯಾಟರಿಯ ಬಳಕೆಯು ಮೊಬೈಲ್ ಬ್ಲಾಸ್ಟ್ಗೆ ಕಾರಣವಾಗಬಹುದು.
ಫೋನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಚಾರ್ಜರ್ ಆಯ್ಕೆಮಾಡಿ: ಸಾಮಾನ್ಯವಾಗಿ ಸ್ಮಾರ್ಟ್ಫೋನ್ನೊಂದಿಗೆ ಚಾರ್ಜರ್ ಅನ್ನು ನೀಡಲಾಗುತ್ತದೆ, ಆದರೆ ನೀವು ಚಾರ್ಜರ್ ಹೊಂದಿಲ್ಲದ ದುಬಾರಿ ಸ್ಮಾರ್ಟ್ಫೋನ್ ಅನ್ನು ಖರೀದಿಸುತ್ತಿದ್ದರೆ, ಯಾವಾಗಲೂ ಸ್ಮಾರ್ಟ್ಫೋನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಚಾರ್ಜರ್ ಅನ್ನು ಖರೀದಿಸಿ. ನೀವು ಇದನ್ನು ಮಾಡದಿದ್ದರೆ, ಸ್ಮಾರ್ಟ್ಫೋನ್ನ ಬ್ಯಾಟರಿಯು ಒತ್ತಡವನ್ನು ಹಾಕಲು ಪ್ರಾರಂಭಿಸುತ್ತದೆ ಮತ್ತು ಸಂಸ್ಕರಣೆಯ ವೇಗವೂ ಕಡಿಮೆಯಾಗುತ್ತದೆ. ಹಾಗಾಗಿ, ಅಂತಹ ತಪ್ಪನ್ನು ಮಾಡಬಾರದು.
ಫೋನ್ ಚಾರ್ಜರ್ ಅನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ: ಅನೇಕ ಬಾರಿ ಜನರು ತಮ್ಮ ಸ್ಮಾರ್ಟ್ಫೋನ್ ಚಾರ್ಜರ್ ಅನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಇದನ್ನು ಮಾಡಬಾರದು, ಇದು ಚಾರ್ಜರ್ ಅನ್ನು ಹಾಳು ಮಾಡುತ್ತದೆ. ಆದರೆ ಒಮ್ಮೆ ಅದು ಹಾನಿಗೊಳಗಾದರೆ, ಅದು ನಿಮ್ಮ ಸ್ಮಾರ್ಟ್ಫೋನ್ ಅನ್ನು ಹಾಳುಮಾಡಲು ಪ್ರಾರಂಭಿಸುತ್ತದೆ, ಆದ್ದರಿಂದ ನೀವು ಯಾವಾಗಲೂ ನಿಮ್ಮ ಸ್ವಂತ ಸ್ಮಾರ್ಟ್ ಫೋನ್ ಅನ್ನು ಚಾರ್ಜ್ ಮಾಡಲು ನಿಮ್ಮ ಚಾರ್ಜರ್ ಅನ್ನು ಬಳಸಬೇಕು.
ಫೋನ್ ಅನ್ನು ಯಾವಾಗ ಚಾರ್ಜ್ ಮಾಡಬೇಕು: ಪದೇ ಪದೇ ಫೋನ್ ಚಾರ್ಜ್ ಮಾಡುವುದರಿಂದ ಬ್ಯಾಟರಿಯ ಮೇಲೆ ಒತ್ತಡ ಬೀಳುತ್ತದೆ ಎಂಬುದು ಸ್ಮಾರ್ಟ್ ಫೋನ್ ತಜ್ಞರ ಅಭಿಪ್ರಾಯ. ಹಾಗಾಗಿ ಬ್ಯಾಟರಿ 20 ಪ್ರತಿಶತ ಅಥವಾ ಕಡಿಮೆ ಇದ್ದಾಗ ಮಾತ್ರ ಫೋನ್ ಅನ್ನು ಚಾರ್ಜ್ ಮಾಡಿ ಎಂಬುದನ್ನು ನೆನಪಿನಲ್ಲಿಡಿ. ಹೀಗೆ ಮಾಡುವುದರಿಂದ ಬ್ಯಾಟರಿಯ ಮೇಲೆ ಒತ್ತಡ ಇರುವುದಿಲ್ಲ ಮತ್ತು ಬ್ಯಾಟರಿ ಬೇಗ ಹಾಳಾಗುವುದಿಲ್ಲ.