ಪ್ರಿಯಾಂಕಾ ಚೋಪ್ರಾ ಅತ್ತಿಗೆ ಕೂಡ ಖ್ಯಾತ ನಟಿ! ದೇಸಿ ಬಾರ್ಬಿ ಅಂದಕ್ಕೆ ಸವಾಲು ಹಾಕ್ತಾಳೆ ಈ ಸೌತ್‌ ಬ್ಯೂಟಿ!

Priyanka Chopra Sister in Law: ನಟಿ ಪ್ರಿಯಾಂಕಾ ಚೋಪ್ರಾ ಸಹೋದರ ಸಿದ್ಧಾರ್ಥ್ ಚೋಪ್ರಾ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ದೇಸಿ ಹುಡುಗಿ ಪ್ರಿಯಾಂಕಾ ಚೋಪ್ರಾ ತನ್ನ ಸಹೋದರನ ಮದುವೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದಾಳೆ. ಇದೀಗ ಪ್ರಿಯಾಂಕಾ ಭಾವಿ ಸೊಸೆ ಯಾರು ಎಂಬ ಕುತೂಹಲ ನೆಟ್ಟಿಗರಲ್ಲಿ ಮೂಡಿದೆ.
 

1 /7

ಬಾಲಿವುಡ್‌ನ 'ದೇಸಿ ಗರ್ಲ್' ಅಂದರೆ ನಟಿ ಪ್ರಿಯಾಂಕಾ ಚೋಪ್ರಾ ಮನೆಯಲ್ಲಿ ಶೀಘ್ರದಲ್ಲೇ ಮದುವೆ ಸಂಭ್ರಮ ಮನೆಮಾಡಲಿದೆ.. ಯಾಕೆಂದರೆ ಪ್ರಿಯಾಂಕಾ ಸಹೋದರ ಸಿದ್ಧಾರ್ಥ್ ಚೋಪ್ರಾ ಮದುವೆಯಾಗಲಿದ್ದಾರೆ.. \  

2 /7

ಅಣ್ಣನ ಮದುವೆಗೆಂದು ಪ್ರಿಯಾಂಕಾ ಭಾರತಕ್ಕೆ ಬಂದಿದ್ದಾರೆ. ಇದೀಗ ಈ ಮೂಲಕ ಆಕೆಯ ಭಾವಿ ಸೊಸೆ ಯಾರು ಎಂಬ ಕುತೂಹಲ ನೆಟ್ಟಿಗರಲ್ಲಿ ಮೂಡಿದೆ.  

3 /7

ಪ್ರಿಯಾಂಕಾ ಅವರ ಅತ್ತಿಗೆಯ ಹೆಸರು ನೀಲಂ ಉಪಾಧ್ಯಾಯ. ನೀಲಂ ದಕ್ಷಿಣ ಚಿತ್ರರಂಗದ ಪ್ರಸಿದ್ಧ ನಟಿ ಮತ್ತು ಅವರು 2012 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ತೆಲುಗು ಚಿತ್ರ 'ಮಿಸ್ಟರ್ 7' ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.  

4 /7

ನೀಲಂ ತೆಲುಗು ಹಾಗೂ ತಮಿಳು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕಳೆದ ಒಂಬತ್ತು ವರ್ಷಗಳಿಂದ ದಕ್ಷಿಣ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ನೀಲಂ ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.  

5 /7

ಈ ವರ್ಷದ ಏಪ್ರಿಲ್‌ನಲ್ಲಿ ಸಿದ್ಧಾರ್ಥ್ ಚೋಪ್ರಾ ಮತ್ತು ನೀಲಂ ಉಪಾಧ್ಯಾಯ ಅವರ ನಿಶ್ಚಿತಾರ್ಥವಾಗಿತ್ತು.. ಆಗಲೂ ಪ್ರಿಯಾಂಕಾ ಪತಿಯೊಂದಿಗೆ ಭಾರತಕ್ಕೆ ಬಂದಿದ್ದರು.   

6 /7

ಇದಕ್ಕೂ ಮುನ್ನ ಸಿದ್ಧಾರ್ಥ್ ಇಶಿತಾ ಕುಮಾರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರು 2019 ರಲ್ಲಿ ಮದುವೆಯಾಗಲು ಹೊರಟಿದ್ದರು. ಆದರೆ ಅವರ ಹಲವು ಕಾರಣಗಳಿಂದ ಸಂಬಂಧ ಕೊನೆಗೊಂಡಿತು.  

7 /7

ಪ್ರಿಯಾಂಕಾ ಚೋಪ್ರಾ ಸಹೋದರ ಸಿದ್ಧಾರ್ಥ್ ಸಿನಿಮಾ ನಿರ್ಮಾಪಕ. ಅವರು ಮೊದಲು ನೀಲಂ ಅವರನ್ನು ಸಿನಿಮಾ ಸೆಟ್‌ನಲ್ಲಿ ಭೇಟಿಯಾದರು. ಕ್ರಮೇಣ ಇವರಿಬ್ಬರು ಸ್ನೇಹಿತರಾದರು ಮತ್ತು ಆ ಸ್ನೇಹ ಪ್ರೀತಿಗೆ ತಿರುಗಿತು. ಈಗ ಶೀಘ್ರದಲ್ಲೇ ಇವರಿಬ್ಬರೂ ಮದುವೆಯಾಗಲಿದ್ದಾರೆ.