Best Foods for Hair Growth: ದೇಹದಲ್ಲಿ ಕಬ್ಬಿಣದ ಕೊರತೆಯು ಕೂದಲು ತೆಳುವಾಗುವುದು ಮತ್ತು ಉದುರುವಿಕೆಗೆ ಕಾರಣವಾಗಬಹುದು. ಹೀಗಾಗಿ ಮಾಂಸ, ಪಾಲಕ್, ಚನ್ನಂಗಿ ಬೇಳೆ ಮತ್ತು ಧಾನ್ಯಗಳನ್ನು ಸೇವಿಸಿ. ಇವು ಕಬ್ಬಿಣದ ಅತ್ಯುತ್ತಮ ಮೂಲಗಳಾಗಿವೆ.
Tips for healthy hair: ಆರೋಗ್ಯಕರ, ಉದ್ದ & ದಪ್ಪ ಕೂದಲು ಹೊಂದುವುದು ಬಹುತೇಕರ ಆಸೆಯಾಗಿರುತ್ತದೆ. ಹೀಗಾಗಿ ತಲೆಗೂದಲ ಬೆಳವಣಿಗೆಗಾಗಿ ಅನೇಕರು ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳನ್ನು ಬಳಸಿ ಮತ್ತಷ್ಟು ಸಮಸ್ಯೆಗಳನ್ನು ತಂದುಕೊಳ್ಳುತ್ತಾರೆ. ಕೂದಲಿನ ಗುಣಲಕ್ಷಣಗಳಲ್ಲಿ ಜೆನೆಟಿಕ್ಸ್ ನಿರ್ಣಾಯಕ ಪಾತ್ರ ವಹಿಸುತ್ತದೆ. ದೈನಂದಿನ ದಿನಚರಿಯಲ್ಲಿ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರ ಸೇವಿಸುವುದು ಬಹಳ ಮುಖ್ಯ. ತಲೆಗೂದಲಿನ ಬೆಳವಣಿಗೆಯು ಆಹಾರ ಪದ್ಧತಿ, ಜೀವನಶೈಲಿ ಸೇರಿ ವಿವಿಧ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡುವುದರಿಂದ ತಲೆಗೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಿಂದ ತಲೆಗೂದಲಿನ ಆರೋಗ್ಯವನ್ನು ಸುಧಾರಿಸಬಹುದು. ನೈಸರ್ಗಿಕವಾಗಿ ಕೂದಲಿನ ಬೆಳವಣಿಗೆ ಹೆಚ್ಚಿಸಲು ಕೆಲವು ಪರಿಣಾಮಕಾರಿ ಸಲಹೆಗಳು ಇಲ್ಲಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಆರೋಗ್ಯಕರ ತಲೆಗೂದಲಿನ ಬೆಳವಣಿಗೆಗೆ ಜೀವಸತ್ವಗಳು & ಖನಿಜಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವು ನಿರ್ಣಾಯಕ ಪಾತ್ರ ವಹಿಸುತ್ತದೆ. ತಲೆಗೂದಲಿಗೆ ಬಯೋಟಿನ್, ವಿಟಮಿನ್ D, ಸತು & ಕಬ್ಬಿಣದಂತಹ ಅಗತ್ಯ ಪೋಷಕಾಂಶಗಳು ಬೇಕಾಗುತ್ತದೆ. ತಲೆಗೂದಲಿನ ಆರೋಗ್ಯದಲ್ಲಿ ಪ್ರೊಟೀನ್ ನಿರ್ಣಾಯಕ ಪಾತ್ರ ವಹಿಸುತ್ತದೆ. ಏಕೆಂದರೆ ಕೂದಲು ಪ್ರಾಥಮಿಕವಾಗಿ ಕೆರಾಟಿನ್ ಎಂಬ ಪ್ರೋಟೀನ್ನಿಂದ ಮಾಡಲ್ಪಟ್ಟಿದೆ. ಪ್ರೊಟೀನ್ಗಳಲ್ಲಿ ಸಮೃದ್ಧವಾಗಿರುವ ಆಹಾರ ಸೇವಿಸುವುದರಿಂದ ಕೂದಲಿನ ಬೆಳವಣಿಗೆ, ಶಕ್ತಿ & ಒಟ್ಟಾರೆ ಚೈತನ್ಯವನ್ನು ಬೆಂಬಲಿಸುತ್ತದೆ. ಮಾಂಸ, ಮೊಟ್ಟೆ, ಡೈರಿ ಉತ್ಪನ್ನಗಳು, ದ್ವಿದಳ ಧಾನ್ಯಗಳನ್ನು ಸೇವಿಸುವುದರಿಂದ ತಲೆಗೂದಲಿನ ಬೆಳವಣಿಗೆಗೆ ಉಪಯುಕ್ತವಾಗಿದೆ.
ದೇಹದಲ್ಲಿ ಕಬ್ಬಿಣದ ಕೊರತೆಯು ಕೂದಲು ತೆಳುವಾಗುವುದು ಮತ್ತು ಉದುರುವಿಕೆಗೆ ಕಾರಣವಾಗಬಹುದು. ಹೀಗಾಗಿ ಮಾಂಸ, ಪಾಲಕ್, ಚನ್ನಂಗಿ ಬೇಳೆ ಮತ್ತು ಧಾನ್ಯಗಳನ್ನು ಸೇವಿಸಿ. ಇವು ಕಬ್ಬಿಣದ ಅತ್ಯುತ್ತಮ ಮೂಲಗಳಾಗಿವೆ.
ಒಮೆಗಾ -3 ಕೊಬ್ಬಿನಾಮ್ಲಗಳು ನೆತ್ತಿಯನ್ನು ಪೋಷಿಸುತ್ತದೆ ಮತ್ತು ತಲೆಗೂದಲಿನ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಸಾಲ್ಮನ್ ಮೀನು, ಅಗಸೆಬೀಜಗಳು ಮತ್ತು ವಾಲ್ನಟ್ಗಳು ಒಮೆಗಾ-3ಗಳ ಉತ್ತಮ ಮೂಲಗಳಾಗಿವೆ. ಹೀಗಾಗಿ ತಲೆಗೂದಲಿನ ಬೆಳವಣಿಗೆಗೆ ಇವುಗಳನ್ನು ನಿಯಮಿತವಾಗಿ ಸೇವಿಸಬೇಕು.
ವಿಟಮಿನ್ B7 ಎಂದೂ ಕರೆಯಲ್ಪಡುವ ಬಯೋಟಿನ್, ಆರೋಗ್ಯಕರ ಕೂದಲಿನ ಬೆಳವಣಿಗೆ & ಶಕ್ತಿಯನ್ನು ಬೆಂಬಲಿಸುವ ಪ್ರಮುಖ ಪೋಷಕಾಂಶ. ಬಯೋಟಿನ್ ಭರಿತ ಆಹಾರ ಸೇವಿಸುವುದರಿಂದ ತಲೆಗೂದಲಿನ ಬೆಳವಣಿಗೆಗೆ ಅತ್ಯುತ್ತಮವಾಗಿದೆ. ಬಯೋಟಿನ್ ಸಮೃದ್ಧವಾಗಿರುವ ಮೊಟ್ಟೆ, ಬಾದಾಮಿ, ಸಿಹಿ ಆಲೂಗಡ್ಡೆ ಮತ್ತು ಪಾಲಕ್ ಸೇವಿಸಬೇಕು.
ಈ ವಿಟಮಿನ್ ಕೂದಲಿನ ಕಿರುಚೀಲಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೊಬ್ಬಿನಾಂಶವಿರುವ ಮೀನು, ಅಣಬೆ, ಕಿತ್ತಳೆ & ಧಾನ್ಯಗಳಂತಹ ಬಲವರ್ಧಿತ ಆಹಾರಗಳಲ್ಲಿ ವಿಟಮಿನ್ D ಅಂಶವಿರುವುದರಿಂದ ಆಹಾರದಲ್ಲಿ ಸೇವಿಸುವುದು ಉತ್ತಮ.