ಪಂಚತಾರಾ ಹೊಟೇಲ್ ನಲ್ಲಿ ಡ್ರಗ್ಸ್ ಪಾರ್ಟಿ : ಜನ್ಮದಿನದಂದೇ ನಟಿಯ ಬಂಧನ

ನೈರಾ ನೆಹಲ್  ಅವರನ್ನು ಜನ್ಮದಿನದಂದೇ ಪೊಲೀಸರು  ಬಂಧಿಸಿದ್ದಾರೆ. ಮುಂಬೈನ ಸಾಂತಕ್ರೂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ನವದೆಹಲಿ : ಸಿನಿಮಾ ಜಗತ್ತಿನನೊಂದಿಗೆ ಡ್ರಗ್ಸ್ ನಂಟು ಹಿಂದಿನಿಂದಲೂ ಕೇಳಿ ಬಂದಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಸಿನಿಮಾರಂಗ ಮತ್ತು ಡ್ರಗ್ಸ್ ನಂಟಿನ ಬಗ್ಗೆ ಸಾಕಷ್ಟು ಚರ್ಚೆ ಯಾಗಿತ್ತು. ಪ್ರಕಣಕ್ಕೆ ಸಂಬಂಧಿಸಿದಂತೆ ಅನೇಕ ನಟ ನಟಿಯರ ವಿಚಾರಣೆಯೂ ನಡೆದಿತ್ತು. ಆದರೋ ಈಗ ಮತ್ತೆ ಡ್ರಗ್ಸ್ ಪಾರ್ಟಿ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ನೈರಾ ನೆಹಲ್ (Naira Nehal) ಅವರನ್ನು ಜನ್ಮದಿನದಂದೇ ಪೊಲೀಸರು  ಬಂಧಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ನೈರಾ ಪಂಚತಾರಾ ಹೋಟೆಲ್‌ನಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ. 

2 /6

ಮುಂಬೈನ ಸಾಂತಕ್ರೂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಲ್ಲಿ ನೈರಾ ತನ್ನ ಹುಟ್ಟುಹಬ್ಬದ ಅಂಗವಾಗಿ ಪಾರ್ಟಿ ಆಯೋಜಿಸಿದ್ದರು ಎನ್ನಲಾಗಿದೆ. ಐಷಾರಾಮಿ ಹೋಟೆಲ್‌ನಲ್ಲಿ ಪಾರ್ಟಿ ನಡೆಸುತ್ತಿದ್ದರು. 

3 /6

ಮೂಲಗಳ ಪ್ರಕಾರ, ಲಭ್ಯ ಮಾಹಿತಿಯ ಮೇರೆಗೆ ಪೊಲೀಸರು ರಾತ್ರಿ 3 ಗಂಟೆಗೆ ದಾಳಿ ನಡೆಸಿ ನೈರಾ ಅವರನ್ನು ಡ್ರಗ್ಸ್ ನೊಂದಿಗೆ ಬಂಧಿಸಿದ್ದಾರೆ. ನೈರಾ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. 

4 /6

 ಸ್ಯಾಂಟಾಕ್ರೂಜ್ ಪೊಲೀಸರು ನಟಿ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪಾರ್ಟಿಯಲ್ಲಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ ವೇಳೆ,  ನೈರಾ ಮತ್ತು ಅವನ ಸ್ನೇಹಿತ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. 

5 /6

ಸಾಂತಾ ಕ್ರೂಜ್ ಪೊಲೀಸರು ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇಬ್ಬರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ. 

6 /6

ನೈರಾ ಕೆಲವು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇದೀಗ ಡ್ರಗ್ಸ್ ನೊಂದಿಗೆ ಸಿಕ್ಕಿಬಿದ್ದಿರುವ ಕಾರಣ, ನೈರಾ ವೃತ್ತಿ ಜೀವನ ತೊಂದರೆಗೊಳಗಾಗಬಹುದು. 

You May Like

Sponsored by Taboola