Bacchan Family: ಬಚ್ಚನ್ ಕುಟುಂಬದಲ್ಲಿ ಐಶ್ವರ್ಯಾ ಶಿಕ್ಷಣವೇ ಕಡಿಮೆಯಂತೆ! ಹಾಗಾದ್ರೆ ಮಿಕ್ಕವರ ಎಜ್ಯುಕೇಶನ್ ಮಟ್ಟ ಹೇಗಿದೆ?

Bacchan Family Education: ಬಚ್ಚನ್ ಕುಟುಂಬವು ಬಾಲಿವುಡ್‌ನ ಅತ್ಯಂತ ಹಳೆಯ ಮತ್ತು ಪ್ರಖ್ಯಾತ ಕುಟುಂಬಗಳಲ್ಲಿ ಒಂದಾಗಿದೆ. ಈ ಕುಟುಂಬದ ಬಹುತೇಕ ಎಲ್ಲರೂ ಚಿತ್ರರಂಗಕ್ಕೆ ಸೇರಿದವರು. ಇನ್ನು ಬಚ್ಚನ್ ಕುಟುಂಬದ ಶಿಕ್ಷಣದ ಅರ್ಹತೆಯ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಈ ಲೇಖನದಲ್ಲಿ ನಾವು ಬಚ್ಚನ್ ಕುಟುಂಬದ ಎಲ್ಲ ಸದಸ್ಯರ ಶಿಕ್ಷಣದ ಬಗ್ಗೆ ಹೇಳಲಿದ್ದೇವೆ.

1 /5

ಮೊದಲಿಗೆ ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಮಾತನಾಡೋಣ. ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ನಟಿ ತನ್ನ ಪದವಿಗಾಗಿ ರಚನಾ ಸಂಸದ್ ಅಕಾಡೆಮಿ ಆಫ್ ಆರ್ಕಿಟೆಕ್ಚರ್‌ಗೆ ಪ್ರವೇಶ ಪಡೆದರು. ಆದರೆ ಮಾಡೆಲಿಂಗ್‌ನಿಂದಾಗಿ ಪದವಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

2 /5

ಬೋಸ್ಟನ್ ವಿಶ್ವವಿದ್ಯಾಲಯದಿಂದ ನಟನೆಯಲ್ಲಿ ಪದವಿ ಪಡೆದ ಅಭಿಷೇಕ್ ಬಚ್ಚನ್ ಬಗ್ಗೆ ಮಾತನಾಡುವುದಾದರೆ, ಅವರಿಗೂ ಸಹ ತಮ್ಮ ಕೋರ್ಸ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

3 /5

ಅಮಿತಾಭ್ ಬಚ್ಚನ್ ಅವರ ಪುತ್ರಿ ಶ್ವೇತಾ ಬಚ್ಚನ್ ಅವರ ಸಹೋದರನಂತೆ ಚಿತ್ರಗಳಲ್ಲಿ ಕೆಲಸ ಮಾಡದಿದ್ದರೂ ಅವರಿಗೆ ಫ್ಯಾನ್ಸ್ ಇರೋದು ಮಾತ್ರ ಕಮ್ಮಿ ಇಲ್ಲ. ಇನ್ನು ಶ್ವೇತಾ ತನ್ನ ಅಧ್ಯಯನವನ್ನು ಸ್ವಿಟ್ಜರ್ಲೆಂಡ್‌ನಲ್ಲಿ ಮಾಡಿದ್ದಾರೆ. ನಂತರ ತಮ್ಮ ಪದವಿಯನ್ನು ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು.

4 /5

ಅಮಿತಾಭ್ ಬಚ್ಚನ್ ಅವರ ಪತ್ನಿ ಮತ್ತು ಪ್ರಸಿದ್ಧ ನಟಿ ಜಯಾ ಬಚ್ಚನ್ ಅವರು ಭೋಪಾಲ್‌ನ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ನಂತರ ಎಫ್‌ಟಿಐಐ ಪುಣೆಯಲ್ಲಿ ಜಯಾ ನಟನೆಯಲ್ಲಿ ಪದವಿ ಪಡೆದರು.

5 /5

ಇನ್ನು ಶತಮಾನದ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಶಿಕ್ಷಣ ಮತ್ತು ಬರವಣಿಗೆಯ ಬಗ್ಗೆ ಮಾತನಾಡೋಣ. ಬಿಗ್ ಬಿ ನೈನಿತಾಲ್ ಶಾಲೆಯಲ್ಲಿ ಇಂಟರ್ ವರೆಗೆ ಓದಿದ್ದಾರೆ. ಇದರ ನಂತರ ಅವರು ದೆಹಲಿ ವಿಶ್ವವಿದ್ಯಾಲಯದ ಕಿರೋರಿ ಮಾಲ್ ಕಾಲೇಜಿನಲ್ಲಿ ಬಿಎಸ್ಸಿ ಮಾಡಿದ್ದಾರೆ.