End Of Sun-Saturn Conjunction: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕುಂಭ ರಾಶಿಯಲ್ಲಿ ಗ್ರಹಗಳ ರಾಜ ಸೂರ್ಯ ಹಾಗೂ ಆತನ ಪುತ್ರ ಶನಿಯ ಮೈತ್ರಿ ನೆರವೇರಿತ್ತು. ಆದರೆ ಇದೀಗ ಸೂರ್ಯನ ಮೀನ ರಾಶಿ ಪ್ರವೇಶದಿಂದ ಈ ಇಬ್ಬರ ಮೈತ್ರಿ ಮುಕ್ತಾಯಗೊಂಡಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜನರಿಗೆ ಒಳ್ಳೆಯ ದಿನಗಳು ಆರಂಭಗೊಳ್ಳಲಿದ್ದು, ಅವರಿಗೆ ಅಪಾರ ಧನ ಪ್ರಾಪ್ತಿಯ ಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ.
Shani-Surya Yuti End: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಒಂದು ನಿಶ್ಚಿತ ಕಾಲಾಂತರದಲ್ಲಿ ಗೋಕರಿಸುವ ಮೂಲಕ ಪರಸ್ಪರ ಮೈತ್ರಿಯನ್ನು ರೂಪಿಸುತ್ತವೆ. ಇದರ ಜೊತೆಗೆ ಕೆಲ ಸಮಯದ ನಂತರ ಈ ಯುತಿ ಮುಕ್ತಾಯಗೊಳ್ಳುತ್ತದೆ. ಇದು ಭೂಮಿಯ ಮೇಲೆ ಇರುವ ಸಕಲ ಚರಾಚರಗಳ ಮೇಲೆ ಪ್ರಭಾವ ಬೀರುತ್ತದೆ. ಆದರೆ, ಇಲ್ಲಿ ಯಾವ ಗ್ರಹಗಳು ಮೈತ್ರಿಯನ್ನು ರೂಪಿಸುತ್ತಿವೆ ಮತ್ತು ಅವುಗಳ ನಡುವಿನ ಸಂಬಂಧ ಹೇಗಿದೆ ಎಂಬುದು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಅಂದರೆ ಅದು ಶತ್ರು ಭಾವದ ಮೈತ್ರಿಯೋ ಅಥವಾ ಸ್ನೇಹ ಭಾವದ ಮೈತ್ರಿಯೋ ಎಂಬುದು ತಿಳಿದುಕೊಳ್ಳುವುದು ಮಹತ್ವದ್ದಾಗುತ್ತದೆ.
ಇತ್ತೀಚೆಗೆ ಕುಂಭ ರಾಶಿಯಲ್ಲಿ ಗ್ರಹಗಳ ರಾಜ ಸೂರ್ಯ ಹಾಗೂ ಆತನ ಪುತ್ರ ಶನಿಯ ಮೈತ್ರಿ ನೆರವೇರಿತ್ತು. ತಂದೆ ಮಗನಾದರೂ ಕೂಡ ಇವರಿಬ್ಬರ ನಡುವೆ ಶತ್ರು ಭಾವದ ಸಂಬಂಧ ಇದೆ. ಇದರಿಂದ ಕೆಲ ರಾಶಿಗಳ ಜನರಿಗೆ ಅದರ ನಕಾರಾತ್ಮಕ ಪರಿಣಾಮಗಳು ಎದುರಾಗಿದ್ದವು. ಮಾರ್ಚ್ 16 ರಂದು ಕುಂಭರಾಶಿಯಲ್ಲಿ ನೆರವೇರಿದ್ದ ಇವರಿಬ್ಬರ ಮೈತ್ರಿ ಅಂತ್ಯವಾಗಿದೆ. ಏಕೆಂದರೆ ಮಾರ್ಚ್ 16 ರಂದು ಸೂರ್ಯ ಕುಂಭ ರಾಶಿಯನ್ನು ತೊರೆದು ಮೀನ ರಾಶಿಗೆ ಪ್ರವೇಶಿಸಿದ್ದಾನೆ. ಇದರಿಂದ ಮೂರು ರಾಶಿಗಳ ಜಾತಕದವರಿಗೆ ಅಪಾರ ಧನಪ್ರಾಪ್ತಿಯ ಯೋಗ ನಿರ್ಮಾಣಗೊಂಡಿದೆ ಮತ್ತು ಇವರು ಸಾಕಷ್ಟು ಪ್ರಗತಿಯನ್ನು ಕಾಣಲಿದ್ದಾರೆ. ಆ ಮೂರು ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
ಇದನ್ನೂ ಓದಿ-March 27 ರಂದು ಗ್ರಹಗಳ ರಾಜಕುಮಾರನ ಉದಯ, 3 ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕುಂಭ ರಾಶಿ- ಶನಿ ಮತ್ತು ಸೂರ್ಯನ ಸಂಯೋಗ ನಿಮ್ಮ ಜಾತಕದಲ್ಲಿಯೇ ನಿರ್ಮಾಣಗೊಂಡಿತ್ತು, ಹೀಗಾಗಿ ಈ ಮೈತ್ರಿ ಮುಗಿದ ತಕ್ಷಣ ನಿಮ್ಮ ಪಾಲಿಗೆ ಒಳ್ಳೆಯ ದಿನಗಳು ಆರಂಭಗೊಳ್ಳಲಿದೆ. ಏಕೆಂದರೆ ಶನಿದೇವನು ನಿಮ್ಮ ರಾಶಿಗೆ ಅಧಿಪತಿ, ಇದೀಗ ನಿಮ್ಮ ರಾಶಿಯ ಸಂಪತ್ತಿನ ಭಾವದ ಮೇಲೆ ಸೂರ್ಯ ಶಿಫ್ಟ್ ಆದ ಕಾರಣ ಮಾಲವ್ಯ ಮತ್ತು ಶಶ್ ಎಂಬ ಹೆಸರಿನ ರಾಜಯೋಗ ನಿಮ್ಮ ರಾಶಿ ಪರಿವರ್ತನೆಯಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ನೀವು ಉತ್ತಮ ಹಣವನ್ನು ಪಡೆಯುತ್ತೀರಿ. ಇದರಿಂದ ನಿಮ್ಮ ಧನ-ಸಂಪತ್ತಿನಲ್ಲಿ ಅಪಾರ ಹೆಚ್ಚಳವಾಗಲಿದೆ. ಈ ಅವಧಿಯಲ್ಲಿ ಉದ್ಯಮಿಗಳಿಗೆ ಉತ್ತಮ ಆರ್ಡರ್ಗಳು ಬರುವ ಎಲ್ಲಾ ಸಾಧ್ಯತೆಗಳು ಇವೆ. ಇದರಿಂದ ಭವಿಷ್ಯದಲ್ಲಿ ನೀವು ಉತ್ತಮ ಲಾಭ ಪಡೆಯಬಹುದು. ಇನ್ನೊಂದೆಡೆ ಈ ಅವಧಿಯಲ್ಲಿ ನೀವು ವಾಹನ ಅಥವಾ ಆಸ್ತಿಯನ್ನು ಖರೀದಿಸಲು ನಿಮ್ಮ ಮನಸ್ಸು ಮಾಡಬಹುದು ಮತ್ತು ಇದು ನಿಮಗೆ ಸಕಾಲ ಕೂಡ ಹೌದು,
ಮೇಷ ರಾಶಿ- ಶನಿ ಮತ್ತು ಸೂರ್ಯನ ಮೈತ್ರಿಯ ಅಂತ್ಯದಿಂದಾಗಿ, ಮೇಷ ರಾಶಿಯ ಜನರು ಭಾರಿ ಪ್ರಯೋಜನಗಳನ್ನು ಪೆಡೆಯಲಿದ್ದಾರೆ. ಏಕೆಂದರೆ ಶನಿದೇವನ ಉದಯ ಮತ್ತು ಸೂರ್ಯ ದೇವನಿಂದ ಬೇರ್ಪಡುವುದರೊಂದಿಗೆ ನಿಮ್ಮ ಲಾಭದ ಸ್ಥಾನವು ಬಲಗೊಳ್ಳಲಿದೆ. ಇದರೊಂದಿಗೆ, ನೀವು ಅಪಾರ ಘನತೆ ಗೌರವವನ್ನು ಪಡೆಯುವಿರಿ. ಅಲ್ಲದೆ, ನಿಮ್ಮ ವ್ಯವಹಾರವು ವಿದೇಶಗಳಿಗೆ ಸಂಬಂಧಿಸಿದ್ದರೆ, ನೀವು ಉತ್ತಮ ಲಾಭವನ್ನು ಪಡೆಯಬಹುದು. ಇದಲ್ಲದೆ, ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ನೀವು ಉತ್ತಮ ಲಾಭವನ್ನು ಪಡೆಯಬಹುದು.
ವೃಷಭ ರಾಶಿ- ನಿಮಗೆ, ಶನಿ ಮತ್ತು ಸೂರ್ಯನ ಮೈತ್ರಿ ಕೊನೆಗೊಳ್ಳುವಿಕೆ ಉತ್ತಮ ಆರ್ಥಿಕ ಲಾಭವನ್ನು ನೀಡಲಿದೆ. ಏಕೆಂದರೆ ಶನಿಯು ನಿಮ್ಮ ಸಂಕ್ರಮಣ ಜಾತಕದಲ್ಲಿ ಕೇಂದ್ರ ತ್ರಿಕೋಣ ರಾಜಯೋಗ ಮತ್ತು ಶಶ ರಾಜಯೋಗವನ್ನು ರೂಪಿಸುವ ಮೂಲಕ ವಿರಾಜಮಾನನಾಗಿದ್ದಾನೆ. ಆದ್ದರಿಂದ, ಈ ಅವಧಿಯಲ್ಲಿ ನೀವು ಹಠಾತ್ ವಿತ್ತೀಯ ಲಾಭವನ್ನು ಪಡೆಯಬಹುದು. ಅಲ್ಲದೆ, ಉದ್ಯಮಿಗಳ ಸಿಲುಕಿ ಹಾಕಿಕೊಂಡಿದ್ದ ಹಣ ಅವರ ಕೈಸೇರಲಿದೆ. ಈ ಅವಧಿಯಲ್ಲಿ ನೀವು ಹೊಸ ಒಪ್ಪಂದಗಳ ಒಪ್ಪಂದಗಳನ್ನು ದೃಢೀಕರಿಸಬಹುದು. ಆರ್ಥಿಕ ಮುಂಭಾಗದಲ್ಲಿ, ಲಾಭದ ಸಾಧ್ಯತೆಗಳು ಹೆಚ್ಚುತ್ತಿರುವಂತೆ ತೋರುತ್ತಿದೆ. ಇದರೊಂದಿಗೆ, ನಿರುದ್ಯೋಗಿಗಳು ಹೊಸ ಉದ್ಯೋಗವನ್ನು ಪಡೆಯಬಹುದು. ಉದ್ಯೋಗದಲ್ಲಿರುವವರಿಗೆ ಇನ್‌ಕ್ರಿಮೆಂಟ್ ಮತ್ತು ಬಡ್ತಿ ಸಿಗಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)