Sai Kiran Ram Second Marriage: ಖ್ಯಾತ ನಟ ತನ್ನ 46 ನೇ ವಯಸ್ಸಿನಲ್ಲಿ ತಮ್ಮ ಸಹನಟಿಯನ್ನು ವರಿಸಲು ರೆಡಿಯಾಗಿದ್ದಾರೆ. ಈ ನಟನ ಎಂಗೇಜ್ಮೆಂಟ್ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಖ್ಯಾತ ನಟ ತನ್ನ 46 ನೇ ವಯಸ್ಸಿನಲ್ಲಿ ತಮ್ಮ ಸಹನಟಿಯನ್ನು ವರಿಸಲು ರೆಡಿಯಾಗಿದ್ದಾರೆ. ಈ ನಟನ ಎಂಗೇಜ್ಮೆಂಟ್ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ನಟ ಸಾಯಿಕಿರಣ್ 2010 ರಲ್ಲಿ ವೈಷ್ಣವಿ ಎಂಬ ಯುವತಿಯೊಂದಿಗೆ ಮೊದಲ ಮದುವೆಯಾಗಿದ್ದರು. ಈ ದಂಪತಿಗೆ ಹೆಣ್ಣು ಮಗು ಕೂಡ ಇದೆ. ಆದರೆ ವೈಷ್ಣವಿ ಮತ್ತು ಸಾಯಿಕಿರಣ್ ವಿಚ್ಛೇದನ ಪಡೆದುಕೊಂಡಿದ್ದಾರೆ.
ನುವ್ವೇ ಕಾವಲಿ ಸಿನಿಮಾದಲ್ಲಿ ನಟಿಸುವ ಮೂಲಕ ತೆಲುಗು ಸಿನಿಪ್ರಿಯರಿಗೆ ಸಾಯಿಕಿರಣ್ ಪರಿಚಯವಾಗಿದ್ದರು. ನಟ ಸಾಯಿ ಕಿರಣ್ ಪ್ರೇಮಿಂಚು ಸಿನಿಮಾ ಮೂಲಕ ಜನರ ಮನಸ್ಸಿಗೆ ಹತ್ತಿರವಾದರು.
ಸಾಯಿ ಕಿರಣ್ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಎರಡನೇ ಮದುವೆ ಆಗಲು ಸಿದ್ಧರಾಗಿದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.
ಸಾಯಿಕಿರಣ್ ಅವರು ಖ್ಯಾತ ಗಾಯಕಿ ಪಿ.ಸುಶೀಲಾ ಅವರ ಮೊಮ್ಮಗನಾಗಿದ್ದಾರೆ. ಸಾಯಿಕಿರಣ್ ತಂದೆ-ತಾಯಿಯೂ ಚಿತ್ರರಂಗದಲ್ಲಿ ಸಾಕಷ್ಟು ಖ್ಯಾತಿ ಪಡೆದವರು.
ಸಾಯಿ ಕಿರಣ್ ತಮ್ಮ ಜೊತೆ ಕೊಯಿಲಮ್ಮ ಧಾರಾವಾಹಿಯಲ್ಲಿ ನಟಿಸಿದ ಶ್ರವಂತಿ ಎಂಬ ನಟಿಯೊಂದಿಗೆ ಎರಡನೇ ಬಾರಿ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗಿದೆ.
ಸಾಯಿ ಕಿರಣ್ ಮತ್ತು ಶ್ರವಂತಿ ನಿಶ್ಚಿತಾರ್ಥ ಮಾಡಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.