Financial Year Closing: ಮಾರ್ಚ್ 31ರ ಮೊದಲು ಮರೆಯದೇ ಈ ಕೆಲಸಗಳನ್ನು ಪೂರ್ಣಗೊಳಿಸಿ

                        

ಇಂದು ಮಾರ್ಚ್ 10 ಮತ್ತು 2020-21ರ ಹಣಕಾಸು ವರ್ಷ (Financial Year) ಮುಕ್ತಾಯಗೊಳ್ಳಲು ಈಗ ಕೇವಲ 21 ದಿನಗಳು ಮಾತ್ರ ಉಳಿದಿವೆ. ಮಾರ್ಚ್ 31 ರ ಮೊದಲು ಕೆಲವು ಸರ್ಕಾರಿ ಕೆಲಸಗಳನ್ನು ವಿಲೇವಾರಿ ಮಾಡುವುದು ಬಹಳ ಮುಖ್ಯ. ನೀವು ಈ ಕಾರ್ಯಗಳನ್ನು ಸಮಯಕ್ಕೆ ಪೂರ್ಣಗೊಳಿಸದಿದ್ದರೆ, ಅವು ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರಲಿವೆ.

1 /6

ಮೌಲ್ಯಮಾಪನ ವರ್ಷ 2020-21 (ಎಫ್‌ವೈ 2019-20) ಗೆ ತಡವಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕ 31 ಮಾರ್ಚ್ 2021 ಆಗಿದೆ. ನಿಯಮಗಳ ಪ್ರಕಾರ, ಯಾವುದೇ ಹಣಕಾಸು ವರ್ಷಕ್ಕೆ ಐಟಿಆರ್ ಸಲ್ಲಿಸುವ ಗಡುವು ಮುಗಿದ ನಂತರವೂ ರಿಟರ್ನ್ಸ್ ಸಲ್ಲಿಸಬಹುದು, ಆದರೂ ವಿಳಂಬಿತ ರಿಟರ್ನ್  (Belated Return) ಸಲ್ಲಿಸುವ ಕಾರಣ ನೀವು ದಂಡವನ್ನು ಪಾವತಿಸಬೇಕಾಗುತ್ತದೆ.

2 /6

ಕೆಲವೊಮ್ಮೆ ಐಟಿಆರ್ (Income Tax Return) ಸಲ್ಲಿಸುವಾಗ, ಕೆಲವು ಮಾಹಿತಿಯು ತಪ್ಪಾಗಿ ಅಪೂರ್ಣವಾಗಿ ಉಳಿಯುತ್ತದೆ ಅಥವಾ ಅದು ತಪ್ಪಾಗಿ ಸಲ್ಲಿಸಲ್ಪಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪರಿಷ್ಕೃತ ಐಟಿಆರ್ (Revised ITR) ಅನ್ನು ಸಲ್ಲಿಸುವ ಸೌಲಭ್ಯವು ತೆರಿಗೆ ಪಾವತಿದಾರರಿಗೆ (Tax Payers) ಲಭ್ಯವಿದೆ.

3 /6

ಮೌಲ್ಯಮಾಪನ ವರ್ಷ 2021-22ರ ಮುಂಗಡ ತೆರಿಗೆಯ ನಾಲ್ಕನೇ ಕಂತನ್ನು ಮಾರ್ಚ್ 15 ರೊಳಗೆ ಸಲ್ಲಿಸುವುದು ಅವಶ್ಯಕ. ಆದಾಯ ತೆರಿಗೆ ಕಾಯ್ದೆಯಡಿ, ಯಾವುದೇ ತೆರಿಗೆದಾರರು ವರ್ಷಕ್ಕೆ 10,000 ರೂ.ಗಿಂತ ಹೆಚ್ಚಿನ ತೆರಿಗೆ ಹೊಣೆಗಾರರಾಗಿದ್ದರೆ, ಅವರು ನಾಲ್ಕು ಕಂತುಗಳಲ್ಲಿ ಮುಂಗಡ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಮುಂಗಡ ತೆರಿಗೆಯನ್ನು ಜುಲೈ 15, ಸೆಪ್ಟೆಂಬರ್ 15, ಡಿಸೆಂಬರ್ 15 ಮತ್ತು ಮಾರ್ಚ್ 15 ರ ಮೊದಲು ಪಾವತಿಸಬೇಕಾಗುತ್ತದೆ. ಆದಾಗ್ಯೂ, ವೃತ್ತಿಪರ ಆದಾಯವನ್ನು ಹೊಂದಿರದ ಹಿರಿಯ ನಾಗರಿಕರಿಗೆ ಇದರಿಂದ ವಿನಾಯಿತಿ ನೀಡಲಾಗುತ್ತದೆ. ಇದನ್ನೂ ಓದಿ - ನಿಮ್ಮ ಬಳಿ ಇರುವ Pan Card ಅಸಲಿಯೇ? ಅದನ್ನು ಹೀಗಿ ಪರಿಶೀಲಿಸಿ

4 /6

ನೇರ ತೆರಿಗೆ ವಿವಾದ ಪರಿಹಾರ ಯೋಜನೆ 'ವಿವಾದದಿಂದ ವಿಶ್ವಾಸಾರ್ಹತೆ' ಅಡಿಯಲ್ಲಿ ವಿವರಗಳನ್ನು ನೀಡಲು ಮಾರ್ಚ್ 31 ಕ್ಕೆ ಮತ್ತು ಏಪ್ರಿಲ್ 30 ರವರೆಗೆ ಪಾವತಿಸಲು ಆದಾಯ ತೆರಿಗೆ ಇಲಾಖೆ ಗಡುವನ್ನು ವಿಸ್ತರಿಸಿದೆ. ಈ ಯೋಜನೆಯ ಮೂಲಕ ತೆರಿಗೆ ವಿವಾದಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತದೆ. ಇದನ್ನೂ ಓದಿ - IT Return ಸಲ್ಲಸಲು ಮರೆತಿದ್ದೀರಾ..? ಚಿಂತಿಸಬೇಡಿ ಇನ್ನೂ ಸಮಯವಿದೆ..

5 /6

2019-20ರ ಹಣಕಾಸು ವರ್ಷದ ವಾರ್ಷಿಕ ಜಿಎಸ್‌ಟಿ ರಿಟರ್ನ್ (GST Return) ಸಲ್ಲಿಸುವ ಗಡುವನ್ನು 31 ಮಾರ್ಚ್ 2021 ಕ್ಕೆ ವಿಸ್ತರಿಸಲಾಗಿದೆ. ಈ ಮೊದಲು, ರಿಟರ್ನ್ಸ್ ಸಲ್ಲಿಸುವ ಗಡುವನ್ನು 28 ಫೆಬ್ರವರಿ 2021 ರವರೆಗೆ ವಿಸ್ತರಿಸಲಾಯಿತು.

6 /6

ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಲು 31 ಮಾರ್ಚ್ 2021 ಕೊನೆಯ ದಿನಾಂಕ ಆಗಿದೆ. ಮಾರ್ಚ್ 31 ರೊಳಗೆ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಸಂಪರ್ಕಿಸದಿದ್ದರೆ, ನೀವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗಬಹುದು. ನಿಮ್ಮ ಪ್ಯಾನ್ ಅನ್ನು ನಿಷ್ಕ್ರಿಯಗೊಳಿಸಬಹುದು ಮತ್ತು ನೀವು 10,000 ರೂ.ವರೆಗೆ ದಂಡವನ್ನು ಪಾವತಿಸಬೇಕಾಗಬಹುದು. ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.