ಸಾರ್ವಜನಿಕವಾಗಿ ಚುಂಬಿಸುವುದು ಅಪರಾಧವೆನ್ನುವ ಹಲವಾರು ದೇಶಗಳಿವೆ ಎಂಬುದು ನಿಮಗೆ ತಿಳಿದಿದೆಯೇ. ಹೀಗೆ ಮಾಡಿ ಸಿಕ್ಕಿಬಿದ್ದರೆ ನಿಮಗೆ ಜೈಲು ಶಿಕ್ಷೆ ಗ್ಯಾರೆಂಟಿ..!
ಸಾಮಾನ್ಯವಾಗಿ ಅನೇಕರು ಪ್ರೀತಿಯನ್ನು ವ್ಯಕ್ತಪಡಿಸಲು ತಮ್ಮ ಸಂಗಾತಿಯನ್ನು ತಬ್ಬಿಕೊಳ್ಳುತ್ತಾರೆ ಅಥವಾ ಚುಂಬಿಸುತ್ತಾರೆ. ಆದರೆ ಸಾರ್ವಜನಿಕವಾಗಿ ಚುಂಬಿಸುವುದು ಅಪರಾಧವೆನ್ನುವ ಹಲವಾರು ದೇಶಗಳಿವೆ ಎಂಬುದು ನಿಮಗೆ ತಿಳಿದಿದೆಯೇ. ಹೀಗೆ ಮಾಡಿ ಸಿಕ್ಕಿಬಿದ್ದರೆ ನಿಮಗೆ ಜೈಲು ಶಿಕ್ಷೆ ಗ್ಯಾರೆಂಟಿ..! ಅಚ್ಚರಿಯಾದರೂ ಇದು ನಿಜ. ಆಶ್ಚರ್ಯವೆಂದರೆ ಈ ದೇಶಗಳಲ್ಲಿ ಹೆಚ್ಚಿನವು ಲೈಂಗಿಕ ಪ್ರವಾಸೋದ್ಯಮ(Sex Tourism)ಕ್ಕೆ ಪ್ರಸಿದ್ಧವಾಗಿವೆ. ಆದರೆ ಇಲ್ಲಿ ಪ್ರೀತಿಯ ಸಾರ್ವಜನಿಕ ಪ್ರದರ್ಶನವನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಈ ದೇಶಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಚೀನೀ ಸಂಪ್ರದಾಯದ ಪ್ರಕಾರ ಸಾರ್ವಜನಿಕವಾಗಿ ಪ್ರೀತಿಯ ಪ್ರದರ್ಶನ ಮಾಡುವುದನ್ನು ನಿಷೇಧಿಸಲಾಗಿದೆ. ಈ ಕಾನೂನು ಮುರಿದು ನೀವು ಏನಾದರೂ ನಿಮ್ಮ ಸಂಗಾತಿ ಜೊತೆ ಸಾರ್ವಜನಿಕ ಸ್ಥಳಗಳಲ್ಲಿ ಮೈಮರೆತರೆ ಭಾರೀ ಬೆಲೆ ತೆರಬೇಕಾಗುತ್ತದೆ.
ವಿಯೆಟ್ನಾಂ ಸಂಸ್ಕೃತಿಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಆದರೂ ಸಾರ್ವಜನಿಕವಾಗಿ ಪ್ರೀತಿಯನ್ನು ತೋರ್ಪಡಿಸುವುದನ್ನು ಇಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ನೀವು ಪಟ್ಟಣದಿಂದ ಹೊರಗಿರಿ ಅಥವಾ ಒಳಗಿರಿ ನಿಮ್ಮ ಪ್ರೀತಿ-ಪ್ರಣಯದ ಬಗ್ಗೆ ನಿಯಂತ್ರಣ ಹೊಂದಿರಬೇಕು.
ಇಲ್ಲಿ ಸಾರ್ವಜನಿಕವಾಗಿ ಚುಂಬಿಸುವುದನ್ನು ನಿಷೇಧಿಸಲಾಗಿದೆ. ಸಂಗಾತಿಯ ಕೈಗಳನ್ನು ಹಿಡಿದುಕೊಂಡು ಹೋಗುವುದು ಸಹ ಇಲ್ಲಿ ಅಪರಾಧ. ಹೀಗೆ ಏನಾದರೂ ನೀವು ಮಾಡಿದರೆ ದೊಡ್ಡ ತೊಂದರೆಗೆ ಸಿಲುಕಬಹುದು. ಸಾರ್ವಜನಿಕವಾಗಿ ಚುಂಬಿಸುತ್ತಾ ಸಿಕ್ಕಿಬಿದ್ದರೆ ಜೈಲು ಶಿಕ್ಷೆಗೆ ಗುರಿಯಾಗಬಹುದು.
ಇಂಡೋನೇಷ್ಯಾದಲ್ಲಿ ಸಾರ್ವಜನಿಕವಾಗಿ ಚುಂಬಿಸುವುದನ್ನು ನಿಷೇಧಿಸಲಾಗಿದೆ. ಈ ರೀತಿ ಮಾಡಿ ಸಿಕ್ಕಿಬಿದ್ದರೆ ದಂಪತಿಗೆ ಜೈಲು ಶಿಕ್ಷೆ ಆಗಬಹುದು, ಅಷ್ಟೇ ಅಲ್ಲ ಇಲ್ಲಿ ಸಾರ್ವಜನಿಕವಾಗಿ ಉದ್ಧಟತನ ನಡೆಸುವ ಟ್ರೆಂಡ್ ಕೂಡ ಇದೆ.
ಥೈಲ್ಯಾಂಡ್ ಲೈಂಗಿಕ ಪ್ರವಾಸೋದ್ಯಮ(Sex Tourism)ಕ್ಕೆ ಹೆಸರುವಾಸಿಯಾಗಿದೆ. ಬ್ಯಾಂಕಾಕ್‌ನಲ್ಲಿ ಅನೇಕ ರೆಡ್ ಲೈಟ್ ಪ್ರದೇಶಗಳಿವೆ. ವರದಿಯ ಪ್ರಕಾರ ಥೈಲ್ಯಾಂಡ್‌ನಲ್ಲಿ 3 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಲೈಂಗಿಕ ಕಾರ್ಯಕರ್ತರು ಇದ್ದಾರೆ. ಆದರೆ ಈ ದೇಶದಲ್ಲಿ ಸಾರ್ವಜನಿಕವಾಗಿ ಚುಂಬಿಸುವುದನ್ನು ನಿಷೇಧಿಸಲಾಗಿದೆ. ಹೀಗೆ ಮಾಡುತ್ತಾ ಸಿಕ್ಕಿಬಿದ್ದರೆ ನೀವು ಭಾರೀ ದಂಡ ಪಾವತಿಸಬೇಕಾಗುತ್ತದೆ. ಈ ಅಪರಾಧಕ್ಕೆ ನಿಮ್ಮನ್ನು ಕಂಬಿ ಹಿಂದೆ ಕೂಡ ಕಳುಹಿಸಬಹುದು.