Flipkart ಭರ್ಜರಿ ಆಫರ್: ಈ 5 ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ರಿಯಾಯಿತಿ

ನಿಮ್ಮ ಬಜೆಟ್‍ಗೆ ಹೊಂದುವ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ರಿಯಾಯತಿ ಲಭ್ಯವಿದೆ.

ಫ್ಲಿಪ್‌ಕಾರ್ಟ್ ಭರ್ಜರಿ ರಿಯಾಯಿತಿ: ನಿಮ್ಮ ಮನೆಗೆ ಹೊಸ ಸ್ಮಾರ್ಟ್ ಟಿವಿಯನ್ನು ತರಲು ಬಯಸಿದರೆ, ಫ್ಲಿಪ್‌ಕಾರ್ಟ್‌ನಲ್ಲಿ ಅನೇಕ ಅದ್ಭುತ ಆಫರ್ ಗಳಿವೆ. ನಿಮ್ಮ ಬಜೆಟ್‍ಗೆ ಹೊಂದುವ ಅತ್ಯುತ್ತಮ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿರುವ ಟಿವಿಗಳ ಮೇಲೆ ಭಾರೀ ರಿಯಾಯತಿ ಲಭ್ಯವಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

24,999 ರೂ.ಗಳ ಈ 43 ಇಂಚಿನ ಸ್ಮಾರ್ಟ್ ಟಿವಿಯನ್ನು ಶೇ.20ರಷ್ಟು ರಿಯಾಯಿತಿ ಮೇಲೆ 19,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 1 ಸಾವಿರ ರೂ. ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದ್ದು, ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಲಾಭ ಪಡೆದರೆ ನೀವು 11 ಸಾವಿರ ರೂ. ಉಳಿಸಲು ಸಾಧ್ಯವಾಗುತ್ತದೆ. ಈ ರೀತಿ ಈ ಟಿವಿಯನ್ನು ನೀವು ಕೇವಲ 7,999 ರೂ.ಗೆ ಮನೆಗೆ ತರಬಹುದು.

2 /5

40 ಇಂಚಿನ ಡಿಸ್‌ಪ್ಲೇ ಹೊಂದಿರುವ ಈ ಸ್ಮಾರ್ಟ್ ಟಿವಿಯನ್ನು ಫ್ಲಿಪ್‌ಕಾರ್ಟ್‌ನಲ್ಲಿ 29,990 ರೂ. ಬದಲಿಗೆ ಶೇ.45ರಷ್ಟು ರಿಯಾಯಿತಿ ನಂತರ 16,489 ರೂ.ಗೆ ಮಾರಾಟ ಮಾಡಲಾಗುತ್ತಿದೆ. ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 825 ರೂ.ಗಳ ರಿಯಾಯಿತಿ ಸಿಗಲಿದೆ.

3 /5

ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್ ಟಿವಿ 32 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ 16,990 ರೂ.ಗೆ ಮಾರಾಟ ಮಾಡಲಾಗುತ್ತಿದ್ದು, ಇದರ ಮೂಲ ಬೆಲೆ 22,900 ರೂ. ಆಗಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ನಿಮಗೆ 850 ರೂ.ಗಳ ಕ್ಯಾಶ್‌ಬ್ಯಾಕ್ ಸಿಗಲಿದೆ. ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನ ಪಡೆದರೆ ನೀವು 11 ಸಾವಿರ ರೂ. ಉಳಿಸಲು ಸಾಧ್ಯವಾಗುತ್ತದೆ. ಒಟ್ಟಾರೆ ನೀವು ಈ ಟಿವಿಯನ್ನು 5,140 ರೂ.ಗೆ ಖರೀದಿಸಲು ಸಾಧ್ಯವಾಗುತ್ತದೆ.  

4 /5

ಒನಿಡಾದ 32 ಇಂಚಿನ ಈ ಸ್ಮಾರ್ಟ್ ಟಿವಿಯನ್ನು 23,490 ರೂ. ಬದಲಿಗೆ  12,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ಈ ಟಿವಿ ನಿಮಗೆ 12,349 ರೂ.ಗೆ ಸಿಗುತ್ತದೆ.

5 /5

20 ಸಾವಿರ ರೂ. ಬೆಲೆಯ ಈ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಫ್ಲಿಪ್‌ಕಾರ್ಟ್‌ನಲ್ಲಿ ಶೇ.37ರಷ್ಟು ರಿಯಾಯಿತಿ ಬಳಿಕ 12,499 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಶೇ.5ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು ಮತ್ತು ಎಕ್ಸ್‌ಚೇಂಜ್ ಆಫರ್‌ನೊಂದಿಗೆ 11 ಸಾವಿರ ರೂ. ರಿಯಾಯಿತಿ ಸಿಗಲಿದೆ. ಈ ಎಲ್ಲಾ ಆಫರ್ ನ ಸಂಪೂರ್ಣ ಪ್ರಯೋಜನ ಪಡೆದರೆ ನೀವು ಕೇವಲ 874 ರೂ.ಗಳಲ್ಲಿ ಈ ಸ್ಮಾರ್ಟ್ ಟಿವಿಯನ್ನು ಮನೆಗೆ ತೆಗೆದುಕೊಂಡು ಹೋಗಬಹುದು.