Weight Loss Diet Chart: ಒಂದು ವಾರ ಈ ಡಯಟ್ ಅನುಸರಿಸಿದರೆ ಮೂರರಿಂದ ನಾಲ್ಕು ಕಿಲೋ ತೂಕ ಕಳೆದುಕೊಳ್ಳಬಹುದು .!

Weight Loss Diet Chart for one Week : ಸರಿಯಾದ ಆಹಾರಕ್ರಮವನ್ನು ಅನುಸರಿಸುವ ಮೂಲಕ ಒಂದೇ  ವಾರದಲ್ಲಿ 3 ರಿಂದ 4 ಕೆಜಿ ಕಳೆದುಕೊಳ್ಳಬಹುದು.
 

ಬೆಂಗಳೂರು : Weight Loss Diet Chart for one Week :ತೂಕ ಹೆಚ್ಚಳ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೆಚ್ಚುತ್ತಿರುವ ಸ್ಥೂಲಕಾಯತೆಯಿಂದಾಗಿ, ಅನೇಕ ಬಾರಿ ಅಪಾಯಕಾರಿ ಕಾಯಿಲೆಗಳಿಗೆ ಗುರಿಯಾಗಬೇಕಾಗುತ್ತದೆ. ಇಂದಿನ ಕಾಲದಲ್ಲಿ, ಹೆಚ್ಚಿನ ಜನರು ಹೆಚ್ಚುತ್ತಿರುವ ತೂಕದಿಂದ ತೊಂದರೆಗೊಳಗಾಗುತ್ತಾರೆ. ಈ ಹಿನ್ನೆಲೆಯಲ್ಲಿ ತೂಕವನ್ನು ಕಳೆದುಕೊಳ್ಳಲು ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ ಕೆಲವರು ಎಷ್ಟೇ ಪ್ರಯತ್ನ ಪಟ್ಟರೂ ತೂಕ ಕಳೆದುಕೊಳ್ಳುವುದು ಸಾಧ್ಯವಾಗುವುದಿಲ್ಲ.   ಆದರೆ ಸರಿಯಾದ ಆಹಾರಕ್ರಮವನ್ನು ಅನುಸರಿಸುವ ಮೂಲಕ ಒಂದೇ  ವಾರದಲ್ಲಿ 3 ರಿಂದ 4 ಕೆಜಿ ಕಳೆದುಕೊಳ್ಳಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /8

ಮೊದಲ ದಿನದ ಡಯಟ್ : ಮೊದಲ ದಿನ ಬೆಳಗಿನ ಉಪಾಹಾರವಾಗಿ 2 ಬೇಯಿಸಿದ ಮೊಟ್ಟೆ ಮತ್ತು ಅರ್ಧ ಬೌಲ್ ಓಟ್ಸ್ ಅನ್ನುಸೇವಿಸಿ. ಊಟದಲ್ಲಿ, 1 ಬೌಲ್ ಸೋಯಾ ಚಂಕ್ ಪುಲಾವ್, 1 ಸೌತೆಕಾಯಿ  ಮೊಸರು ಬಜ್ಜಿ, ಸಲಾಡ್ ತೆಗೆದುಕೊಳ್ಳಿ.  ರಾತ್ರಿಯ ಊಟದಲ್ಲಿ 2  ಟೋಸ್ಟ್ ಗಳೊಂದಿಗೆ 1 ಬೌಲ್ ಟೊಮೆಟೊ ಸೂಪ್ ಕುಡಿಯಿರಿ.

2 /8

ಎರಡನೇ ದಿನದ ಡಯಟ್ : ಎರಡನೇ ದಿನ, ಬೆಳಗಿನ ಉಪಾಹಾರಕ್ಕೆ 2 ಜೋಳದ  ಹಿಟ್ಟಿನ ದೋಸೆ, ಮತ್ತು ಅರ್ಧ ಬೌಲ್ ಮೊಸರು ತಿನ್ನಿರಿ. ಊಟದಲ್ಲಿ, 1 ಬೌಲ್ ದಾಲ್ , 1 ಬೌಲ್ ಮಿಶ್ರ ತರಕಾರಿಗಳು, 1 ಚಪಾತಿ ಮತ್ತು ಸಲಾಡ್ ತೆಗೆದುಕೊಳ್ಳಿ.  ರಾತ್ರಿಯ ಊಟದಲ್ಲಿ 2 ಬ್ರೆಡ್‌ಗಳ ಪನೀರ್ ಭುರ್ಜಿ ಸ್ಯಾಂಡ್‌ವಿಚ್ ಅನ್ನು ತಿನ್ನಿರಿ.

3 /8

3 ನೇ ದಿನದ ಡಯಟ್ :  ಮೂರನೇ ದಿನ, ಬೆಳಗಿನ ಉಪಾಹಾರಕ್ಕಾಗಿ ಬಾಳೆಹಣ್ಣು ಪೀನಟ್ ಬಟರ್ ಸ್ಮೂಥಿ ತೆಗೆದುಕೊಳ್ಳಿ. ಮಧ್ಯಾಹ್ನದ ಊಟದಲ್ಲಿ 1 ಬಟ್ಟಲು  ಸೋರೆಕಾಯಿ ತರಕಾರಿ, 1 ಬೌಲ್ ಮೊಸರು, 1 ಬೇಯಿಸಿದ ಮೊಟ್ಟೆ, 1 ಚಪಾತಿ ಮತ್ತು ಸಲಾಡ್ ಅನ್ನು ಭೋಜನದಲ್ಲಿ 1 ಬೌಲ್ ತರಕಾರಿ ಕ್ವಿನೋವಾವನ್ನು ತಿನ್ನಿರಿ. ಕ್ವಿನೋವಾ ಗ್ಲುಟನ್ ಮುಕ್ತ ಆಹಾರವಾಗಿದ್ದು, ತುಂಬಾ ಆರೋಗ್ಯಕರವಾಗಿದೆ.

4 /8

4 ನೇ ದಿನದ ಡಯಟ್ : ನಾಲ್ಕನೇ ದಿನ, ಬೆಳಗಿನ ಉಪಾಹಾರದಲ್ಲಿ 2 ಮೊಟ್ಟೆಯ ಆಮ್ಲೆಟ್ ಮತ್ತು 2 ಟೋಸ್ಟ್ ಅನ್ನು ತಿನ್ನಿ. ಊಟದಲ್ಲಿ 2 ಸಾದಾ ದೋಸೆ ಮತ್ತು 1 ಬೌಲ್ ಸಾಂಬಾರ್ ತೆಗೆದುಕೊಳ್ಳಿ.  ರಾತ್ರಿ  ಭೋಜನದಲ್ಲಿ 1 ಬೌಲ್ ಹುರಿದ ತರಕಾರಿಗಳು ಮತ್ತು ಚೀಸ್ ಅನ್ನು ತಿನ್ನಿರಿ.  

5 /8

ಐದನೇ ದಿನದ ಡಯಟ್ :  ಐದನೇ ದಿನದ ಉಪಹಾರದಲ್ಲಿ 2  ಕಡಲೆ ಹಿಟ್ಟಿನ  ದೋಸೆಯನ್ನು ಪುದೀನ ಚಟ್ನಿಯೊಂದಿಗೆ ಸೇವಿಸಿ. ಮಧ್ಯಾಹ್ನದ ಊಟದಲ್ಲಿ 1 ಬೌಲ್ ರಾಜ್ಮಾ, 1 ಬೌಲ್ ಅನ್ನ ಮತ್ತು ಸಲಾಡ್ ತೆಗೆದುಕೊಳ್ಳಿ. ರಾತ್ರಿಯ ಊಟದಲ್ಲಿ, 1 ಬೌಲ್ ಮೊಳಕೆ ಕಾಳು  ಮತ್ತು ಸೌತೆಕಾಯಿ-ಟೊಮ್ಯಾಟೊ ಮತ್ತು ಈರುಳ್ಳಿ ಸಲಾಡ್ ಅನ್ನು ತಿನ್ನಿರಿ.

6 /8

ಆರನೇ ದಿನದ ಡಯಟ್  : ಆರನೇ ದಿನ ಬೆಳಗಿನ ಉಪಾಹಾರಕ್ಕೆ 1 ಬೌಲ್ ತರಕಾರಿ ಸೇರಿಸಿ ಮಾಡಿದ ಅವಲಕ್ಕಿ ಉಪ್ಪಿಟ್ಟು ಸೇವಿಸಿ. ಮಧ್ಯಾಹ್ನದ ಊಟದಲ್ಲಿ 1 ಬೌಲ್  ದಾಲ್, 1 ಬೌಲ್ ತರಕಾರಿಗಳು, 1 ಚಪಾತಿ ಮತ್ತು ಸಲಾಡ್ ಅನ್ನು ತಿನ್ನಿರಿ. ರಾತ್ರಿಯ ಊಟದಲ್ಲಿ, ಹುರಿದ ಸೋಯಾ ತುಂಡುಗಳೊಂದಿಗೆ 1 ಬೌಲ್ ತರಕಾರಿಗಳನ್ನು ತೆಗೆದುಕೊಳ್ಳಿ.

7 /8

7ನೇ ದಿನದ ಡಯಟ್ ಚಾರ್ಟ್: ಏಳನೇ ದಿನ ಬೆಳಗಿನ ಉಪಾಹಾರಕ್ಕೆ ತೆಂಗಿನಕಾಯಿ ಚಟ್ನಿಯೊಂದಿಗೆ 3 ಇಡ್ಲಿಗಳನ್ನು ಸೇವಿಸಿ. ಮಧ್ಯಾಹ್ನದ ಊಟದಲ್ಲಿ 1  ಬೌಲ್ ಮಟರ್ ಪನೀರ್, 1  ಬೌಲ್  ಸೌತೆಕಾಯಿ ಮೊಸರು ಬಜ್ಜಿ ,  1 ಚಪಾತಿ ಮತ್ತು ಸಲಾಡ್ ಸೇವಿಸಿ.  ರಾತ್ರಿಯ ಊಟದಲ್ಲಿ 1 ಬೌಲ್ ಉಪ್ಮಾ ಮತ್ತು 1 ಬೌಲ್ ಮೊಸರು ತಿನ್ನಿರಿ.

8 /8

ಪ್ರತಿದಿನ 2 ಹಣ್ಣುಗಳನ್ನು ತಿನ್ನಬೇಕು : ಡಯಟ್ ಚಾರ್ಟ್ ಅನ್ನು ಅನುಸರಿಸುವುದರ ಜೊತೆಗೆ, ಪ್ರತಿದಿನ 2 ಹಣ್ಣುಗಳನ್ನು ತಿನ್ನಬೇಕು. ಇದಲ್ಲದೆ, ತಿಂಡಿಗಳಲ್ಲಿ ಹುರಿದ ಮಖಾನಾ, ಹುರಿದ ಬೇಳೆ, ಪಾಪ್‌ಕಾರ್ನ್ ಮತ್ತು ಬೇಯಿಸಿದ ಚಿಪ್ಸ್ (baked chips)ಅನ್ನು ತಿನ್ನಬಹುದು. ಬೆಳಗಿನ ಉಪಾಹಾರ ಮತ್ತು ಊಟದ ನಡುವೆ ಹಣ್ಣುಗಳನ್ನು ಮತ್ತು ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವೆ ತಿಂಡಿಗಳನ್ನು ತೆಗೆದುಕೊಳ್ಳಬಹುದು. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)