Dhanshakti Yog 2024: ಮಂಗಳ ಹಾಗೂ ಶುಕ್ರರ ಕೃಪೆಯಿಂದ ಧನಶಕ್ತಿ ಯೋಗ ರಚನೆ, ಶುಕ್ರದೆಸೆಯಿಂದ ಈ ಜನರಿಗೆ ಅಪಾರ ಧನ ಸಂಪತ್ತು ಪ್ರಾಪ್ತಿ!

Dhanshakti Yog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರುವರಿ ಗಿಂಗಲಿನಲ್ಲಿ ಮಕರ ರಾಶಿಯಲ್ಲಿ ಶುಕ್ರ ಹಾಗೂ ಮಂಗಳನ ಮೈತ್ರಿ ನೆರವೇರಲಿದ್ದು, ಇದರಿಂದ ಮಕರ ರಾಶಿಯಲ್ಲಿ ಧನಶಕ್ತಿ ಯೋಗ ರಚನೆಯಾಗುತ್ತಿದೆ. ಇದರಿಂದ ಕೆಲ ರಾಶಿಗಳ ಜನರಿಗೆ ಬಿಸ್ನೆಸ್, ನೌಕರಿ ಹಾಗೂ ವ್ಯಾಪಾರದಲ್ಲಿ ಬಂಪರ್ ಲಾಭ ಕಾದಿದೆ. (Spiritual News In Kannada)
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹ ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ರಾಶಿಯನ್ನು ಬದಲಾಯಿಸುವ ಮೂಲಕ ಇತರ ಗ್ರಹಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತವೆ. ಅಷ್ಟೇ ಅಲ್ಲ ಗ್ರಹಗಳ ಈ ಮೈತ್ರಿಯಿಂದ ಶುಭ ಹಾಗೂ ಅಶುಭ ಯೋಗಗಳು ಕೂಡ ರಚನೆಯಾಗುತ್ತವೆ. ಜನವರಿ ತಿಂಗಳಿನಲ್ಲಿಯೂ ಕೂಡ ಹಲವು ಗ್ರಹಗಳು ಮೈತ್ರಿಯನ್ನು ಮಾಡಿಕೊಡಿದ್ದು, ಫೆಬ್ರುವರಿ ತಿಂಗಳಿನಲ್ಲಿ ಶುಕ್ರ ಹಾಗೂ ಮಂಗಳನ ಮೈತ್ರಿ ನೆರವೇರುತ್ತಿದ್ದು, ಇದರಿಂದ ಮಕರ ರಾಶಿಯಲ್ಲಿ ಧನಶಕ್ತಿ ಯೋಗ ರಚನೆಯಾಗುತ್ತಿದೆ. ಈ ಯೋಗ ಕೆಲ ರಾಶಿಗಳ ಜನರಿಗೆ ವಿಶೇಷ ಲಾಭಗಳನ್ನು ತಂದುಕೊಡಲಿದೆ. (Spiritual News In Kannada)

 

ಇದನ್ನೂ ಓದಿ-Surya Meen Rashi Gochar 2024: ತನ್ನ ಸ್ನೇಹಿತನ ರಾಶಿಯಲ್ಲಿ ಗ್ರಹಗಳ ರಾಜನ ಗೋಚರ, ಈ ಜನರ ಮೇಲೆ ಭಾರಿ ಧನವೃಷ್ಟಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಜೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರುವರಿ 12 ರಂದು ಶುಕ್ರ ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಮಕರ ರಾಶಿಯಲ್ಲಿ ಈಗಾಗಲೇ ಮಂಗಳ ಇರುವ ಕಾರಣ, ಅಲ್ಲಿ ಧನಶಕ್ತಿ ಯೋಗ ರಚನೆಯಾಗುತ್ತಿದೆ. ಈ ಶುಭ ಯೋಗ ಮಾರ್ಚ್ 7, 2024 ರವರೆಗೆ ಇರಲಿದೆ. ಈ ಯೋಗ ನಿರ್ಮಾಣವಾಗುವುದರಿಂದ ಯಾವ ಅದೃಷ್ಟವಂತ ರಾಶಿಗಳಿಗೆ ಲಾಭವಾಗಲಿದೆ ತಿಳಿದುಕೊಳ್ಳೋಣ ಬನ್ನಿ,   

2 /5

ಮೇಷ ರಾಶಿ: ನಿಮ್ಮ ಜಾತಕದ ದಶಮ ಭಾವದಲ್ಲಿ ಈ ಮೈತ್ರಿ ನೆರವೇರುತ್ತಿದೆ. ಇದರಿಂದ ನಿಮಗೆ ಸಾಕಷ್ಟು ಪ್ರಸಿದ್ಧಿ, ಗುರುತಿನ ಜೊತೆಗೆ ಭಾರಿ ಸ್ಥಾನಮಾನ ಲಭಿಸಲಿದೆ. ಒಂದು ವೇಳೆ ನೀವು ಗಮನವನ್ನು ಕೇಂದ್ರೀಕರಿಸಿದರೆ ವೃತ್ತಿಯಲ್ಲಿ ನಿಮಗೆ ಅಪಾರ ಉನ್ನತಿಯ ಪ್ರಾಪ್ತಿಯಾಗುವ ಪ್ರಬಲಯೋಗವಿದೆ. ಆರ್ಥಿಕ ಸ್ಥಿತಿ ಭಾರಿ ಬಲವಾಗಲಿದೆ =. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಈ ಅವಧಿಯಲ್ಲಿ ನಿಮ್ಮ ವ್ಯವಹಾರದ ವಿಚಾರ ಉತ್ತಮವಾಗಿರಲಿದೆ. ಸಂಬಂಧಗಳಲ್ಲಿ ಸಕಾರಾತ್ಮಕ ಬದಲಾವಣೆಗಳಾಗಲಿವೆ. ಆರೋಗ್ಯದ ಕುರಿತು ಹೇಳುವುದಾದರೆ, ಆರೋಗ್ಯ ಉತ್ತಮವಾಗಿರಲಿದೆ.   

3 /5

ವೃಷಭ ರಾಶಿ: ನಿಮ್ಮ ಜಾತಕದ ನವಮ ಭಾವದಲ್ಲಿ ಈ ಮೈತ್ರಿ ನೆರವೇರುತ್ತಿದೆ. ಇದರಿಂದ ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ. ವೃತ್ತಿಯಲ್ಲಿ ಪ್ರಗತಿ ಸಾಧಿಸುವ ಅವಕಾಶಗಳು ಒದಗಿಬರಲಿವೆ. ಇದರಿಂದ ನೀವು ನಿಮ್ಮ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿವಿರಿ. ಹೊಶ ಅವಕಾಶಗಳು ನಿಮಗೆ ಪ್ರಾಪ್ತಿಯಾಗಲಿವೆ, ಹೊಸ ಬಿಸ್ನೆಸ್ ಆರಂಭಿಸಲು ಇದು ಸಕಾಲವಾಗಿದೆ. ವಿದೇಶ ಯಾತ್ರೆಯ ಸೌಭಾಗ್ಯ ಪ್ರಾಪ್ತಿಯಾಗಳಿವೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ನೀವು ಕೈಗೊಂಡ ಒಳ್ಳೆಯ ವಿತ್ತೀಯ ನಿರ್ಣಯದ ಲಾಭ ನಿಮಗೆ ಸಿಗಲಿದೆ. ಆರ್ಥಿಕ ಸ್ಥಿತಿ ಇದರಿಂದ ಸಾಕಷ್ಟು ಬಲಿಷ್ಠವಾಗಲಿದೆ. ಆರೋಗ್ಯಕ್ಕೆ ಸಂಬಂದಿಸಿದಂತೆ ಸ್ವಲ್ಪ ಎಚ್ಚರಿಕೆ ವಹಿಸಬೇಕಾಗಬಹುದು.   

4 /5

ಕನ್ಯಾ ರಾಶಿ: ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ಈ ಧನಶಕ್ತಿ ಯೋಗ ರಚನೆಯಾಗುತ್ತಿದ್ದು, ನಿಮಗೆ ಸಾಕಷ್ಟು ಒಳ್ಳೆಯ ಫಲಗಳನ್ನು ನೀಡಲಿದೆ. ಶುಕ್ರನಾ ಸ್ಥಿತಿ ನಿಮ್ಮ ಜೀವನದಲ್ಲಿ ಸಾಕಷ್ಟು ಖುಷಿಗಳನ್ನು ತುಂಬಲಿದೆ. ಆರ್ಥಿಕ ಸ್ಥಿತಿ ಗಟ್ಟಿಯಾಗಲಿದೆ ಮತ್ತು ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಜೀವನದಲ್ಲಿ ಸುಖ ಸಮೃದ್ಧಿ ಹೆಚ್ಚಾಗಲಿದೆ, ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಮಕ್ಕಳ ಕಡೆಯಿಂದಲೂ ಕೂಡ ಸಂತಸದ ಸುದ್ದಿ ಸಿಗಲಿದೆ. ಮಕ್ಕಳೊಂದಿಗೆ ಉತ್ತಮ ಕಾಲವನ್ನು ಕಳೆಯುವಿರಿ. ಆರೋಗ್ಯ ಉತ್ತಮವಾಗಿರಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)