ಐನೂರು ವರ್ಷಗಳ ಬಳಿಕ ನಾಲ್ಕು ರಾಜಯೋಗಗಳ ನಿರ್ಮಾಣ, ಅಶ್ವರ್ಯ ಲಕ್ಷ್ಮಿ ಕೃಪೆಯಿಂದ 2024ರಲ್ಲಿ ಈ ಜನರಿಗೆ ಕುಬೇರ ನಿಧಿ ಪ್ರಾಪ್ತಿ!

Four Auspicious Yogas 2023: ಈ ಬಾರಿಯ ದೀಪಾವಳಿಯಂದು ಗ್ರಹಗಳ ಅದ್ಭುತ ಸಂಯೋಜನೆಯಿಂದ 4 ರಾಜಯೋಗಗಳು ರೂಪುಗೊಳ್ಳುತ್ತಿವೆ. ಇದರಿಂದ ದೀಪಾವಳಿ ಬಳಿಕ 4 ರಾಶಿಯವರ ಅದೃಷ್ಟ ಖುಲಾಯಿಸಲಿದೆ. ನಿಜವಾಗಿ ದೀಪಾವಳಿಯಂದು ಶಶ ಮಹಾಪುರುಷ ರಾಜಯೋಗ, ಆಯುಷ್ಮಾನ್ ರಾಜಯೋಗ, ಗಜಕೇಸರಿ ರಾಜಯೋಗ ಮತ್ತು ಮಹಾಲಕ್ಷ್ಮಿ ರಾಜಯೋಗಗಳು ರೂಪುಗೊಳ್ಳುತ್ತಿವೆ. ದೀಪಾವಳಿಯ ನಂತರ, ಅದೃಷ್ಟವು 4 ರಾಶಿಗಳ ಜನರತ್ತ ಭಾರಿ ಒಲವು ತೋರಲು ಆರಂಭಿಸಲಿದೆ ಮತ್ತು 2024 ರಲ್ಲಿಯೂ ಸಹ, ಲಕ್ಷ್ಮಿ ದೇವಿಯು ಈ 4 ರಾಶಿಗಳ ಜನರ ಮೇಲೆ ತನ್ನ ಕೃಪಾದೃಷ್ಟಿ ಬೀರಲಿದ್ದಾಳೆ. (Spiritual News In Kannada)

ಬೆಂಗಳೂರು: ಸುಮಾರು ಐನೂರು ವರ್ಷಗಳ ಬಳಿಕ, ದೀಪಾವಳಿಯಂದು ಗ್ರಹಗಳ ಅತ್ಯಂತ ಅದ್ಭುತ ಸಂಯೋಜನೆ ನೆರವೇರುತ್ತಿದೆ. ವಾಸ್ತವದಲ್ಲಿ, ಈ ಬಾರಿ ದೀಪಾವಳಿಯಂದು ನಾಲ್ಕು ರಾಜಯೋಗಗಳು ರೂಪುಗೊಳ್ಳುತ್ತಿವೆ. ಈ ನಾಲ್ಕು ರಾಜಯೋಗಗಳು ನಾಲ್ಕು ರಾಶಿಗಳ ಜನರ ಪಾಲಿಗೆ ಅತ್ಯಂತ ಮಂಗಳಕರವೆಂದು ಸಾಬೀತಾಗಲಿವೆ. ಇದರಿಂದ 2024 ರಲ್ಲಿ, ನಾಲ್ಕು ರಾಶಿಗಳ ಜನರಿಗೆ ಸಾಕಷ್ಟು ಧನಪ್ರಾಪ್ತಿಯಾಗುವ ಸಂಕೇತಗಳಿವೆ, ಈ ರಾಶಿಯವರಿಗೆ ವಿದೇಶ ಪ್ರಯಾಣದ ಅವಕಾಶಗಳಿವೆ. (Spiritual News In Kannada)

 

ಇದನ್ನೂ ಓದಿ-ಇಂದು ನಿರ್ಮಾಣಗೊಂಡಿದೆ ಮಹಾಲಕ್ಷ್ಮೀ ಯೋಗ, ವಿಷ್ಣು ಪ್ರಿಯೆಯ ಕೃಪೆಯಿಂದ ಈ ಜನರಿಗೆ ಭಾರಿ ಧನ-ಐಶ್ವರ್ಯ ಪ್ರಾಪ್ತಿ !

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

1. ವಾಸ್ತವದಲ್ಲಿ, ಈ ಅವಧಿಯಲ್ಲಿ, ಶನಿಯು ತನ್ನ ಮೂಲ ತ್ರಿಕೋನ ರಾಶಿಯಾಗಿರುವ ಕುಂಭ ರಾಶಿಯಲ್ಲಿ ವಿರಾಜಮಾನನಾಗಿ ಶಶ ಮಹಾಪುರುಸ ರಾಜಯೋಗವನ್ನು ರಚಿಸಿದ್ದಾನೆ. ಇದೇ ವೇಳೆ, ಸೂರ್ಯ ಮತ್ತು ಮಂಗಳರು ತುಲಾ ರಾಶಿಯಲ್ಲಿ ಗೋಚರಿಸಿ, ಆಯುಷ್ಮಾನ್ ರಾಜಯೋಗ ನಿರ್ಮಿಸಿದ್ದಾರೆ. 

2 /7

2. ಇದಲ್ಲದೇ ಗುರು ಮತ್ತು ಚಂದ್ರರು ಪರಸ್ಪರ ಕೇಂದ್ರ ಸ್ಥಾನದಲ್ಲಿದ್ದು ಗಜಕೇಸರಿ ರಾಜಯೋಗವನ್ನು ರೂಪಿಸುತ್ತಿದ್ದಾರೆ. ಇದಲ್ಲದೇ ಚಂದ್ರ ಮತ್ತು ಮಂಗಳರು ತುಲಾ ರಾಶಿಯಲ್ಲಿರುವುದರಿಂದ ಮಹಾಲಕ್ಷ್ಮಿ ಯೋಗವು ರೂಪುಗೊಳ್ಳುತ್ತಿದೆ. ಹಾಗಾದರೆ ಬನ್ನಿ  2024 ರ ವರ್ಷವು ಯಾವ ಯಾವ ರಾಶಿಗಳ ಜನರಿಗೆ ಸಾಕಷ್ಟು ಅದೃಷ್ಟ ಹೊತ್ತು ತರಲಿದೆ ತಿಳಿದುಕೊಳ್ಳೋನ.

3 /7

3. ಮೇಷ ರಾಶಿ: ದೀಪಾವಳಿಯ ನಂತರ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಆದಾಯ ದ್ವಿಗುಣಗೊಳ್ಳುತ್ತದೆ. ಅಲ್ಲದೆ, ನೀವು 2024 ರಲ್ಲಿ ವಿದೇಶಕ್ಕೆ ಹೋಗುವ ಅವಕಾಶವನ್ನು ಪಡೆಯಬಹುದು. ನೀವು ವಿದೇಶದಿಂದ ಉತ್ತಮ ಆದಾಯವನ್ನು ಗಳಿಸುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಉದ್ಯಮಿಗಳು ದೀರ್ಘಾವಧಿಯಿಂದ ಯತ್ನಿಸುತ್ತಿರುವ ಕೆಲವು ವಿಶೇಷ ಒಪ್ಪಂದಗಳು ನೆರವೇರುವ ಸಾಧ್ಯತೆ ಇದೆ. ಇದಲ್ಲದೆ, ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ, ಇದರಿಂದಾಗಿ ನೀವು ಹಲವಾರು ಕಾರ್ಯಗಳನ್ನು ಒಂದರ ನಂತರ ಒಂದರಂತೆ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ. ಇದಲ್ಲದೆ, ನಿಮ್ಮ ಹಳೆಯ ಸ್ನೇಹಿತರಿಂದಲೂ ನೀವು ಲಾಭವನ್ನು ಪಡೆಯುವಿರಿ.

4 /7

4. ಮಿಥುನ ರಾಶಿ: ಮಿಥುನ ರಾಶಿಯವರಿಗೆ ದೀಪಾವಳಿಯ ನಂತರ ಶುಭಕಾಲ ಆರಂಭವಾಗಲಿದೆ. ಈ ಅವಧಿಯಲ್ಲಿ ನೀವು ಹಿಂದೆ ಅನುಭವಿಸಿದ ಆರ್ಥಿಕ ನಷ್ಟವು ತುಂಬಿಬರಲಿದೆ. 2024 ರಲ್ಲಿ, ನಿಮಗಾಗಿ ಇತರ ಆದಾಯದ ಮೂಲಗಳು ಕೂಡ ತೆರೆದುಕೊಳ್ಳಲಿವೆ. ಅಲ್ಲದೆ, ನೀವು 2024 ರಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಪಡೆಯಬಹುದು. ವ್ಯಾಪಾರ ಮಾಡುವ ಜನರು ತಮ್ಮದೇ ಆದ ಹೊಸ ವ್ಯವಹಾರವನ್ನು ಸಹ ಪ್ರಾರಂಭಿಸಬಹುದು. ಇದರಲ್ಲಿ ನೀವು ನಿಮ್ಮ ಕುಟುಂಬದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಅಷ್ಟೇ ಅಲ್ಲ, ಈ ಅವಧಿಯಲ್ಲಿ ಮಾಡಿದ ಕೆಲಸದಲ್ಲಿ ನಿಮಗೆ ಭಾರಿ ಯಶಸ್ಸು ಸಿಗುವ ನಿರೀಕ್ಷೆ ಇದೆ.

5 /7

5. ಮಕರ ರಾಶಿ: ಮಕರ ರಾಶಿಯ ಜನರು ದೀಪಾವಳಿಯ ನಂತರ ಭಾರಿ ಅದೃಷ್ಟದ ಬೆಂಬಲ ಪಡೆಯಲಿದ್ದಾರೆ. ಇದಲ್ಲದೆ, ಮಕರ ರಾಶಿಯವರಿಗೆ ಆಕಸ್ಮಿಕ ಧನ ಲಾಭದ ಸಾಧ್ಯತೆಗಳಿವೆ. ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳನ್ನು ನೀವು ಪಡೆಯುವಿರಿ. ಈ ಅವಧಿಯಲ್ಲಿ, ನೀವು ಸಮಾಜದಲ್ಲಿ ಗೌರವವನ್ನು ತರುವ ಕೆಲವು ಕೆಲಸಗಳನ್ನು ಮಾಡುವಿರಿ ಮತ್ತು ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಇದರಿಂದ ಹೆಚ್ಚಾಗಲಿದೆ. 

6 /7

6. ತುಲಾ ರಾಶಿ: ತುಲಾ ರಾಶಿಯ ಜನರು 2024 ರಲ್ಲಿ ಸರ್ಕಾರಿ ಕ್ಷೇತ್ರಗಳಿಂದ ಪ್ರಯೋಜನಗಳನ್ನು ಪಡೆಯುತ್ತಾರೆ. ಸರ್ಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ನಿಮ್ಮ ಯಾವುದೇ ಕೆಲಸವು ನನೆಗುದಿಗೆ ಬಿದ್ದಿದ್ದರೆ, ದೀಪಾವಳಿಯ ನಂತರ ಅದು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಅಲ್ಲದೆ, ಸರ್ಕಾರಿ ಕ್ಷೇತ್ರಗಳಿಗೆ ಸಂಬಂಧಿಸಿದ ಜನರು ಸ್ಥಾನ, ಪ್ರತಿಷ್ಠೆ ಇತ್ಯಾದಿಗಳ ಪ್ರಯೋಜನಗಳನ್ನು ಪಡೆಯುತ್ತಾರೆ. ಇದಲ್ಲದೆ, ನಿಮ್ಮ ವೈವಾಹಿಕ ಜೀವನವೂ ಅದ್ಭುತವಾಗಿರುತ್ತದೆ. ನಿಮ್ಮ ಸಂಬಂಧದಲ್ಲಿ ನೀವು ಹೊಂದಿದ್ದ ಎಲ್ಲಾ ಕಲಹಗಳು ಅಂತ್ಯವಾಗಲಿವೆ. ಒಟ್ಟಾರೆಯಾಗಿ, 2024 ವರ್ಷವು ನಿಮ್ಮ ವೃತ್ತಿಜೀವನಕ್ಕೆ ತುಂಬಾ ಅದೃಷ್ಟಶಾಲಿಯಾಗಿದೆ. 

7 /7

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)