ಇನ್ನೆರಡು ವಾರಗಳಲ್ಲಿ ಈ ರಾಶಿಯವರಿಗೆ ಗುರು ದೆಸೆ! ಆಗುವುದು ಭಾಗ್ಯೋದಯ

ಏಪ್ರಿಲ್ 27 ರಂದು ಆಗುವ ಗುರು ಉದಯ ಯಾವ ರಾಶಿಯವರಿಗೆ ಅದೃಷ್ಟ ನೋಡೋಣ. 

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಗುರುವು ಪ್ರಸ್ತುತ ಮೀನ ರಾಶಿಯಲ್ಲಿದೆ. ಇದೀಗ 12 ವರ್ಷಗಳ ನಂತರ ಗುರು ತನ್ನ ರಾಶಿಯನ್ನು ತೊರೆದು, ಮೇಷ ರಾಶಿಗೆ ಪ್ರವೇಶಿಸಲಿದೆ. ಏಪ್ರಿಲ್ 22, 2023 ರಂದು ಗುರು ಸಂಕ್ರಮಣವಾಗಲಿದೆ. ಇದಾದ ಐದು ದಿನಗಳ ಬಳಿಕ ಅಂದರೆ  ಏಪ್ರಿಲ್ 27 ರಂದು ಗುರು ಮೇಷ ರಾಶಿಯಲ್ಲಿ ಉದಯಿಸುತ್ತಾನೆ. ಈ ಸಮಯದಲ್ಲಿ, ಗುರುವು ಮೀನ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿರುತ್ತಾನೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಯಾರದ್ದೇ ಜಾತಕದಲ್ಲಿ ಗುರುವು ಮಂಗಳಕರ ಸ್ಥಾನದಲ್ಲಿದ್ದರೆ, ವ್ಯಕ್ತಿಯು ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸು ಮತ್ತು ಸಂತೋಷವನ್ನು ಪಡೆಯುತ್ತಾನೆ.  ದಾಂಪತ್ಯ ಜೀವನವೂ ಸುಖಮಯವಾಗಿರುತ್ತದೆ. ಏಪ್ರಿಲ್ 27 ರಂದು ಆಗುವ ಗುರು ಉದಯ ಯಾವ ರಾಶಿಯವರಿಗೆ ಅದೃಷ್ಟ ನೋಡೋಣ. 

2 /5

ಮೇಷ ರಾಶಿ : ಏಪ್ರಿಲ್ 27, 2023 ರಂದು, ಮೇಷ ರಾಶಿಯಲ್ಲಿ ಗುರುಗ್ರಹದ ಉದಯವು ಈ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ವಿದೇಶಕ್ಕೆ ಹೋಗುವ ಅವಕಾಶ ಒದಗಿ ಬರಲಿದೆ. ವೃತ್ತಿ ಜೀವನದಲ್ಲಿ ದೊಡ್ಡ ಸಾಧನೆ ಮಾಡಬಹುದು. ಬಡ್ತಿ, ವೇತನ ಹೆಚ್ಚಳಕ್ಕೆ ಬಲವಾದ ಅವಕಾಶಗಳು ಸಿಗುವುದು. ನೀವು ಮಾಡುವ ಕೆಲಸಕ್ಕೆ ಎಲ್ಲೆಡೆ ಪ್ರಶಂಸೆ ಸಿಗುವುದು. ವ್ಯಾಪಾರದಲ್ಲಿಯೂ ಲಾಭವಾಗಲಿದೆ. 

3 /5

ಮಿಥುನ ರಾಶಿ : ಮಿಥುನ ರಾಶಿಯವರಿಗೆ ಗುರು ಆರ್ಥಿಕ ಲಾಭವನ್ನು  ಕರುಣಿಸಲಿದ್ದಾನೆ. ಹೊಸ ಉದ್ಯೋಗಾವಕಾಶಗಳು ಸಿಗಬಹುದು. ಪ್ರಸ್ತುತ ಇರುವ ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆ ಹೆಚ್ಚು. ನಿಮ್ಮ ಆದಾಯ ಹೆಚ್ಚಾಗಬಹುದು. ಪೂರ್ವಿಕರ ಆಸತಿ ಕೈ ಸೇರುವ ಸಾಧ್ಯತೆ ಇದೆ. 

4 /5

ಸಿಂಹ ರಾಶಿ : ಗುರುಗ್ರಹದ ಉದಯವು ಸಿಂಹ ರಾಶಿಯವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭವನ್ನು ನೀಡುತ್ತದೆ. ನೀವು ನಿರೀಕ್ಷಿಸುವ ರೀತಿಯಲ್ಲಿಯೇ  ಹೊಸ ಕೆಲಸಕ್ಕೆ ಸೇರಬಹುದು.  ಯಾವ ಮೂಲದಿಂದಲಾದರೂ ಇದ್ದಕ್ಕಿದ್ದಂತೆ ಹಣ ಸಿಗುತ್ತದೆ.   

5 /5

ಕುಂಭ ರಾಶಿ : ಗುರುಗ್ರಹದ ಉದಯ ಕುಂಭ ರಾಶಿಯವರಿಗೆ ಬಹಳಷ್ಟು ಲಾಭದಾಯಕವಾಗಿರಲಿದೆ. ಈ ರಾಶಿಯವರ ಜಾತಕದಲ್ಲಿ  ಶನಿ ಸಾಡೇ ಸಾತಿ ನಡೆಯುತ್ತಿದೆ. ಈ ರಾಶಿಯವರು ಶನಿಯ ಬಾಧೆಗಳಿಂದ ಪರಿಹಾರ  ಪಡೆಯುತ್ತಾರೆ. ಹೊಸ ಉದ್ಯೋಗಾವಕಾಶಗಳು ಸಿಗಬಹುದು.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)