Gold Price Today, 19 February 2021: ಚಿನ್ನದ ಬೆಲೆಯಲ್ಲಿ ರೂ.10,200 ರಷ್ಟು ಇಳಿಕೆ, ಸರಾಫ್ ಬಜಾರ್ ನ ಇಂದಿನ ಬೆಲೆ ಏನು?

Gold Price Today, 19 February 2021: ಇಂದು ಸರಾಫ್ ಬಜಾರ್ ನಲ್ಲಿ ಚಿನ್ನದ ಬೆಲೆ 46 ಸಾವಿರಕ್ಕಿಂತ ಕೆಳಕ್ಕೆ ಜಾರಿದೆ. ಗುರುವಾರ MCX ನಲ್ಲಿ ದಿನದ ವಹಿವಾಟಿನ ಕೊನೆಯ ಗಳಿಗೆಯಲ್ಲಿ ಚಿನ್ನದ ಮಾರಾಟ ವೇಗ ಪಡೆದುಕೊಂಡ ಕಾರಣ ಬೆಲೆಯಲ್ಲಿ ಮೃದುತ್ವ ಬಂದಿದೆ.

ನವದೆಹಲಿ: Gold, Silver Rate Update, 19 February 2021: ಪ್ರಸ್ತುತ ಚಿನ್ನದಲ್ಲಿ ಹೂಡಿಕೆ ಮಾಡಲು ಬಯಸುವವರ ಅದೃಷ್ಟ ಚಿನ್ನದಂತೆ ಹೊಳೆಯಲಿದೆ. ಏಕೆಂದರೆ ಕಳೆದ ಆರು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆಯಾಗುತ್ತಿದೆ. ಇಂದು ಚಿನ್ನದ ಬೆಲೆ 46 ಸಾವಿರಕ್ಕೂ ಕೆಳಕ್ಕೆ ಜಾರಿದೆ. ನಿನ್ನೆ ಮಾರುಕಟ್ಟೆ ಬಂದ್ ಆದಾಗ ಚಿನ್ನದ ಬೆಲೆ (Gold Rate Today)ಯಲ್ಲಿ ರೂ.100ರಷ್ಟು ಇಳಿಕೆಯಾಗಿ ಪ್ರತಿ 10 ಗ್ರಾಂ.ಗೆ 46,126ಕ್ಕೆ ಬಂದು ತಲುಪಿತ್ತು. ಇನ್ನೊಂದೆಡೆ ಬೆಳ್ಳಿ ಬೆಲೆಯೂ ಕೂಡ ಕಳೆದ ಒಂದು ವಾರದಲ್ಲಿ ಸುಮಾರು 2500 ರೂ.ಗಳವರೆಗೆ ಕುಸಿದಿದೆ.

 

ಇದನ್ನೂ ಓದಿ-Traders Strike On 26 February: ಹಾಲು-ತರಕಾರಿ ಖರೀದಿಸಿ ಇಟ್ಟುಕೊಳ್ಳಿ, ಈ ದಿನ ಚಕ್ಕಾ ಜಾಮ್ ನಡೆಸಲಾಗುತ್ತಿದೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /7

ಫೆಬ್ರುವರಿ ತಿಂಗಳಿನಲ್ಲಿ ಇದುವರೆಗೆ 2400 ರಷ್ಟು ಕುಸಿದ ಚಿನ್ನದ ಬೆಲೆ : ಫೆಬ್ರುವರಿ 1, 2021ರಂದು ಅಂದರೆ, ಬಜೆಟ್ ಮಂಡನೆಯಾದ ಬಳಿಕ MCX ನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾ.ಗೆ 48,394ರಷ್ಟಿತ್ತು. ಆದರೆ, ಇಂದು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ.ಗೆ  45,995ಕ್ಕೆ ತಲುಪಿದೆ. ಅಂದರೆ, ಕೇವಲ 19 ದಿನಗಳ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ ಸುಮಾರು 2400 ರೂ.ಗಳಷ್ಟು ಇಳಿಕೆಯಾಗಿದೆ. ಈ ವರ್ಷದ ಆರಂಭಕ್ಕೆ ಚಿನ್ನದ ಬೆಲೆಯನ್ನು ಹೋಲಿಸುವುದಾದರೆ, ಇದುವರೆಗೆ ಚಿನ್ನದ ಬೆಲೆಯಲ್ಲಿ ಸುಮಾರು 4200 ರಷ್ಟು ಇಳಿಕೆಯಾಗಿದೆ.

2 /7

9 ತಿಂಗಳಲ್ಲಿ ದಾಖಲೆಯ ಕೆಳಮಟ್ಟಕ್ಕೆ ತಲುಪಿದ ಚಿನ್ನದ ಬೆಲೆ : ಮಾರುಕಟ್ಟೆಯ ತಜ್ಞರು ಹೇಳುವುದನ್ನು ನಂಬುವುದಾದರೆ, ಚಿನ್ನ ಮತ್ತು ಬೆಳ್ಳಿ ಖರೀದಿಗೆ ಇದು ಸುವರ್ಣಾವಕಾಶವಾಗಿದೆ. ಏಕೆಂದರೆ ಚಿನ್ನದ ಬೆಲೆ 46 ಸಾವಿರಕ್ಕಿಂತಲೂ ಕೆಳಕ್ಕೆ ಜಾರಿದೆ. MCX ನಲ್ಲಿ ಮೇ 2020 ರೆ ಲೆವಲ್ ಗೆ ಬಂದು ಚಿನ್ನದ ಬೆಲೆ ನಿಂತಿದೆ. ವರ್ಷದ ಆರಂಭದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ.ಗೆ 60,000ರ ಗಡಿ ದಾಟಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ ಶಾರ್ಟ್ ಟರ್ಮ್ ಗಾಗಿ ಚಿನ್ನದ ಬೆಲೆಯ ಕುರಿತು ಗೂಳಿ ಓಟದ ಹೇಳಿಕೆ ನೀಡುವುದರಿಂದ ತಜ್ಞರು ಹಿಂದಕ್ಕೆ ಸರಿಯುತ್ತಿದ್ದಾರೆ.

3 /7

MCX Gold: ಗುರುವಾರ MCX ನಲ್ಲಿ ಚಿನ್ನ ಗುರುವಾರ ವಾಯಿದಾ ಮಾರುಕಟ್ಟೆಯಲ್ಲಿ 100 ರೂ.ಗಳಷ್ಟು ತಗ್ಗಿದೆ. ಇಂದು ಅತ್ಯಂತ ಅಲ್ಪಾವಧಿಯ ಅಂತರದಲ್ಲಿ ವಹಿವಾಟು ನಿರೀಕ್ಸಿಸಲಾಗುತ್ತಿದೆ. ಕಳೆದ ವಾರದ ತುಲನೆಯಲ್ಲಿ ಇದುವರೆಗೆ ಚಿನ್ನ ಸತತ 6 ಸೆಶನ್ ಗಳ ಕುಸಿತ ಕಂಡಿದೆ.

4 /7

ದಾಖಲೆಯ ಗರಿಷ್ಠ ಮಟ್ಟದಿಂದ ರೂ.10,200 ರಷ್ಟು ಇಳಿಕೆಯಾದ ಚಿನ್ನ : ಕೊರೊನಾ ಸಂಕಷ್ಟದ ಹಿನ್ನೆಲೆ ವಿಶ್ವಾದ್ಯಂತ ಎಲ್ಲ ಮಾರುಕತ್ತೆಗೆಳು ಬಂದ್ ಇದ್ದ ಕಾರಣ ಚಿನ್ನದ ಹೂಡಿಕೆಯಲ್ಲಿ ಹೂಡಿಕೆದಾರರು ಭಾರಿ ಆಸಕ್ತಿ ತೋರಿದ ಕಾರಣ ಆಗಸ್ಟ್, 2020 ರಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ ತನ್ನ ಗರಿಷ್ಠ ಮಟ್ಟ ಅಂದರೆ ರೂ.56,191ಕ್ಕೆ ತಲುಪಿತ್ತು. ಕಳೆದ ವರ್ಷ ಚಿನ್ನ ಸುಮಾರು ಶೇ.43 ರಷ್ಟು ಆದಾಯ ನೀಡಿತ್ತು. ಇಂದಿನ ಬೆಲೆಯನ್ನು ಈ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಶೇ.18 ರಷ್ಟು ಕುಸಿದಿದೆ. ಅಂದರೆ, ಕಳೆದ ವರ್ಷದ ಆಗಸ್ಟ್ ನಿಂದ ಇದುವರೆಗೆ ಚಿನ್ನದ ಬೆಲೆಯಲ್ಲಿ ರೂ.10,200 ರಷ್ಟು ಇಳಿಕೆಯಾಗಿದೆ.

5 /7

ಈ ವಾರ ಚಿನ್ನದ ನಡೆ ಇಂತಿದೆ:  (MCX ಎಪ್ರಿಲ್ ವಾಯಿದಾ ಮಾರುಕಟ್ಟೆ ಮುಕ್ತಾಯ): ಸೊಮವಾರ - 47241, ಮಂಗಳವಾರ-46899, ಬುಧವಾರ- 46, 237, ಗುರುವಾರ - 46,126, ಶುಕ್ರವಾರ - 45, 995 (ವಹಿವಾಟು ಮುಂದುವರೆದಿದೆ)

6 /7

ಕಳೆದ ವಾರದಲ್ಲಿ ಚಿನ್ನದ ನಡೆ ಹೇಗಿತ್ತು?: ಸೋಮವಾರ - ರೂ. 47839/10 ಗ್ರಾಂ, ಮಂಗಳವಾರ - ರೂ. 47948/10 ಗ್ರಾಂ, ಬುಧವಾರ - ರೂ. 48013/10 ಗ್ರಾಂ, ಗುರುವಾರ - ರೂ.47508/10 ಗ್ರಾಂ, ಶುಕ್ರವಾರ - ರೂ. 47318/10 ಗ್ರಾಂ.

7 /7

MCX Silver: ಇಂದು ಬೆಳ್ಳಿಯ ನಡೆ ಕೂಡ ವೇಗ ಕಳೆದುಕೊಂಡಿದೆ. MCX ನಲ್ಲಿ ಬೆಳ್ಳಿಯ ಬೆಲೆ ಮಾರ್ಚ್ ವಾಯಿದಾ ಮಾರುಕಟ್ಟೆಯಲ್ಲಿ ರೂ.850 ಪ್ರತಿ ಕಿಲೋಗೆ ಇಳಿಕೆಯಾಗಿದೆ. ಅಂದರೆ, ಬೆಳ್ಳಿ ಪ್ರತಿ ಕೆ.ಜಿಗೆ ರೂ.68000ಗಳ ಮೇಲೆ ತನ್ನ ವಹಿವಾಗು ಮುಂದುವರೆಸಿದೆ. ಕಳೆದ ಎರಡೇ ದಿನಗಳಲ್ಲಿ ಬೆಳ್ಳಿ ಬೆಲೆ ಸುಮಾರು 1500 ರೂ.ಗಳಷ್ಟು ಇಳಿಕೆಯಾಗಿದೆ. ಬಜೆಟ್ ಮಂಡನೆಯಾದ ದಿನ ಬೆಳ್ಳಿ ಬೆಲೆ ಮಾರ್ಚ್ ವಾಯಿದಾ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ರೂ.73, 666 ಕ್ಕೆ ತನ್ನ ದಿನದ ವಹಿವಾಟು ಅಂತ್ಯಗೊಳಿಸಿತ್ತು. ಆ ಮಟ್ಟದಿಂದ ಇದುವರೆಗೆ ಬೆಳ್ಳಿ ಬೆಲೆ ರೂ.6000 ರಷ್ಟು ಕುಸಿದಿದೆ.