Investment In Digital Gold - ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡುವ ಮೊದಲು ಈ ಪೇಚು ತಿಳಿದುಕೊಳ್ಳಿ

Investment In Digital Gold - ಇತ್ತೀಚಿಗೆ ಡಿಜಿಟಲ್ ಗೋಲ್ಡ್ ನಲ್ಲಿನ ಹೂಡಿಕೆ ಮೊದಲಿನ ತುಲನೆಯಲ್ಲಿ ಅನೇಕ ಪಟ್ಟು ಹೆಚ್ಚಾಗಿದೆ ಏಕೆಂದರೆ ಜನರು ಇದರಲ್ಲಿ ಉತ್ತಮ ಲಾಭವನ್ನು ಪಡೆಯುತ್ತಿದ್ದಾರೆ. 

Written by - Nitin Tabib | Last Updated : Feb 17, 2021, 09:18 PM IST
  • ಇತ್ತೀಚಿಗೆ ಡಿಜಿಟಲ್ ಚಿನ್ನದಲ್ಲಿ ಹೂಡಿಕೆಗೆ ಜನರು ಹೆಚ್ಚು ಒಲವು ತೋರುತ್ತಿದ್ದಾರೆ.
  • ಇದೊಂದು ಸುರಕ್ಷಿತ, ವಂಚನೆ ರಹಿತ ಹೂಡಿಕೆಯಾಗಿದೆ.
  • ಆದರೆ ಇದರಲ್ಲಿ ಹೂಡಿಕೆ ಮಾಡುವ ಮೊದಲು ಇದರಲ್ಲಿನ ರಿಸ್ಕ್ ತಿಳಿದುಕೊಳ್ಳುವುದು ತುಂಬಾ ಮುಖ್ಯ.
Investment In Digital Gold - ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡುವ ಮೊದಲು ಈ ಪೇಚು ತಿಳಿದುಕೊಳ್ಳಿ title=
Investment In Digital Gold (File Photo)

ನವದೆಹಲಿ: Investment In Digital Gold - ಇತ್ತೀಚಿಗೆ ಡಿಜಿಟಲ್ ಗೋಲ್ಡ್ ನಲ್ಲಿನ ಹೂಡಿಕೆ ಮೊದಲಿನ ತುಲನೆಯಲ್ಲಿ ಅನೇಕ ಪಟ್ಟು ಹೆಚ್ಚಾಗಿದೆ ಏಕೆಂದರೆ ಜನರು ಇದರಲ್ಲಿ ಉತ್ತಮ ಲಾಭವನ್ನು ಪಡೆಯುತ್ತಿದ್ದಾರೆ. ಚಿನ್ನದಲ್ಲಿ ಹೂಡಿಕೆ ಮಾಡಲು ಹಲವು ಆಯ್ಕೆಗಳಿವೆ, ಆದರೆ ಅತ್ಯಂತ ಜನಪ್ರಿಯವಾದದ್ದು ಡಿಜಿಟಲ್ ಚಿನ್ನ. ಚಿನ್ನದ ವ್ಯಾಪಾರಿಗಳು, ಡೀಲರ್ ಗಳಿಂದ ಹಿಡಿದು ಹಲವು ವೇದಿಕೆಗಳಲ್ಲಿ ಡಿಜಿಟಲ್ ಚಿನ್ನವನ್ನು ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ ವ್ಯಾಲೆಟ್ ಸೇವೆ ಒದಗಿಸುವ ಪೇಟಿಎಂ, ಅಮೆಜಾನ್ ಪೇ ನಂತಹ ಪ್ಲಾಟ್ ಫಾರ್ಮ್ ಗಳು ಸೇರಿದಂತೆ ಹೂಡಿಕೆಯ ಪ್ಲಾಟ್ ಫಾರ್ಮ್ ಗಳಾಗಿರುವ ಕುವೆರಾ,  ಗ್ರೋ ಹಾಗೂ ಸ್ಟಾಕ್ ಬ್ರೋಕರ್ ಗಳು ಶಾಮೀಲಾಗಿದ್ದಾರೆ.

ಪ್ರಸ್ತುತ ಮೂರು ಕಂಪನಿಗಳು ಡಿಜಿಟಲ್ ಗೋಲ್ಡ್ ಆಫರ್ ಮಾಡುತ್ತವೆ. ಇವುಗಳಲ್ಲಿ ಆಗಮೆಂಟ್ ಗೋಲ್ಡ್, MMTC ಪಂಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಡಿಜಿಟಲ್ ಗೋಲ್ಡ್ ಇಂಡಿಯಾಗಳು ಶಾಮೀಲಾಗಿವೆ.

ಆದರೆ, ಅತ್ಯಂತ ಸುಲಭವಾಗಿ ಡಿಜಿಟಲ್ ಗೋಲ್ಡ್ (Digital Gold) ನಲ್ಲಿ ಹೂಡಿಕೆ ಮಾಡಬಹುದು. ಈ ಹೂಡಿಕೆ ಮಾಡುವ ಮೂಲಕ ನಿಮಗೆ ಶುದ್ಧ ಚಿನ್ನದ ಖಾತರಿ ಸಿಗುತ್ತದೆ ಮತ್ತು ನೀವು ವಂಚನೆಯಿಂದ ಕೂಡ ಪಾರಾಗಬಹುದು. ಅಷ್ಟೇ ಅಲ್ಲ ಹಣ ತೆಗೆದುಕೊಂಡು ಆಭರಣ ವ್ಯಾಪಾರಿಗಳ ಬಳಿ ಹೋಗುವ ಅವಶ್ಯಕತೆ ಇಲ್ಲ. ಇದಲ್ಲದೆ ನೀವು ಯಾವಾಗ ಬೇಕಾದರೂ ಕೂಡ ಈ ಡಿಜಿಟಲ್ ಚಿನ್ನವನ್ನು ಮಾರಾಟ ಮಾಡಿ ನಿಮ್ಮ ಹಣವನ್ನು ಮರಳಿ ಪಡೆಯಬಹುದು.

ಇದನ್ನೂ ಓದಿ- ಕೇವಲ 1 ರೂಪಾಯಿಗೆ ಖರೀದಿಸಿ 24 ಕ್ಯಾರೆಟ್ ಶುದ್ಧ ಚಿನ್ನ, ನೂತನ ಸ್ಕೀಂ ಬಗ್ಗೆ ಇಲ್ಲಿದೆ ಮಾಹಿತಿ

ಒಂದು ವೇಳೆ ನೀವೂ ಕೂಡ ಡಿಜಿಟಲ್ ಚಿನ್ನದಲ್ಲಿ ಹಣ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಇಂತಹ ಹೂಡಿಕೆಯ ಪೆಚುಗಳನ್ನು ಸಹ ತಿಳಿದುಕೊಳ್ಳುವುದು ತುಂಬಾ ಅವಶ್ಯಕವಾಗಿದೆ. ನೀವು ಡಿಜಿಟಲ್ ಗೋಲ್ಡ್ ಖರೀದಿಸಿದಾಗ, ನೀವು ಶೇ.3 ರಷ್ಟು GST ಪಾವತಿಸಬೇಕು. ಇಷ್ಟೇ ಪ್ರಮಾಣದ ಹಣವನ್ನು ನೀವು ಮಾರಾಟಗಾರರ ಬಳಿ ಹೋಗಿ ಖರೀದಿಸಿದರೂ ಕೂಡ ಪಾವತಿಸಬೇಕು. ಅಂದರೆ ಒಂದು ವೇಳೆ ನೀವು ಒಂದು ಸಾವಿರ ರೂ. ಬೆಲೆಯ ಡಿಜಿಟಲ್ ಚಿನ್ನವನ್ನು ಖರೀದಿಸಿದರೆ, ನಿಮಗೆ ಕೇವಲ ರೂ.970 ಬೆಲೆಯ ಚಿನ್ನ ಮಾತ್ರ ಸಿಗುತ್ತದೆ ಹಾಗೂ ಉಳಿತ ಮೊತ್ತವನ್ನು GST ರೂಪದಲ್ಲಿ ಕಡಿತಗೊಳಿಸಲಾಗುತ್ತದೆ (ಅಂದರೆ ಇದು ಖರೀದಿಯಿಂದ ಹಿಡಿದು ಮಾರಾಟ ಮಾಡುವ ನಡುವಿನ ಅಂತರವಾಗಿರುತ್ತದೆ)

ಇದನ್ನೂ ಓದಿ-Gold Rate : ಚಿನ್ನ ಖರೀದಿಗೆ ಇದು ಚಿನ್ನದಂಥಹ ಸಮಯವೇ..? ತಿಳಿದುಕೊಳ್ಳಿ ಉತ್ತರ.!

ಆದರೆ, ಒಂದೊಮ್ಮೆ ನೀವು ಖರೀದಿಸಿದ ಚಿನ್ನವನ್ನು ಮಾರಾಟ ಮಾಡಲು ಹೋದರೆ, ಉದಾಹರಣೆಗೆ ಒಂದು ವೇಳೆ ನೀವು ಖರಿದಿಸಿದ ಡಿಜಿಟಲ್ ಚಿನ್ನವನ್ನು ಒಂದು ವರ್ಷದ ಬಳಿಕ ಮಾರಾಟ ಮಾಡಲು ಹೋದರೆ, ಒಂದು ವರ್ಷದ ಬಳಿಕ ಮಾರುಕಟ್ಟೆಯಲ್ಲಿರುವ ಚಿನ್ನದ ಬೆಲೆಗೆ ಅದನ್ನು ನೀವು ಮಾರಾಟ ಮಾಡಬೇಕು. ಮಾರಾಟದ ಅವಧಿಯಲ್ಲೂ ಕೂಡ ನೀವು ಮತ್ತೆ ಶೇ.3 ರಷ್ಟು GST ಪಾವತಿಸಬೇಕು.

ಇದನ್ನೂ ಓದಿ-Gold Price: ಆಭರಣ ಪ್ರಿಯರಿಗೊಂದು ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ₹ 2,086 ಇಳಿಕೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News