Traders Strike On 26 February: ಹಾಲು-ತರಕಾರಿ ಖರೀದಿಸಿ ಇಟ್ಟುಕೊಳ್ಳಿ, ಈ ದಿನ ಚಕ್ಕಾ ಜಾಮ್ ನಡೆಸಲಾಗುತ್ತಿದೆ

Market Closed On 26 Feb 2021 - ಸರಕು ಮತ್ತು ಸೇವಾ ತೆರಿಗೆ (GST) ನಿಬಂಧನೆಗಳನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಭಾರತ್ ಬಂದ್ ಕರೆ ನೀಡಿದ್ದರಿಂದ ಫೆಬ್ರವರಿ 26 ರಂದು ದೇಶಾದ್ಯಂತ ಎಲ್ಲಾ ವಾಣಿಜ್ಯ ಮಾರುಕಟ್ಟೆಗಳು ಬಂದ್ ಇರಲಿವೆ ಎಂದು ವ್ಯಾಪಾರಿಗಳ ಉನ್ನತ ಸಂಸ್ಥೆಯಾದ CAIT ಗುರುವಾರ ತಿಳಿಸಿದೆ.

Written by - Nitin Tabib | Last Updated : Feb 19, 2021, 10:57 AM IST
  • ಫೆಬ್ರುವರಿ 26ರಂದು ದೇಶಾದ್ಯಂತ ಮಾರ್ಕೆಟ್ ಬಂದ್ ಗೆ ಕರೆ ನೀಡಿದ CAIT
  • ಫೆ.26 ರಂದು ಚಕ್ಕಾ ಜಾಮ್ ನಡೆಸಿ ಬಂದ್ ಗೆ ಬೆಂಬಲ ಎಂದ AITWA.
  • ದೇಶಾದ್ಯಂತ 40 ಸಾವಿರಕ್ಕೂ ಹೆಚ್ಚು ವ್ಯಾಪಾರಿ ಸಂಘಟನೆಗಳ ಬೆಂಬಲ.
Traders Strike On 26 February: ಹಾಲು-ತರಕಾರಿ ಖರೀದಿಸಿ ಇಟ್ಟುಕೊಳ್ಳಿ, ಈ ದಿನ ಚಕ್ಕಾ ಜಾಮ್ ನಡೆಸಲಾಗುತ್ತಿದೆ title=
Traders Strike On 26 February

Market Closed On 26 Feb 2021 - ಸರಕು ಮತ್ತು ಸೇವಾ ತೆರಿಗೆ (GST) ನಿಬಂಧನೆಗಳನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಭಾರತ್ ಬಂದ್ ಕರೆ ನೀಡಿದ್ದರಿಂದ ಫೆಬ್ರವರಿ 26 ರಂದು ದೇಶಾದ್ಯಂತ ಎಲ್ಲಾ ವಾಣಿಜ್ಯ ಮಾರುಕಟ್ಟೆಗಳು ಬಂದ್ ಇರಲಿವೆ ಎಂದು ವ್ಯಾಪಾರಿಗಳ ಉನ್ನತ ಸಂಸ್ಥೆಯಾದ CAIT ಗುರುವಾರ ತಿಳಿಸಿದೆ. ಸರಕು ಮತ್ತು ಸೇವಾ ತೆರಿಗೆಯ ಕಟ್ಟುನಿಟ್ಟಿನ ನಿಬಂಧನೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಜಿಎಸ್ಟಿ (GST) ಕೌನ್ಸಿಲ್ಗೆ ಒತ್ತಾಯಿಸಿ ಫೆಬ್ರವರಿ 26 ರಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ದೇಶಾದ್ಯಂತ 1500 ಸ್ಥಳಗಳಲ್ಲಿ ಧರಣಿ ನಡೆಸಲಿದೆ ಎಂದು ಎಂದು ಹೇಳಿದೆ.

ಜಿಎಸ್ಟಿ ವ್ಯವಸ್ಥೆಯನ್ನು ಸರಳೀಕೃತಗೊಳಿಸಲು ಮತ್ತು ಹೆಚ್ಚು ತರ್ಕಬದ್ಧಗೊಳಿಸಲು, ತೆರಿಗೆ ವ್ಯವಸ್ಥೆ ಮತ್ತು ತೆರಿಗೆ ಚಪ್ಪಡಿ (TAX SLAB)ಗಳನ್ನು ಮರುಪರಿಶೀಲಿಸುವಂತೆ ಸಂಸ್ಥೆ ಒತ್ತಾಯಿಸಿದೆ. ಇದರಿಂದಾಗಿ ಸಾಮಾನ್ಯ ಉದ್ಯಮಿ ಕೂಡ ಜಿಎಸ್ಟಿ ನಿಬಂಧನೆಗಳನ್ನು ಸುಲಭವಾಗಿ ಸ್ವೀಕರಿಸಬಹುದು. ಈ ವಿಷಯದಲ್ಲಿ ಸಂಸ್ಥೆ ಸರ್ಕಾರದೊಂದಿಗೆ ಮಾತನಾಡುತ್ತಿದೆ ಎಂದು CAIT ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ತಿಳಿಸಿದ್ದಾರೆ. 'ಆಲ್ ಇಂಡಿಯಾ ಟ್ರಾನ್ಸ್‌ಪೋರ್ಟರ್ಸ್ ವೆಲ್ಫೇರ್ ಅಸೋಸಿಯೇಶನ್ (AITWA) ಭಾರತ್ ಬಂದ್‌ಗಾಗಿ CAIT ಕರೆ ನೀಡಿರುವುದನ್ನು ಬೆಂಬಲಿಸಿದೆ ಮತ್ತು ಫೆಬ್ರವರಿ 26 ರಂದು ಚಕ್ಕಾ ಜಾಮ್ ನಡೆಸಲಾಗುವುದು ಎಂದು ಹೇಳಿದೆ.

ಇದನ್ನೂ ಓದಿ-Investment In Digital Gold - ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡುವ ಮೊದಲು ಈ ಪೇಚು ತಿಳಿದುಕೊಳ್ಳಿ

40 ಸಾವಿರಕ್ಕೂ ಹೆಚ್ಚು ವ್ಯಾಪಾರಿ ಸಂಘಟನೆಗಳ ಬೆಂಬಲ
'ಫೆಬ್ರವರಿ 26 ರಂದು, ದೇಶಾದ್ಯಂತದ ಎಲ್ಲಾ ಮಾರುಕಟ್ಟೆಗಳನ್ನು ಬಂದ್ ಮಾಡಲಾಗುವುದು ಮತ್ತು ಎಲ್ಲಾ ರಾಜ್ಯಗಳ ವಿವಿಧ ನಗರಗಳಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು' ಎಂದು ಖಂಡೇಲ್ವಾಲ್ ಹೇಳಿದ್ದಾರೆ. 'ದೇಶಾದ್ಯಂತ ಸುಮಾರು 40 ಸಾವಿರಕ್ಕೂ ಹೆಚ್ಚು ವ್ಯಾಪಾರಿಸಂಘಟನೆಗಳು CAIT ಅನ್ನು ಬೆಂಬಲಿಸಿವೆ ಮತ್ತು GSTಯ ಸರಳೀಕೃತ ವ್ಯವಸ್ಥೆ ರಚಿಸುವ ಅಗತ್ಯವಿದೆ, ಇದರಿಂದ ಸಾಮಾನ್ಯ ಉದ್ಯಮಿ ಕೂಡ ಜಿಎಸ್ಟಿ ನಿಬಂಧನೆಗಳನ್ನು ಸುಲಭವಾಗಿ ಅನುಸರಿಸಬಹುದು' ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-SBI Alert : ಇದು ಭಾರೀ `ಮೋಸದ ಜಾಲ', ಬಿಟ್ಟು ಬಿಡಿ ದುರಾಸೆಯ ಫಟಾಫಟ್ ಸಾಲ..!

ಸ್ವಯಂಪ್ರೇರಿತ ಅನುಸರಣೆ (Voluntary compliance) ಯಶಸ್ವಿ ಜಿಎಸ್ಟಿ ವ್ಯವಸ್ಥೆಗೆ  ಪ್ರಮುಖವಾಗಿದೆ. 4 ವರ್ಷಗಳಲ್ಲಿ ಜಿಎಸ್‌ಟಿ ಕಾನೂನಿನಲ್ಲಿ ಇದುವರೆಗೆ ಸುಮಾರು 950 ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ಖಂಡೇಲ್ವಾಲ್ ಹೇಳಿದ್ದಾರೆ. ಜಿಎಸ್ಟಿ ಪೋರ್ಟಲ್ (GST PORTAL) ನಲ್ಲಿನ ತಾಂತ್ರಿಕ ನ್ಯೂನತೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಹೆಚ್ಚುತ್ತಿರುವ ಅನುಸರಣೆ ಹೊರೆಗಳು ಪ್ರಸ್ತುತ ಜಾರಿಯಲ್ಲಿರುವ ವ್ಯವಸ್ಥೆಯ ಮುಖ್ಯ ನ್ಯೂನತೆಗಳಾಗಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Petrol-Diesel ಬಗ್ಗೆ ಮಹತ್ವದ ಸೂಚನೆ ನೀಡಿದ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News