Long Hair Tips: ಉದ್ದ ಮತ್ತು ದಪ್ಪನೆಯ ಕೂದಲನ್ನು ಹೊಂದುವುದು ಪ್ರತಿ ಮಹಿಳೆಯ ಬಯಕೆ.. ಆದರೆ ಜಂಜಾಟದ ಜೀವನದಲ್ಲಿ ಅದಕ್ಕೆಲ್ಲಾ ಸಮಯವೇ ಇಲ್ಲದಂತಾಗಿದೆ.. ದಷ್ಟ ಪುಷ್ಟವಾಗಿ ಕೂದಲು ಬೆಳೆಯುವಂತೆ ಮಾಡಲು ಅನೇಕ ನೈಸರ್ಗಿಕ ಪರಿಹಾರಗಳು ಲಭ್ಯವಿವೆ.. ಅವುಗಳನ್ನು ಮಾಡಲು ಹೆಚ್ಚಿನ ಸಮಯ, ಹಣ, ಬೇಕಾಗುವುದಿಲ್ಲ.. ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಉದ್ದ ಮತ್ತು ದಪ್ಪವಾದ ಕೇಶಕಾಂತಿಯನ್ನು ಪಡೆಯುಬಹುದು..
ಕಳಪೆ ಜೀವನಶೈಲಿ, ಆಹಾರ ಪದ್ದತಿ, ರಾಸಾಯನಿಕ ಉತ್ಪನ್ನಗಳ ಬಳಕೆ. ಮಾಲಿನ್ಯ, ಹೀಗೆ ಹತ್ತು ಹಲವಾರು ಕಾರಣಗಳಿಂದ ಕೂದಲು ಉದುರುವಿಕೆಗೆ ಒಳಗಾಗುತ್ತವೆ.. ಕೂದಲಿನ ಎಲ್ಲಾ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರಗಳೇ ಸೂಕ್ತ.
ಅಲೋವೆರಾ: ಕೂದಲು ಉದುರುವಿಕೆಯನ್ನು ನಿಯಂತ್ರಿಸಿ ಉದ್ದ ಮತ್ತು ದಪ್ಪನೆಯ ಕೇಶವನ್ನು ಹೊಂದುವುದಕ್ಕಾಗಿ ಅಲೋವೆರಾ ಉತ್ತಮ ನೈಸರ್ಗಿಕ ಪರಿಹಾರವಾಗಿದೆ. ಈ ಅಲೋವೆರಾ ಜೆಲ್ನ್ನು ಕೂದಲಿನ ಬುಡಕ್ಕೆ ಹಚ್ಚಿ ಒಂದು ಗಂಟೆ ಬಿಟ್ಟು ತೊಳೆಯಿರಿ.. ಇದರಿಂದ ನಿಮ್ಮ ಕೂದಲು ಉದುರುವುದು ನಿಸ್ಸಂದೇಹವಾಗಿ ಕಡಿಮೆಯಾಗುತ್ತದೆ.
ತ್ರಿಪಲ: ತ್ರಿಪಲದಲ್ಲಿರುವ ಉತ್ತಮ ಪದಾರ್ಥಗಳು ಹಾನಿಗೊಳಗಾದ ಕೂದಲನ್ನು ಸರಿಪಡಿಸಿ, ತಲೆಹೊಟ್ಟನ್ನು ಕಡಿಮೆ ಮಾಡುತ್ತದೆ.. ಈ ತ್ರಿಪಲಾ ಪುಡಿಯನ್ನು ತಂಗಿನ ಎಣ್ಣೆಯೊಂದಿಗೆ ತಲೆಗೆ ಹಚ್ಚಿಕೊಂಡರೆ ಕೂದಲು ಉದ್ದ ಮತ್ತು ದಪ್ಪವಾಗಿ ಬೆಳೆಯುತ್ತವೆ.
ಬ್ರಾಹ್ಮಿ: ಈ ಅದ್ಭುತ ಸಸ್ಯವು ನಿಮಮ್ ಕೂದಲಿಗೆ ಶಕ್ತಿಯನ್ನು ನೀಡುವುದಲ್ಲದೇ ನಿಮ್ಮ ಮಾನಸಿಕ ಒತ್ತಡವನ್ನು ನಿವಾರಿಸಿ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.. ಕೂದಲು ಉದುರುವುದು, ತಲೆಹೊಟ್ಟು, ಸೀಳು ತುದಿ ಹೀಗೆ ಕೂದಲಿನ ಹತ್ತು ಹಲವಾರು ಸಮಸ್ಯೆಗಳಿಗೆ ಬ್ರಾಹ್ಮಿ ನೈಸರ್ಗಿಕ ಪರಿಹಾರವಾಗಿದೆ..
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.