ವಿದೇಶಿ ಕನ್ಯೆ ಕೈ ಹಿಡಿದ ಹಂಪಿ ಆಟೋ ಚಾಲಕ : ಅನಂತನ ಪ್ರಾಮಾಣಿಕತೆಗೆ ಕೆಮಿಲ್‌ ಫಿದಾ..!

ಆಟೋ ಚಾಲಕನೊಬ್ಬ ವಿದೇಶಿ ಕನ್ಯೆ ಜೊತೆ ಸಪ್ತಪದಿ ತುಳಿದ ಅಪರೂಪದ ಘಟನೆ ವಿಶ್ವ ಪ್ರಸಿದ್ದ ಹಂಪಿಯಲ್ಲಿ ಜರುಗಿದೆ. ಈ ಜೋಡಿ ಭಾರತೀಯ ಸಂಪ್ರದಾಯದಂತೆ ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ಸಪ್ತಪದಿ ತುಳಿದರು. 

ವಿಜಯನಗರ : ಆಟೋ ಚಾಲಕನೊಬ್ಬ ವಿದೇಶಿ ಕನ್ಯೆ ಜೊತೆ ಸಪ್ತಪದಿ ತುಳಿದ ಅಪರೂಪದ ಘಟನೆ ವಿಶ್ವ ಪ್ರಸಿದ್ದ ಹಂಪಿಯಲ್ಲಿ ಜರುಗಿದೆ. ಈ ಜೋಡಿ ಭಾರತೀಯ ಸಂಪ್ರದಾಯದಂತೆ ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ಸಪ್ತಪದಿ ತುಳಿದರು. 

1 /4

ಕೊರೊನಾ ಮಹಾಮಾರಿ ಇವರ ಪ್ರೇಮ ವಿವಾಹಕ್ಕೆ ಅಡ್ಡಿ ಆಗಿತ್ತು. ಹಿಂದೂ ಸಂಪ್ರದಾಯದಂತೆ ಹಂಪಿಯಲ್ಲೇ ನಿನ್ನೆ ಸಂಜೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ ಇಂದು ಬೆಳಗ್ಗೆ 8:30 ರಿಂದ 9:30ರ ಕುಂಭ ಲಗ್ನ ಶುಭ ಮುಹೂರ್ತದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ.

2 /4

ಜೀಪ್ ಫಿಲಿಪ್ಪೆ ದಂಪತಿಗಳ ತೃತೀಯ ಪುತ್ರಿ ಕೆಮಿಲ್ ಮತ್ತು ಹಂಪಿ ಜನತಾ ಪ್ಲಾಟ್ ನಿವಾಸಿ ದಿ. ಅಂಜಿನಪ್ಪ ಅವರ ಜೇಷ್ಠ ಪುತ್ರ ಅನಂತರಾಜು ಜೊತೆ ಮೂರು ವರ್ಷದ ಹಿಂದೆಯೇ ಮದುವೆ ಆಗ್ಬೇಕಿತ್ತು.

3 /4

ನಾಲ್ಕೈದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ. ಆಟೋ ಚಾಲಕನಾಗಿ ಅನಂತರಾಜು ಕೆಲಸ ಮಾಡುತ್ತಿದ್ದಾರೆ. ಬೆಲ್ಜಿಯಂ ಕನ್ಯೆ ಕೆಮಿಲ್ ಸೋಷಿಯಲ್ ವರ್ಕರ್ ಆಗಿದ್ದಾರೆ. ಹಂಪಿ ವೀಕ್ಷಣೆಗೆ ಬಂದಿದ್ದ ಕೆಮಿಲ್ ಕುಟುಂಬ ಅನಂತರಾಜು ಪ್ರಾಮಾಣಿಕತೆಗೆ ಮನಸೋತಿದ್ದರು. 

4 /4

ಇಂದು ಬೆಳಗಿನ ಜಾವ 9.25 ರ ಕುಂಭ ಲಗ್ನದ ಶುಭಮುಹೂರ್ತದಲ್ಲಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅನಂತರಾಜು ವಿದೇಶಿ ಕನ್ಯೆ ಕೆಮಿಲ್ ಕೈ ಹಿಡಿದರು.