Amazing Health benefits Of Banana: ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಬಾಳೆಹಣ್ಣು ವಿಟಮಿನ್ B6ನ ಉತ್ತಮ ಮೂಲವಾಗಿದ್ದು, ಇದು ನಮ್ಮ ದೇಹಕ್ಕೆ ಪ್ರತಿದಿನ ಬೇಕಾಗುತ್ತದೆ.
Amazing Health benefits Of Banana: ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಬಾಳೆಹಣ್ಣು ವಿಟಮಿನ್ B6ನ ಉತ್ತಮ ಮೂಲವಾಗಿದ್ದು, ಇದು ನಮ್ಮ ದೇಹಕ್ಕೆ ಪ್ರತಿದಿನ ಬೇಕಾಗುತ್ತದೆ. ಬಾಳೆಹಣ್ಣು ತಿನ್ನುವುದರಿಂದ ಅಗತ್ಯ ವಿಟಮಿನ್ನಲ್ಲಿ ಶೇ.25ರಷ್ಟನ್ನು ಪಡೆಯಬಹುದು. ಬಾಳೆಹಣ್ಣು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯುತ್ತೀರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಬಾಳೆಹಣ್ಣು ವಿಟಮಿನ್ B6ನ ಉತ್ತಮ ಮೂಲವಾಗಿದ್ದು, ಇದು ನಮ್ಮ ದೇಹಕ್ಕೆ ಪ್ರತಿದಿನ ಬೇಕಾಗುತ್ತದೆ. ಬಾಳೆಹಣ್ಣು ತಿನ್ನುವುದರಿಂದ ಅಗತ್ಯ ವಿಟಮಿನ್ನಲ್ಲಿ ಶೇ.25ರಷ್ಟನ್ನು ಪಡೆಯಬಹುದು. ಬಾಳೆಹಣ್ಣು ಸೇವನೆಯು ಹೃದ್ರೋಗದಿಂದ ಹಿಡಿದು ಅನೇಕ ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ನಿಯಮಿತವಾಗಿ ಬಾಳೆಹಣ್ಣನ್ನು ತಿನ್ನುವುದರಿಂದ ಶೇ.10ರಷ್ಟು ಪೊಟ್ಯಾಸಿಯಮ್, ವಿಟಮಿನ್ C ಮತ್ತು ಮ್ಯಾಂಗನೀಸ್ ಪಡೆಯುತ್ತೀರಿ. ಬಾಳೆಹಣ್ಣು ನೈಸರ್ಗಿಕವಾಗಿ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಮುಕ್ತವಾಗಿದೆ. ಬಾಳೆಹಣ್ಣು ಜೈವಿಕ ಸಕ್ರಿಯ ಸಂಯುಕ್ತಗಳಾದ ಕ್ಯಾರೊಟಿನಾಯ್ಡ್ಗಳು ಮತ್ತು ಫ್ಲೇವನಾಯ್ಡ್ಗಳನ್ನು ಹೊಂದಿರುತ್ತವೆ. ಇವು ಕಣ್ಣುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಒಂದು ಬಾಳೆಹಣ್ಣು 110 ಕ್ಯಾಲೋರಿಗಳು, 30 ಗ್ರಾಂ ಕಾರ್ಬೋಹೈಡ್ರೇಟ್, 3 ಗ್ರಾಂ ಫೈಬರ್ ಹೊಂದಿರುತ್ತದೆ. ಬಾಳೆಹಣ್ಣಿನಲ್ಲಿರುವ ನಾರಿನಂಶವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ. ಇದು ಜೀರ್ಣಕಾರಿ ಆರೋಗ್ಯಕ್ಕೆ ಒಳ್ಳೆಯದು. ಇದು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಹ ನಿಯಂತ್ರಿಸುತ್ತದೆ.
ಬಾಳೆಹಣ್ಣು ಪೊಟ್ಯಾಸಿಯಮ್ನ ಉತ್ತಮ ಮೂಲವಾಗಿದೆ. 1 ಬಾಳೆಹಣ್ಣು 422 ಮಿಗ್ರಾಂ ಪೊಟ್ಯಾಸಿಯಮ್ ಹೊಂದಿರುತ್ತದೆ ಮತ್ತು ಇದು ಸೋಡಿಯಂ ಮುಕ್ತವಾಗಿದೆ. ಪೊಟ್ಯಾಸಿಯಮ್ ಸಮೃದ್ಧವಾಗಿರುವ ಆಹಾರ ಸೇವಿಸಿದರೆ ರಕ್ತದೊತ್ತಡ ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ದೈನಂದಿನ ಪೊಟ್ಯಾಸಿಯಮ್ನ ಶೇ.10ರಷ್ಟು ಪೂರೈಸುತ್ತದೆ.
ಬಾಳೆಹಣ್ಣು ಸೇವನೆಯಿಂದ ನಿಮ್ಮ ಮೂಡ್ ಚೆನ್ನಾಗಿರುತ್ತದೆ. ಬಾಳೆಹಣ್ಣಿನಲ್ಲಿರುವ ವಿಟಮಿನ್ B6 ನರಪ್ರೇಕ್ಷಕಗಳಾದ ಸಿರೊಟೋನಿನ್ ಮತ್ತು ಡೋಪಮೈನ್ ಹೆಚ್ಚಿಸಲು ಸಹಕಾರಿ. ಇದು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ. ವಿಟಮಿನ್ B6 ಕೊರತೆಯಿದ್ದರೆ ಖಿನ್ನತೆಯ ಅಪಾಯವನ್ನು ಹೆಚ್ಚಿಸುತ್ತದೆ. ಬಾಳೆಹಣ್ಣಿನ ಸೇವನೆಯಿಂದ ಇದನ್ನು ನಿವಾರಿಸಬಹುದು.