Banana side effects: ಹೆಚ್ಚು ಬಾಳೆಹಣ್ಣು ಸೇವಿಸಿದ್ರೆ ಏನಾಗುತ್ತೆ ಗೊತ್ತಾ..?

Side effects of bananas: ಕಿಡ್ನಿ ಸಂಬಂಧಿ ಸಮಸ್ಯೆಗಳಿದ್ದಲ್ಲಿ ಪೊಟ್ಯಾಶಿಯಂ ಅಧಿಕವಾಗಿರುವ ಆಹಾರ  ಸೇವಿಸದಂತೆ ವೈದ್ಯರು ಸಲಹೆ ನೀಡುತ್ತಾರೆ. ಹೀಗಾಗಿ ಇಂತಹವರು ಬಾಳೆಹಣ್ಣಿನಿಂದ ದೂರವಿರಬೇಕು.

Banana side effects: ‘ಅತಿಯಾದರೆ ಅಮೃತವೂ ವಿಷ’ ಎಂಬ ಗಾದೆ ಮಾತೇ ಇದೆ. ಅದರಂತೆ ಬಾಳೆಹಣ್ಣು ಹೆಚ್ಚು ತಿಂದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಬಾಳೆಹಣ್ಣಿನಲ್ಲಿ ಸುಮಾರು 100 ಕ್ಯಾಲೋರಿಗಳಿವೆ. ದಿನಕ್ಕೆ 2ಕ್ಕಿಂತ ಹೆಚ್ಚು ಬಾಳೆಹಣ್ಣು ತಿಂದರೆ ತೂಕ ಬೇಗ ಹೆಚ್ಚುತ್ತದೆ. ನಿಯಮಿತವಾಗಿ ಬಾಳೆಹಣ್ಣು ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಆದರೆ ಹೆಚ್ಚಿನ ಪ್ರಮಾಣದ ಬಾಳೆಹಣ್ಣಿ ಸೇವಿಸುವುದು ಆರೋಗ್ಯದೆ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ಹೆಚ್ಚು ಬಾಳೆಹಣ್ಣು ಸೇವಿಸುವುದರ ದುಷ್ಪರಿಣಾಮ ಏನು ಅನ್ನೋದರ ಬಗ್ಗೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಬಾಳೆಹಣ್ಣಿ ಪೊಟ್ಯಾಶಿಯಂ ಪ್ರಮಾಣ ಹೆಚ್ಚಿದೆ. ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಪೊಟ್ಯಾಸಿಯಂ ಸೇವಿಸುವುದರಿಂದ ತಲೆತಿರುಗುವಿಕೆ, ವಾಂತಿ ಮತ್ತು ನಾಡಿ ಬಡಿತ ಹೆಚ್ಚಾಗುತ್ತದೆ. ಕೆಲವೊಮ್ಮೆ ಇದು ಹೃದಯಾಘಾತಕ್ಕೂ ಕಾರಣವಾಗುತ್ತದೆ.

2 /5

ಅತಿಹೆಚ್ಚು ಬಾಳೆಹಣ್ಣು ಸೇವಿಸುವುದರಿಂದ ಹಲ್ಲು ಕೊಳೆಯಬಹುದು ಎಂದು ಅನೇಕ ಅಧ್ಯಯನಗಳು ತಿಳಿಸಿವೆ. ಬಾಳೆಹಣ್ಣು ಪಿಷ್ಟವನ್ನು ಹೊಂದಿದ್ದು, ಇದು ಸುಲಭವಾಗಿ ಹಲ್ಲುಗಳ ನಡುವೆ ಅಂಟಿಕೊಳ್ಳುತ್ತದೆ. ಹೀಗಾಗಿ ಬಾಳೆಹಣ್ಣು ತಿಂದ 2 ಗಂಟೆಯೊಳಗೆ ಹಲ್ಲು ಉಜ್ಜಬೇಕು.

3 /5

ಬಾಳೆಹಣ್ಣಿನಲ್ಲಿ ವಿಟಮಿನ್ B6 ಸಮೃದ್ಧವಾಗಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ನರಗಳಿಗೆ ಹಾನಿಯಾಗುತ್ತದೆ. ಹೆಚ್ಚು ಬಾಳೆಹಣ್ಣು ಸೇವಿಸುವುದರಿಂದ ಫ್ರಕ್ಟೋಸ್‌ನಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು.  

4 /5

ಬಾಳೆಹಣ್ಣಿನಲ್ಲಿ ಪಿಷ್ಟ ಹೆಚ್ಚಾಗಿರುತ್ತದೆ. ಪ್ರತಿನಿತ್ಯ ಇದನ್ನು ಸೇವಿಸುವುದರಿಂದ ಗ್ಯಾಸ್, ಹೊಟ್ಟೆನೋವು ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಉಂಟಾಗುತ್ತವೆ.

5 /5

ಬಾಳೆಹಣ್ಣಿನಲ್ಲಿ ಫೈಬರ್​ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಗೆ ಒಳ್ಳೆಯದು. ಕಡಿಮೆ ನೀರನ್ನು ಹೊಂದಿರುತ್ತದೆ. ಆದರೆ ಅತಿಯಾಗಿ ತಿನ್ನುವುದರಿಂದ ಮಲಬದ್ಧತೆ ಉಂಟಾಗುತ್ತದೆ.