Health Benefits of Eggs: ಮೊಟ್ಟೆ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳು

Health Benefits of Eggs: ಯಾವುದೇ ಒಬ್ಬ ವ್ಯಕ್ತಿ 6 ವಾರಗಳ ತನಕ ದಿನಕ್ಕೆ 2 ಮೊಟ್ಟೆಗಳನ್ನು ಸೇವಿಸುತ್ತಾ ಬಂದರೆ ಆತನ ರಕ್ತದಲ್ಲಿ ಸುಮಾರು ಶೇ.10ರಷ್ಟು HDL ಅಂಶ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

Health Benefits of Eggs: ಮೊಟ್ಟೆ ಅಂದ್ರೆ ಯಾರಿಗ್ ತಾನೇ ಇಷ್ಟ ಇಲ್ಲ ಹೇಳಿ. ಮೊಟ್ಟೆ ಅನೇಕರ ಫೇವರಿಟ್ ಫುಡ್ ಆಗಿರುತ್ತದೆ. ತಿನ್ನಲು ರುಚಿಕರವಾಗಿರುವ ಈ ಮೊಟ್ಟೆ ದೇಹಕ್ಕೆ ಹಲವಾರು ಆರೋಗ್ಯಕರ ಪ್ರಯೋಜನ ನೀಡುತ್ತದೆ. ಮೊಟ್ಟೆಯಲ್ಲಿ ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಹೇರಳವಾಗಿದೆ. ಮೊಟ್ಟೆಗಳು ಪ್ರೋಟೀನ್, ಅಮೈನೋ ಆಮ್ಲಗಳು, ಜೀವಸತ್ವಗಳು ಮತ್ತು ಕಬ್ಬಿಣದ ಉತ್ತಮ ಮೂಲವಾಗಿವೆ. ಮೊಟ್ಟೆ ಸೇವನೆಯ ಪ್ರಯೋಜನಗಳ ಬಗ್ಗೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮೊಟ್ಟೆಗಳು ಕೇವಲ ಬಾಯಿ ರುಚಿಗೆ ಮಾತ್ರವಲ್ಲದೆ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿವಿಧ ಬಗೆಯ ವಿಟಮಿನ್‍ಗಳು ಮತ್ತು ಪೌಷ್ಟಿಕ ಸತ್ವಗಳ ಮೂಲಗಳಿಂದ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿವೆ.

2 /5

ಮೊಟ್ಟೆಗಳು ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಮೊಟ್ಟೆಗಳಲ್ಲಿ ಮನುಷ್ಯನ ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿರುವ ಅಪರ್ಯಾಪ್ತ ಕೊಬ್ಬಿನ ಅಂಶಗಳು ಮತ್ತು ಬಹು ಮುಖ್ಯ ಪೌಷ್ಟಿಕಾಂಶಗಳಾದ ವಿಟಮಿನ್ B6, B12 ಮತ್ತು ವಿಟಮಿನ್ ‘D’ ಅಂಶಗಳಿವೆ.  

3 /5

ಮೊಟ್ಟೆಯು ರಂಜಕ, ವಿಟಮಿನ್ A, B, D, E ಮತ್ತು ಕಬ್ಬಿಣದಂತಹ ಜೀವಸತ್ವಗಳನ್ನು ಹೊಂದಿರುತ್ತವೆ. ಒಂದು ಮೊಟ್ಟೆಯಲ್ಲಿ 6 ಗ್ರಾಂ ಪ್ರೋಟೀನ್ ದೊರೆಯುತ್ತದೆ. ಮೊಟ್ಟೆಯು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ.

4 /5

ಮೊಟ್ಟೆಗಳನ್ನು ತಿನ್ನುವುದು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಮೊಟ್ಟೆಯಲ್ಲಿರುವ ಒಮೆಗಾ 3-ಕೊಬ್ಬಿನ ಆಮ್ಲಗಳು ಹೃದಯಕ್ಕೆ ಪ್ರಯೋಜನಕಾರಿ. ಅವು ಬೀಟೈನ್ ಮತ್ತು ಕೋಲಿನ್ ಹೊಂದಿರುತ್ತದೆ, ಇದು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.

5 /5

ಮೊಟ್ಟೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ವಿಟಮಿನ್ 'A' ಅಂಶ ಹೆಚ್ಚಾಗಿದ್ದು, ಕಣ್ಣಿನ ಆರೋಗ್ಯಕ್ಕೆ ಸಹಕಾರಿಯಾಗಿದೆ. ಮೊಟ್ಟೆಯ ಹಳದಿ ಭಾಗದಲ್ಲಿ ಯಥೇಚ್ಛವಾಗಿ ಕಣ್ಣಿನ ಆರೋಗ್ಯಕ್ಕೆ ಬೇಕಾಗಿರುವ ಲ್ಯೂಟೀನ್ ಮತ್ತು ಝೆಕ್ಸನ್ಥಿನ್ ಎಂಬ ಆಂಟಿ-ಆಕ್ಸಿಡೆಂಟ್ ಅಂಶಗಳನ್ನು ಹೊಂದಿದೆ.