Health Tips: ಆಯುಷ್‌ ಪದ್ಧತಿ ಬಳಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ

Immunity Booster Kashaya: 1/2 ಚಮಚ ಅಶ್ವಗಂಧ ಪುಡಿಯನ್ನು ಜೇನುತುಪ್ಪ ಅಥವಾ ಬಿಸಿ ಹಾಲಿನೊಂದಿಗೆ ದಿನಕ್ಕೆ ಒಂದು ಬಾರಿ ಸೇವಿಸಬೇಕು. ನಿಯಮಿತವಾಗಿ ಈ ಕಷಾಯ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

Boost your Immunity through Ayush: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇಂದು ರೋಗ ನಿರೋಧಕ ಶಕ್ತಿಯ ಕೊರತೆಯಿಂದ ಅನೇಕರು ಬಳಲುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್‌ ಇಲಾಖೆ ಕೆಲವು ಕಷಾಯಗಳನ್ನು ಸೇವಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಲು ಕ್ವಾಥ ಅಥವಾ ಜೋಶಾಂದಾ ಕಷಾಯ, ಅಶ್ವಗಂಧ ಅಥವಾ ಅಸ್ಗಂದ್‌ ಕಷಾಯ ಹಾಗೂ ಅರ್ಕ್-ಎ-ಅಜೀಬ್‌ ಕಷಾಯ ಸೇವಿಸುವಂತೆ ಸಲಹೆ ನೀಡಿದೆ. ಈ ಕಷಾಯಗಳನ್ನು ತಯಾರಿಸುವುದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕ್ವಾಥ ಅಥವಾ ಜೋಶಾಂದಾ ಕಷಾಯ ಉತ್ತಮ ಆಯ್ಕೆಯಾಗಿದೆ. ಈ ಕಷಾಯ ತಯಾರಿಸಲು ಬೇಕಾಗುವ ಸಾಮಗ್ರಿಗಳ ಬಗ್ಗೆ ಇಲ್ಲಿದೆ ಮಾಹಿತಿ... ಒಣಗಿದ ತುಳಸಿ ಎಲೆ - 4 ಭಾಗ ದಾಲ್ಚಿನ್ನಿ    - 2 ಭಾಗ ಒಣಶುಂಠಿ - 2 ಭಾಗ ಕರಿಮೆಣಸು - 1 ಭಾಗ

2 /4

ಮೇಲಿನ ನಾಲ್ಕು ಪದಾರ್ಥಗಳನ್ನು ಚೆನ್ನಾಗಿ ಪುಡಿಮಾಡಿ ಗಾಜಿನ ಬಾಟಲಿಯಲ್ಲಿ ಶೇಖರಿಸಿಕೊಳ್ಳಬೇಕು. 1/4 ಚಮಚ ಕಷಾಯದ ಪುಡಿಯನ್ನು 150 ಮಿಲಿ ನೀರಿನಲ್ಲಿ 5-10 ನಿಮಿಷ ಕುದಿಸಿ ಸೋಸಿ ದಿನಕ್ಕೆ 1 ಬಾರಿ ಕುಡಿಯಬೇಕು. ಅಗತ್ಯವಿದ್ದಲ್ಲಿ ಬೆಲ್ಲ, ಲಿಂಬೆರಸ ಅಥವಾ ಒಣದ್ರಾಕ್ಷಿಯನ್ನು ಬೆರೆಸಬಹುದು.

3 /4

1/2 ಚಮಚ ಅಶ್ವಗಂಧ ಪುಡಿಯನ್ನು ಜೇನುತುಪ್ಪ ಅಥವಾ ಬಿಸಿ ಹಾಲಿನೊಂದಿಗೆ ದಿನಕ್ಕೆ ಒಂದು ಬಾರಿ ಸೇವಿಸಬೇಕು. ನಿಯಮಿತವಾಗಿ ಈ ಕಷಾಯ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

4 /4

ಇದರ 2-3 ಹನಿಗಳನ್ನು ಟಿಶ್ಯು ಪೇಪರ್‌ ಅಥವಾ ಕರವಸ್ತ್ರಕ್ಕೆ ಹಾಕಿ ಆಗಾಗ ವಾಸನೆಯನ್ನು ತೆಗೆದುಕೊಳ್ಳಬೇಕು. ಕುದಿಯುವ ನೀರಿಗೆ 2 ಹನಿ ಹಾಕಿ ಆವಿಯನ್ನು ತೆಗೆದುಕೊಳ್ಳಬೇಕು.