Health Tips: ಯಾವ ಸಮಯದಲ್ಲಿ ಕಾಫಿ ಕುಡಿಯುವುದು ಆರೋಗ್ಯಕ್ಕೆ ಉತ್ತಮ..?

Side effects of coffee: ಖಾಲಿ ಹೊಟ್ಟೆಯಲ್ಲಿರುವಾಗ ದೇಹದಲ್ಲಿ ಕಾರ್ಟಿಸೋಲ್ ಪ್ರಮಾಣ ಹೆಚ್ಚಾಗಿರುತ್ತದೆ. ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆ ನಿರ್ವಹಿಸುವಲ್ಲಿ ಕಾರ್ಟಿಸೋಲ್ ಕಾರಣವಾಗುತ್ತದೆ. ಕಾರ್ಟಿಸೋಲ್ ಉತ್ಪಾದನೆಗೆ ಕಾಫಿಯಲ್ಲಿರುವ ಕೆಫೀನ್ ಅಡ್ಡಿಪಡಿಸುತ್ತದೆ.

ನವದೆಹಲಿ: ಕಾಫಿ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರೂ ಬೆಳ್ಳಂಬೆಳಗ್ಗೆ ಕಾಫಿ ರುಚಿ ನೋಡಲು ಹೊತೊರೆಯುತ್ತಾರೆ. ಒಂದು ಕಪ್ ಕಾಫಿಯು ದಿನದ ಎಲ್ಲಾ ಆಯಾಸವನ್ನು ದೂರವಿರಿಸುತ್ತದೆ. ಕಾಫಿ ಸೇವನೆಯು ಉತ್ತಮ ಶಕ್ತಿಯನ್ನು ನೀಡುತ್ತದೆ. ಹೀಗಾಗಿಯೇ ಬಹಳಷ್ಟು ಜನರಿಗೆ ಚಹಾ-ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಕೆಲವೊಮ್ಮೆ ನಮ್ಮ ಅಲ್ಪ ಮತ್ತು ದೀರ್ಘಕಾಲೀನ ಸ್ಮರಣೆಯನ್ನು ಸುಧಾರಿಸಲು ಕಾಫಿ ಸಹಾಯ ಮಾಡುತ್ತದೆ. ಮೈಂಡ್ ಫ್ರೆಶ್ ಮಾಡಲು ಒಂದು ಕಪ್ ಕಾಫಿ ಕುಡಿದರೆ ಸಾಕು ಎಲ್ಲಾ ತೊಂದರೆಗಳು ದೂರ ಓಡಿದಂತಾಗುತ್ತದೆ.

ನಮ್ಮಲ್ಲಿ ಬಹುತೇಕರು ಕಾಫಿಗೆ ವ್ಯಸನಿಯಾಗಿರುತ್ತಾರೆ. ಸರಿಯಾದ ಪ್ರಮಾಣದಲ್ಲಿ, ಸರಿಯಾದ ಸಮಯದಲ್ಲಿ ಕಾಫಿ ಕುಡಿಯುವುದು ಉತ್ತಮ ವಿಧಾನ. ಯಾವಾಗ ಬೇಕಾದಾಗ, ಅತಿಯಾಗಿ ಕಾಫಿ ಸೇವನೆ ಮಾಡುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಕಾಫಿಯಲ್ಲಿ ಕಂಡುಬರುವ ಕೆಫೀನ್ ಅಂಶವು ನಾವು ಸೇವಿಸುವ ಆಹಾರದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ಅಡ್ಡಿಯಾಗುತ್ತದೆ. ಆದ್ದರಿಂದ ಊಟ ಮಾಡಿದ ತಕ್ಷಣ ಕಾಫಿ ಕುಡಿಯುವುದರಿಂದ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸದಿದ್ದರೆ ಮುಂದೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಕಾಫಿ ರುಚಿಯನ್ನು ಆನಂದಿಸಲು ನೀವು ಅನುಸರಿಸಬೇಕಾದ ಕೆಲವು ಸಲಹೆಗಳು ಇಲ್ಲಿವೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /4

ಪ್ರತಿದಿನ ಬೆಳಗ್ಗೆ ಅಡುಗೆಮನೆ ಪ್ರವೇಶಿಸಿ ಒಂದು ಕಪ್ ಕಾಫಿ ತಯಾರಿಸಿ ಕುಡಿಯುವ ಅಭ್ಯಾಸವಿದ್ದರೆ ನೀವು ನಿರೀಕ್ಷಿಸುವ ಪ್ರಯೋಜನ ಪಡೆಯಲು ಸಾಧ್ಯವಾಗದಿರಬಹುದು. ಏಕೆಂದರೆ ನಿಮ್ಮ ದೇಹದಲ್ಲಿನ ಕಾರ್ಟಿಸೋಲ್ ಮಟ್ಟವು ಬೆಳಗ್ಗೆ ಅತ್ಯಧಿಕವಾಗಿರಬೇಕು. ಖಾಲಿ ಹೊಟ್ಟೆಯಲ್ಲಿರುವಾಗ ದೇಹದಲ್ಲಿ ಕಾರ್ಟಿಸೋಲ್ ಪ್ರಮಾಣ ಹೆಚ್ಚಾಗಿರುತ್ತದೆ. ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆ ನಿರ್ವಹಿಸುವಲ್ಲಿ ಕಾರ್ಟಿಸೋಲ್ ಕಾರಣವಾಗುತ್ತದೆ. ಕಾರ್ಟಿಸೋಲ್ ಉತ್ಪಾದನೆಗೆ ಕಾಫಿಯಲ್ಲಿರುವ ಕೆಫೀನ್ ಅಡ್ಡಿಪಡಿಸುತ್ತದೆ.

2 /4

ಕಾರ್ಟಿಸೋಲ್ ಮಟ್ಟ ಹೆಚ್ಚಿರುವ ಸಮಯದಲ್ಲಿ ಕಾಫಿ ಕುಡಿಯುವುದು ನಿಮ್ಮ ದೇಹಕ್ಕೆ ಒಳ್ಳೆಯದಲ್ಲ. ಅಂದರೆ ದಿನ ಮುಂದುವರೆದಂತೆ ನೀವು ಕೆಫೀನ್ ಮೇಲೆ ಹೆಚ್ಚು ಅವಲಂಬಿಸಿರುತ್ತೀರಿ. ಕಾರ್ಟಿಸೋಲ್ ಬೆಳಗ್ಗೆ 10ರ ನಡುವೆ ತಗ್ಗಿದ ವೇಳೆ ನಿಮ್ಮ ಕೆಫೀನ್ ಸೇವನೆಯಿಂದ ಹೆಚ್ಚಿನದನ್ನು ಪಡೆಯಲು ಆ ಅವಧಿಯಲ್ಲಿ ಅಥವಾ ಮಧ್ಯಾಹ್ನದ ಸಮಯದಲ್ಲಿ ಕಾಫಿ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳಿತು. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ನೀವು ಕಾಫಿ ಕುಡಿಯಬಾರದು.

3 /4

ಸಲ್ಪ ಸಲ್ಪವೇ ಕಾಫಿ ಸೇವನೆ ಮಾಡುವುದು ಉತ್ತಮ. ಕೆಫೀನ್ ಕುಡಿಯುವ ಅರ್ಧ ಘಂಟೆಯಿಂದ ಒಂದು ಗಂಟೆಯೊಳಗೆ ರಕ್ತಸಂಚಾರ ಅಧಿಕವಾಗಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದರಿಂದ ಆಮ್ಲದ ಪ್ರಮಾಣ ಹೆಚ್ಚಾದಾಗ, ಎದೆಯಲ್ಲಿ ಉರಿ ಉಂಟು ಮಾಡಬಹುದು. ಆದ್ದರಿಂದ ಪ್ರತಿ ಬಾರಿಯೂ ಸ್ವಲ್ಪವೇ ಕಾಫಿ ಕುಡಿಯುವುದನ್ನು ರೂಡಿಸಿಕೊಳ್ಳುವುದು ಉತ್ತಮ.

4 /4

ಅನೇಕರು ಕೇಳಬಹುದು ರಾತ್ರಿ ವೇಳೆ ಕಾಫಿ ಕುಡಿಯುವುದು ಉತ್ತಮವೇ? ಎಂದು. ಆದರೆ ದಿನದ ಕೊನೆದ ಸಮಯದಲ್ಲಿ ಕಾಫಿಯನ್ನು ಕುಡಿಯಬೇಡಿ. ನಿಮ್ಮ ಕೊನೆಯ ಕಪ್ ನಂತರ 6 ಗಂಟೆಗಳ ಕಾಲ ನಿದ್ರೆ ಮಾಡುವ ನಿಮ್ಮ ಸಾಮರ್ಥ್ಯಕ್ಕೆ ಕೆಫೀನ್ ಅಡ್ಡಿಪಡಿಸುತ್ತದೆ. ಹೀಗಾಗಿ ಕಾಫಿ ಕುಡಿಯುವುದಕ್ಕೆ ಒಂದು ಉತ್ತಮ ಸಮಯವನ್ನು ನಿಗದಿಪಡಿಸಿ ಆ ಸಮದಲ್ಲಿ ಮಾತ್ರ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ದಿನದ ಕೊನೆ ಗಂಟೆಯಲ್ಲಿ ಕಾಫಿ ಕುಡಿಯುವುದರಿಂದ ನಿಮ್ಮ ಸುಖಕರ ನಿದ್ರೆಗೆ ತೊಂದರೆಯುಂಟಾಗಬಹುದು. ಹೀಗಾಗಿ ಇದರ ಬಗ್ಗೆ ಎಚ್ಚರಿಕೆ ವಹಿಸಿರಿ. ಕೊನೆಯದಾಗಿ ಹೇಳಬೇಕೆಂದರೆ ನೀವು ಕಾಫಿಯನ್ನು ನಿಧಾನವಾಗಿ ಕುಡಿಯಿರಿ ಮತ್ತು ನಿಮ್ಮ ಕಾಫಿಗೆ ಸಕ್ಕರೆ ಸೇರಿಸುವುದನ್ನು ಆದಷ್ಟು ತಪ್ಪಿಸುವುದು ಒಳಿತು.