ನಿಂಬೆ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಂಬೆಯು ವಿಟಮಿನ್ Cಯಿಂದ ತುಂಬಿರುತ್ತದೆ, ಇದು ನಿಮ್ಮ ದೇಹಕ್ಕೆ ದಿನನಿತ್ಯದ ಅಗತ್ಯವಿರುವ ಪೋಷಕಾಂಶ ಒದಗಿಸುತ್ತದೆ.
ನವದೆಹಲಿ: ನಿಂಬೆ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ C ಸೇರಿದಂತೆ ಹಲವು ಪೋಷಕಾಂಶಗಳಿವೆ. ವಿಟಮಿನ್ C ನಿಯಮಿತ ಸೇವನೆಯು ದೇಹದ ರೋಗನಿರೋಧಕ ಶಕ್ತಿ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೂಳೆಯ ಆರೋಗ್ಯ, ಚರ್ಮ, ಕೂದಲು ಮತ್ತು ಕಣ್ಣುಗಳಿಗೂ ಇದು ತುಂಬಾ ಪರಿಣಾಮಕಾರಿ. ಕಟುವಾದ ಪರಿಮಳ ಆಸ್ವಾದಿಸುವ ಮತ್ತು ಆಗಾಗ ತಮ್ಮ ಊಟಕ್ಕೆ ನಿಂಬೆ ರಸ ಸೇರಿಸುವ ಜನರಿದ್ದಾರೆ. ನಿಮ್ಮ ದೈನಂದಿನ ಅಡುಗೆ ದಿನಚರಿಯಲ್ಲಿ ನಿಂಬೆಯ ಬಳಕೆ ನಿಜವಾಗಿಯೂ ಮುಖ್ಯವಾಗಿದೆ. ಏಕೆಂದರೆ ನಿಂಬೆಯು ವಿಟಮಿನ್ C ಯಿಂದ ತುಂಬಿರುತ್ತದೆ, ಇದು ನಿಮ್ಮ ದೇಹಕ್ಕೆ ದಿನನಿತ್ಯದ ಅಗತ್ಯವಿರುವ ಪೋಷಕಾಂಶವನ್ನು ಒದಗಿಸುತ್ತದೆ. ನಿಂಬೆಹಣ್ಣನ್ನು ನಿಮ್ಮ ಆಹಾರದಲ್ಲಿ ಏಕೆ ಸೇರಿಸಬೇಕು? ನಿಮ್ಮ ದೈನಂದಿನ ಅಡುಗೆಯಲ್ಲಿ ಅದನ್ನು ಹೇಗೆ ಬಳಸಬೇಕು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಂಬೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿರುವ ಕಾರಣ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ನಿಂಬೆ ರಸವು ದೇಹದಿಂದ ವಿಷಕಾರಿ ವಸ್ತು ಹೊರಹಾಕಲು ಸಹಾಯ ಮಾಡುತ್ತದೆ. ರಕ್ತ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ಮೂತ್ರಪಿಂಡದ ಕಲ್ಲು ಸಮಸ್ಯೆ ಬರದಂತೆ ತಡೆಯಲು ಸಹ ಸಹಾಯ ಮಾಡುತ್ತದೆ.
ನಿಂಬೆಹಣ್ಣು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ ಮತ್ತು ಜೀವಕೋಶಗಳಿಗೆ ಹಾನಿ ಉಂಟುಮಾಡುವ ಸ್ವತಂತ್ರ ರಾಡಿಕಲ್ಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಇತರ ಪದಾರ್ಥಗಳೊಂದಿಗೆ ನಿಂಬೆ ರಸವನ್ನು ಮಿಶ್ರಣ ಮಾಡಿ ಚರ್ಮ ಮತ್ತು ಕೂದಲಿಗೆ ಹಚ್ಚಿದಾಗ ಚರ್ಮದ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ.
ನಿಂಬೆಹಣ್ಣು ವಿಟಮಿನ್ B 6, ತಾಮ್ರ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸತು, ಫ್ಲೇವನಾಯ್ಡ್ಗಳು, ಉತ್ಕರ್ಷಣ ನಿರೋಧಕಗಳು ಮತ್ತು ರಂಜಕದಿಂದ ಸಮೃದ್ಧವಾಗಿದೆ. ನಿಮ್ಮ ತೂಕ ಇಳಿಸುವ ಆಹಾರದಲ್ಲಿ ಇದನ್ನು ಸೇರಿಸುವುದರಿಂದ ನಿಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.