inside Photos : ಬ್ರಿಟನ್ ನಲ್ಲಿದೆ ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ಐಶಾರಾಮಿ ರಾಜ್ ಮಹಲ್

ರಾಜ್ ಕುಂದ್ರಾ ಅವರು ವಿಶ್ವದಾದ್ಯಂತ ಅನೇಕ ಆಸ್ತಿಗಳನ್ನು ಹೊಂದಿದ್ದಾರೆ. ಅಲ್ಲದೆ, ಶಿಲ್ಪಾಗೆ ಅನೇಕ ದುಬಾರಿ ವಸ್ತುಗಳನ್ನು ಉಡುಗೊರೆಯಾಗಿಯೂ ನೀಡಿದ್ದಾರೆ.

ನವದೆಹಲಿ : ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಪ್ರಸಾರದ ಆರೋಪಡ ಮೇಲೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅವರನ್ನು ಜುಲೈ 19 ರಂದು ಮುಂಬೈ ಪೊಲೀಸರು ಬಂಧಿಸಿದ್ದಾರೆ. ರಾಜ್ ಕುಂದ್ರಾ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿಲ್ಪಾ ಶೆಟ್ಟಿಯನ್ನು ಕೂಡಾ ವಿಚಾರಣೆಗೆ ಒಳಪದಿಸಲಾಗಿತ್ತು. ರಾಜ್ ಕುಂದ್ರಾ ಅವರು ವಿಶ್ವದಾದ್ಯಂತ ಅನೇಕ ಆಸ್ತಿಗಳನ್ನು ಹೊಂದಿದ್ದಾರೆ. ಅಲ್ಲದೆ, ಶಿಲ್ಪಾಗೆ ಅನೇಕ ದುಬಾರಿ ವಸ್ತುಗಳನ್ನು ಉಡುಗೊರೆಯಾಗಿಯೂ ನೀಡಿದ್ದಾರೆ. ರಾಜ್ ಕುಂದ್ರಾ ಅವರು ಶಿಲ್ಪಾ ಶೆಟ್ಟಿಗೆ ಉಡುಗೊರೆಯಾಗಿ ನೀಡಿದ ಬ್ರಿಟನ್‌ನ ಐಷಾರಾಮಿ ಮನೆ 'ರಾಜ್ ಮಹಲ್' ನ ಚಿತ್ರಣ ಇಲ್ಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಯುನೈಟೆಡ್ ಕಿಂಗ್‌ಡಂನ ಸೇಂಟ್ ಜಾರ್ಜ್ ಹಿಲ್ ಎಸ್ಟೇಟ್ ನಲ್ಲಿರುವ ಈ ಅದ್ದೂರಿ ಭವನವನ್ನು ತನ್ನ ಗೆಳತಿ ಶಿಲ್ಪಾ ಶೆಟ್ಟಿಗೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾಗ, ರಾಜ್ ಕುಂದ್ರಾ ತನ್ನ ಮಾಜಿ ಪತ್ನಿ ಕವಿತಾಗೆ ವಿಚ್ಚೇದನ ನೀಡಿರಲಿಲ್ಲ.  

2 /5

ವರದಿಗಳ ಪ್ರಕಾರ, ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಈ ಮನೆಯ ಫರ್ನಿಶ್ ಗಾಗಿ , ಐಷಾರಾಮಿ ಪ್ಯಾಡ್‌ನ  ಇಂಟಿರಿಯರ್ ಬಳಸಲಾಗಿತ್ತು. ರಾಜ್ ಕುಂದ್ರಾ ಈ ಐಷಾರಾಮಿ ಆಸ್ತಿಯನ್ನು 2006 ರಲ್ಲಿ ಜಿಬಿಪಿ 3.2 ಮಿಲಿಯನ್ ಖರ್ಚು ಮಾಡಿದ್ದರು.  

3 /5

 ಈ ಮಹಲ್ ನಲ್ಲಿ  ಟ್ರಿಪಲ್ ಬಾಲ್ಕನಿಗಳು ಮತ್ತು ದೊಡ್ಡ ಗಾರ್ಡನ್ ಇದೆ. ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ತಮ್ಮ ವಾಹನಗಳನ್ನು ಈ ಟ್ರಿಪಲ್ ಬಾಲ್ಕನಿಯ ಕೆಳಗೆ ಪಾರ್ಕ್ ಮಾಡುತ್ತಾರೆ.   

4 /5

 'ರಾಜಮಹಲ್' ನ ಎಡಭಾಗದಲ್ಲಿ ಡ್ರೆಸ್ಸಿಂಗ್ ಕೋಣೆಯೊಂದಿಗೆ ಭವ್ಯವಾದ ಹಾಲ್ ಕಂಡುಬರುತ್ತದೆ. ಈ ಐಶಾರಾಮಿ ಮಹಲ್ ನಲ್ಲಿ ಒಳಾಂಗಣ ಈಜುಕೊಳವೂ ಇದೆ.

5 /5

 ಮುಂಬೈನ ಐಷಾರಾಮಿ ಜುಹು ಬೀಚ್ ಪ್ರದೇಶದಲ್ಲಿ ಕೂಡಾ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದೊಡ್ಡ ಬಂಗಲೆಯನ್ನು  ಹೊಂದಿದ್ದಾರೆ. 'ಕಿನಾರಾ' ಹೆಸರಿನ ಈ ಐಷಾರಾಮಿ ಮನೆಯ ಇಂಟಿರಿಯರ್ ಅನ್ನು ಸ್ವತಃ ಶಿಲ್ಪಾ ಮಾಡಿದ್ದರು. 

You May Like

Sponsored by Taboola