ಈ ತಿಂಗಳ ಫೆಬ್ರವರಿ 7 ರಿಂದ 14 ರವರೆಗೆ ವ್ಯಾಲೆಂಟೈನ್ಸ್ ಡೇ ವೀಕ್ ಎಂದು ಆಚರಿಸಲಾಗುತ್ತದೆ.
ನವದೆಹಲಿ : ಫೆಬ್ರವರಿ ತಿಂಗಳನ್ನು ಪ್ರೀತಿಯ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಈ ತಿಂಗಳ ಫೆಬ್ರವರಿ 7 ರಿಂದ 14 ರವರೆಗೆ ವ್ಯಾಲೆಂಟೈನ್ಸ್ ಡೇ ವೀಕ್ ಎಂದು ಆಚರಿಸಲಾಗುತ್ತದೆ. ಇದು ಇಂದಿನಿಂದ ಅಂದರೆ ಫೆಬ್ರವರಿ 7 ರಿಂದ ಪ್ರಾರಂಭವಾಗಿದೆ. ಪ್ರೇಮಿಗಳ ವಾರದ ಮೊದಲ ದಿನವನ್ನು ರೋಸ್ ಡೇ ಎಂದು ಆಚರಿಸಲಾಗುತ್ತದೆ. ಕೊನೆಯ ದಿನವನ್ನು ವ್ಯಾಲೆಂಟೈನ್ಸ್ ಡೇ ಎಂದು ಆಚರಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಗುಲಾಬಿ ಹೂವುಗಳು ಪ್ರೀತಿಯಾ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದರ ಸಿಹಿ ಮತ್ತು ಸುವಾಸನೆಯು ಪ್ರತಿಯೊಬ್ಬರ ಮನಸ್ಸನ್ನು ಸೆಳೆಯುತ್ತದೆ. ಬಹುಶಃ ಈ ಕಾರಣಕ್ಕಾಗಿ ಪ್ರೀತಿಯ ವಾರ ರೋಸ್ ಡೇ ಯಿಂದ ಪ್ರಾರಂಭವಾಗುತ್ತದೆ. ಈ ದಿನದಂದು ಜನರು ತಮಗೆ ಇಷ್ಟವಾದವರಿಗೆ ಗುಲಾಬಿಗಳನ್ನು ನೀಡುತ್ತಾರೆ.
ಈ ದಿನ ಅವರು ಪರಸ್ಪರ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಈ ದಿನ ಅನೇಕ ಹೊಸ ಜೋಡಿಗಳು ರೂಪುಗೊಳ್ಳುತ್ತವೆ. ಪ್ರೇಮಿಗಳ ವಾರದ ಎರಡನೇ ದಿನವನ್ನು ಪ್ರಪೋಸ್ ಡೇ ಎಂದು ಆಚರಿಸಲಾಗುತ್ತದೆ.
ಪ್ರೇಮಿಗಳ ವಾರದ ಮೂರನೇ ದಿನವನ್ನು ಚಾಕೊಲೇಟ್ ಡೇ ಎಂದು ಆಚರಿಸಲಾಗುತ್ತದೆ.ಈ ದಿನ ಪ್ರೇಮಿಗಳು ಚಾಕೊಲೇಟ್ ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಚಾಕೊಲೇಟ್ ದಿನದ ನಂತರ ವ್ಯಾಲೆಂಟೈನ್ಸ್ ವೀಕ್ ನ ನಾಲ್ಕನೇ ದಿನವನ್ನು ಟೆಡ್ಡಿ ಡೇ ಎಂದು ಆಚರಿಸಲಾಗುತ್ತದೆ. ಈ ದಿನ ಸಂಗಾತಿಗೆ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು.
ಪ್ರಾಮಿಸ್ ಡೇ ಎಂದರೆ ಪ್ರೇಮಿಗಳ ವಾರದ ಐದನೇ ದಿನ. ಈ ದಿನದ ವಿಶೇಷತೆ ಏನೆಂದರೆ, ಈ ದಿನದಂದು ಪ್ರೇಮಿಗಳು ಒಬ್ಬರಿಗೊಬ್ಬರು ಅನೇಕ ಭರವಸೆಗಳನ್ನು ನೀಡುತ್ತಾರೆ ಮತ್ತು ಯಾವಾಗಲೂ ಒಟ್ಟಿಗೆ ಇರುವಂತೆ ಪ್ರತಿಜ್ಞೆ ಮಾಡುತ್ತಾರೆ.
ಆರನೇ ದಿನ, ಹಗ್ ಡೇ . ಈ ದಿನ ನೀವು ಪ್ರ್ರೆಥಿಸುವ ಅಥವಾ ನಿಮ್ಮ ಸಂಗಾತಿಗೆ ಪ್ರೀತಿಯ ಅಪ್ಪುಗೆ ನೀಡುವ ದಿನ.
ಕಿಸ್ ಡೇ ಅನ್ನು ಫೆಬ್ರವರಿ 13 ರಂದು ವ್ಯಾಲೆಂಟೈನ್ಸ್ ಡೇಗೆ ಒಂದು ದಿನ ಮೊದಲು ಆಚರಿಸಲಾಗುತ್ತದೆ. ಎಲ್ಲಾ ಪ್ರೀತಿಯ ಜೋಡಿಗಳಿಗೆ ಈ ದಿನವು ತುಂಬಾ ವಿಶೇಷವಾಗಿರುತ್ತದೆ.
ಪ್ರತಿ ವರ್ಷ ಫೆಬ್ರವರಿ 14 ರಂದು, ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ, ಜನರು ಸೇಂಟ್ ವ್ಯಾಲೆಂಟೈನ್ ಹೆಸರಿನಲ್ಲಿ ತಮ್ಮ ಪ್ರೀತಿಪಾತ್ರರಿಗೆ ಹೂವು, ಉಡುಗೊರೆಗಳನ್ನು ನೀಡುತ್ತಾರೆ. ನಿಮ್ಮ ಪ್ರೇಮಿಯ ಕಡೆಗೆ ನಿಮ್ಮ ಪ್ರೀತಿಯನ್ನು ತೋರಿಸಲು ಈ ದಿನವನ್ನು ಅತ್ಯುತ್ತಮ ದಿನವೆಂದು ಪರಿಗಣಿಸಲಾಗುತ್ತದೆ, ಈ ದಿನ ನಿಮ್ಮ ಸಂಗಾತಿಯ ಮುಂದೆ ನಿಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಬಹುದು.