ತಿಂಗಳಾನುಗಟ್ಟಲೆ ಕಾಡುವ ಕೆಮ್ಮಿಗೆ ಈ ಎಲೆಯೇ ಪರಿಹಾರ !ಹೀಗೆ ಒಂದು ಸಲ ಬಳಸಿದರೆ ಸಾಕು ಕೆಮ್ಮು, ಶೀತ ಮಾಯವಾಗುವುದು !

Written ByRanjitha R K
Published: Oct 23, 2024, 11:24 AM IST|Updated: Oct 23, 2024, 11:24 AM IST

ಕೆಮ್ಮು ಒಮ್ಮೆ ಆರಂಭವಾದರೆ ವಾರಗಟ್ಟಲೆ ಮುಂದುವರೆಯುತ್ತದೆ. ಕೆಮ್ಮಿನ ಸಿರಪ್ ಕುಡಿದರೂ ಪರಿಹಾರ ಸಿಗುವುದಿಲ್ಲ.ಆ ಸಂದರ್ಭದಲ್ಲಿ ಕೆಲವು ಮನೆ ಮದ್ದುಗಳೇ ಉಪಯೋಗಕ್ಕೆ ಬರುವುದು. 

ಬೆಂಗಳೂರು : ಹಿತ್ತಲ ಗಿಡ ಮದ್ದಲ್ಲ ಎನ್ನುವ ಮಾತಿದೆ. ಕಣ್ಣ ಮುಂದೆ ಪರಿಹಾರವಿದ್ದರೂ ನಮಗೆ ಅದರ ಪ್ರಾಮುಖ್ಯತೆ ತಿಳಿಯುವುದಿಲ್ಲ. ಹಾಗೆಯೇ ಈ ಎಲೆ ನಮ್ಮ ಮನೆ ಅಂಗಳದಲ್ಲಿಯೇ ಇದ್ದರೂ ನಮಗೆ ಬೇಡವಾಗಿ ಬಿಡುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 Home Remedy for cold and cough 1/7

ಶೀತ ಕೆಮ್ಮಿಗೆ ಮನೆ ಮದ್ದು

ಕೆಮ್ಮು ಒಮ್ಮೆ ಆರಂಭವಾದರೆ ವಾರಗಟ್ಟಲೆ ಮುಂದುವರೆಯುತ್ತದೆ. ಕೆಮ್ಮಿನ ಸಿರಪ್ ಕುಡಿದರೂ ಪರಿಹಾರ ಸಿಗುವುದಿಲ್ಲ.ಆ ಸಂದರ್ಭದಲ್ಲಿ ಕೆಲವು ಮನೆ ಮದ್ದುಗಳೇ ಉಪಯೋಗಕ್ಕೆ ಬರುವುದು.   

 Home Remedy for cold and cough 2/7

ಶೀತ ಕೆಮ್ಮಿಗೆ ಮನೆ ಮದ್ದು

ದೊಡ್ಡ ಪತ್ರೆ ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಬೆಳೆಯುತ್ತಾರೆ.ಇದು ಕೆಮ್ಮು, ಶೀತಕ್ಕೆ ರಾಮಬಾಣ ಇದ್ದ ಹಾಗೆ. ಈ ಎಲೆಯ ರಸ ಕುಡಿದರೆ ಸಾಕು ಕೆಮ್ಮು ಮಾಯವಾಗಿ ಬಿಡುತ್ತದೆ.   

 Home Remedy for cold and cough 3/7

ಶೀತ ಕೆಮ್ಮಿಗೆ ಮನೆ ಮದ್ದು

ದೊಡ್ಡಪತ್ರೆ ಎಲೆ, ತುಳಸಿ ಎಲೆ ಮತ್ತು ವೀಳ್ಯದೆಲೆಯನ್ನು ಅರೆದು ರಸ ತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ನೆಗಡಿ, ಕೆಮ್ಮು ದೂರವಾಗುತ್ತದೆ.ಚಿಕ್ಕ ಮಕ್ಕಳಿಗೆ ಇದನ್ನು ನೀಡಿದರೂ ಯಾವ ಅಡ್ಡ ಪರಿಣಾಮವೂ ಆಗುವುದಿಲ್ಲ.   

 Home Remedy for cold and cough 4/7

ಶೀತ ಕೆಮ್ಮಿಗೆ ಮನೆ ಮದ್ದು

ಬರೀ ದೊಡ್ಡ ಪತ್ರೆ ಮಾತ್ರ ಬಳಸುವುದಾದರೆ ಇದರ ಎಲೆಯನ್ನು ಒಂದು ತವಾ ಮೇಲೆ ಹಾಕಿ ಬಾಡಿಸಿದರೆ ಅದು ಚೆನ್ನಾಗಿ ರಸ ಬಿಡುತ್ತದೆ. ಹೀಗೆತೆಗೆದ ರಸಕ್ಕೆ ಸ್ವಲ್ಪ ಜೇನು ತುಪ್ಪ ಬೆರೆಸಿ ಕುಡಿದರೆ ಶೀತ ಕೆಮ್ಮಿಗೆ ಉತ್ತಮ ಪರಿಹಾರವಾಗಿ ಬಿಡುತ್ತದೆ.

 Home Remedy for cold and cough 5/7

ಶೀತ ಕೆಮ್ಮಿಗೆ ಮನೆ ಮದ್ದು

ಇನ್ನು ಮೂಗು ಕಟ್ಟಿ ತಲೆ ನೋವು ಅತಿಯಾಗಿ ಕಾಡುತ್ತಿದ್ದರೆ, ದೊಡ್ಡ ಪತ್ರೆ ಎಲೆ ಯನ್ನು ತವಾ ಮೇಲೆ ಹಾಕಿ ಬಾಡಿಸಿ ಹಣೆಯ ಭಾಗದಲ್ಲಿ ಇಟ್ಟರೆ ಕಟ್ಟಿದ  ಮೂಗಿನಿಂದ ಪರಿಹಾರ ಸಿಗುವುದು. ತಲೆ ನೋವು ಕೂಡಾ ಕಡಿಮೆಯಾಗುವುದು. 

 Home Remedy for cold and cough 6/7

ಶೀತ ಕೆಮ್ಮಿಗೆ ಮನೆ ಮದ್ದು

ಮಕ್ಕಳಿಗೆ ಕೆಮ್ಮು ಬಾಧಿಸುತ್ತಿದ್ದರೆ ಈ ಎಲೆಯನ್ನು ಸ್ವಲ್ಪ ಬಿಸಿ ಮಾಡಿ ಎದೆಯ ಭಾಗಕ್ಕೆ ಇಟ್ಟರೂ ಕಫ ಕರಗುತ್ತದೆ ಎಂದು ಹೇಳಲಾಗುತ್ತದೆ. 

 Home Remedy for cold and cough 7/7

ಶೀತ ಕೆಮ್ಮಿಗೆ ಮನೆ ಮದ್ದು

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.