Snoring : ನಿಮ್ಮ ಗೊರಕೆ ಇನ್ನೊಬ್ಬರಿಗೆ ತೊಂದರೆ..! ಹೀಗೆ ಮಾಡಿ ಕಡಿಮೆಯಾಗುತ್ತೆ..

Snoring Health Tips : ನೀವು ರಾತ್ರಿಯಲ್ಲಿ ಹೆಚ್ಚು ಗೊರಕೆ ಹೊಡೆಯುತ್ತೀರಾ.. ಇದರಿಂದ ನಿಮ್ಮ ಸಂಗಾತಿ ತೊಂದರೆ ಅನುಭವಿಸುತ್ತಿದ್ದು, ನಿಮ್ಮಿಂದ ದೂರ ಮಲಗುತ್ತಿದ್ದಾರೆಯೇ.. ಹಾಗಿದ್ರೆ, ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಗೊರಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ವಿಧಾನವನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಮುಂದೆ ಓದಿ..

Health tips : ಗೊರಕೆ ಅಷ್ಟು ದೊಡ್ಡ ಸಮಸ್ಯೆ ಅಲ್ಲ. ಆದ್ರೆ, ಇದು ದಾಂಪತ್ಯ ಬಿರುಕಿಗೂ ಕಾರಣವಾಯಿತು ಎಂಬ ಅನೇಕ ಸುದ್ದಿಯನ್ನು ನೀವು ನೋಡಿರ ಬಹುದು. ಹೌದು.. ಮಲಗಿಕೊಂಡಾಗ ನಿಮಗೆ ತಿಳಿಯದೇ ನೀವು ಕರ್ಕಶವಾಗಿ ಗೊರಕೆ ಹೊಡೆಯುವುದರಿಂದ ನಿಮ್ಮ ಪಕ್ಕ ಮಲಗಿದ್ದವರಿಗೆ ಅದು ನರಕವಾಗಿ ಪರಿಣಮಿಸುತ್ತಿದೆ. ಆದ್ದರಿಂದ ಅವರು ನಿಮ್ಮಿಂದ ದೂರವಿಲು ಬಯಸುತ್ತಾರೆ. ಚಿಂತಿಸಬೇಡ. ಗೊರಕೆಯ ಸಮಸ್ಯೆಯನ್ನು ಪರಿಹರಿಸಲು ಇಲ್ಲಿ ನೀಡಿರುವ ಹಂತಗಳನ್ನು ಅನುಸರಿಸಿ.

1 /5

ಹೆಚ್ಚಿನ ಜನರು ನಿದ್ದೆ ಮಾಡುವಾಗ ತಮ್ಮ ಉಸಿರಾಟದೊಂದಿಗೆ ಜೋರಾಗಿ ಶಬ್ದ ಮಾಡುತ್ತಾರೆ. ಇದನ್ನೇ ನಾವು ಗೊರಕೆ ಎನ್ನುತ್ತೇವೆ. ಗೊರಕೆಯು ನಿದ್ರೆಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ನಿಮಗೆ ಗೊರಕೆಯ ಸಮಸ್ಯೆ ಹೆಚ್ಚು ಇದ್ದರೆ, ರಾತ್ರಿ ಮಲಗುವಾಗ ಹೆಚ್ಚುವರಿ ದಿಂಬನ್ನು ಬಳಸುವುದು ಉತ್ತಮ. ಹೀಗೆ ಮಾಡುವುದರಿಂದ ಗೊರಕೆಯ ಸಮಸ್ಯೆ ಬರುವುದಿಲ್ಲ.    

2 /5

ನೀವು ಹೆಚ್ಚು ಗೊರಕೆ ಹೊಡೆಯುತ್ತಿದ್ದರೆ ನಿಮ್ಮ ಮಲಗುವ ವಿಧಾನವನ್ನು ಬದಲಾಯಿಸಿ. ಹೀಗೆ ಮಾಡುವುದರಿಂದ ಗೊರಕೆಯ ಸಮಸ್ಯೆಯನ್ನು ತಪ್ಪಿಸಬಹುದು.  

3 /5

ಅಧಿಕ ತೂಕವು ಗೊರಕೆಯ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂಬುವುದನ್ನು ಮರೆಯದಿರಿ. ನಿಮ್ಮ ಗೊರಕೆ ವಿಪರೀತವಾಗಿದ್ದರೆ, ನಿಮ್ಮ ತೂಕವನ್ನು ಕಡಿಮೆ ಮಾಡುವತ್ತ ಗಮನ ಹರಿಸಿ.  

4 /5

ಖರ್ಜೂರವು ಗೊರಕೆಯ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಹಾಗೆಯೇ ಮಲಗುವ ಮುನ್ನ ಕೆಲವು ಹನಿ ಪುದೀನಾ ಎಣ್ಣೆಯನ್ನು ಮೂಗಿಗೆ ಹಾಕಿಕೊಂಡು ಮಲಗಿ.    

5 /5

ಮಲಗುವ ಮುನ್ನ ಮದ್ಯಪಾನ ಮಾಡುವವರು ಗೊರಕೆ ಹೊಡೆಯುವ ಸಾಧ್ಯತೆ ಹೆಚ್ಚು. ಆದ್ದರಿಂದ, ಮದ್ಯಪಾನ ಮಾಡುವವರು ಕಡಿಮೆ ಮಾಡಿ.