ಭೀಕರ ಪ್ರವಾಹಕ್ಕೆ ತತ್ತರಿಸಿದ ಕೇರಳ: Photos

  

Aug 10, 2018, 08:19 PM IST
1/10

ಕೇರಳದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಅಲ್ಲದೆ, ನದಿಗಳು ತುಂಬಿ ಹರಿಯುತ್ತಿದ್ದು ಎಲ್ಲೆಡೆ ಪ್ರವಾಹ ಭೀತಿ ಎದುರಾಗಿದೆ.  

2/10

ಭಾರಿ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕರಾವಳಿ ಭಾಗ ತತ್ತರಿಸಿದ್ದು, ಮುಖ್ಯಮಂತ್ರಿ ಪಿನರಾಯ್‌ ವಿಜಯನ್‌ ಎಲ್ಲ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಭೀಕರ ಪ್ರವಾಹದಿಂದಾಗಿ ಈವರೆಗೆ 26 ಮಂದಿ ಸಾವನ್ನಪ್ಪಿದ್ದಾರೆ. 

3/10

ವಯನಾಡ್‌ ಜಿಲ್ಲೆಯ ಪನಮರಮ್‌ನಲ್ಲಿ ಪ್ರವಾಹದ ನಡುವೆ ಸಿಕ್ಕಿಹಾಕಿಕೊಂಡ ಸುಮಾರು 50 ಮಂದಿಯನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾದ ಸೈನ್ಯವು ಹೆಲಿಕಾಪ್ಟರ್ ಬಳಸಿಕೊಂಡು ಹೆಚ್ಚುವರಿ ಪ್ರವಾಸಿಗರನ್ನು ಸ್ಥಳಾಂತರಿಸಿದೆ.

4/10

ಭಾರೀ ಮಳೆಯಿಂದಾಗಿ ನದಿ ನೀರು ಹೆಚ್ಚಾದ ಪರಿಣಾಮ ಇಡುಕ್ಕಿ ಡ್ಯಾಂನ ಎಲ್ಲಾ ಗೇಟುಗಳನ್ನೂ ತೆರೆಯಲಾಗಿದೆ. ಅತಿಯಾದ ನೀರು ಹರಿದುಬಂದ ಹಿನ್ನೆಲೆಯಲ್ಲಿ ಮನೆಗಳು, ಗದ್ದೆಗಳು ಮುಳುಗಡೆಯಾಗಿವೆ. 

5/10

ಪ್ರವಾಹದಲ್ಲಿ ಸಿಲುಕಿದ್ದ ವೃದ್ಧೆಯೋಬ್ಬರನ್ನು ಸ್ಥಳಿಯರು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವುದು.

6/10

ಭಾರೀ ಮಳೆಯಿಂದಾಗಿ ನದಿ ನೀರು ಹೆಚ್ಚಾದ ಪರಿಣಾಮ ಇಡುಕ್ಕಿ ಡ್ಯಾಂನ ಎಲ್ಲಾ ಗೇಟುಗಳನ್ನೂ ತೆರೆಯಲಾಗಿದೆ. ಅತಿಯಾದ ನೀರು ಹರಿದುಬಂದ ಹಿನ್ನೆಲೆಯಲ್ಲಿ ಮನೆಗಳು, ಗದ್ದೆಗಳು ಮುಳುಗಡೆಯಾಗಿವೆ. 

7/10

ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಮನಪ್ಪುರಂ ಶ್ರೀ ಮಹಾದೇವ ದೇವಸ್ಥಾನ ನೀರಿನಲ್ಲಿ ಮುಳುಗಡೆಯಾಗಿದೆ. 

8/10

ರೈಲ್ವೆ ಹಳಿಗಳಲ್ಲಿ ನೀರು ನಿಂತಿರುವ ಪರಿಣಾಮ ರೈಲು ಸಂಚಾರ ಅಸ್ತವ್ಯಸ್ತವಾಗಿದೆ.   

9/10

ಪ್ರವಾಹದಿಂದ ರಸ್ತೆಗಳಲ್ಲಿ ಸಂಪೂರ್ಣ ನೀರು ಆವೃತವಾಗಿದೆ. 

10/10

ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಎನ್ಡಿಆರ್ಎಫ್ ತಂಡ ಸ್ಥಳಾಂತರಿಸುತ್ತಿದೆ.