ಬಳಕೆದಾರರಿಗೆ ವಾಟ್ಸಾಪ್ ಅನೇಕ ವೈಶಿಷ್ಟ್ಯಗಳನ್ನು ನೀಡಿದೆ.
ತ್ವರಿತ ಸಂದೇಶ ಕಳುಹಿಸುವಿಕೆಗಾಗಿ ವಾಟ್ಸಾಪ್ ವಿಶ್ವದ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಆಗಿ ಹೊರಹೊಮ್ಮಿದೆ. ಈ ಜನಪ್ರಿಯ ಆ್ಯಪ್ ಮೂಲಕ ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿರುವುದು ನಮಗೆ ತುಂಬಾ ಸುಲಭವಾಗಿದೆ. ತಮ್ಮ ಬಳಕೆದಾರರಿಗೆ ವಾಟ್ಸಾಪ್ ಅನೇಕ ವೈಶಿಷ್ಟ್ಯಗಳನ್ನು ನೀಡಿದೆ. ಆದರೆ ಬಹುತೇಕರಿಗೆ ವಿಶೇಷ ಫೀಚರ್ಸ್ ಗಳ ಬಗ್ಗೆ ಗೊತ್ತಿರುವುದಿಲ್ಲ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಅನೇಕ ಬಾರಿ ಫೋನ್ನಲ್ಲಿ ನಂಬರ್ ಸೇವ್ ಮಾಡದೆಯೂ ಆ ಸಂಪರ್ಕಗಳಿಗೆ ನಾವು ಸಂದೇಶಗಳು, ಫೋಟೋಗಳು ಅಥವಾ ವೀಡಿಯೊಗಳನ್ನು ಕಳುಹಿಸಬೇಕಾದ ಸಂದರ್ಭ ಎದುರಾಗುತ್ತವೆ. ಆದರೆ ಈ ವಿಶೇಷ ವೈಶಿಷ್ಟ್ಯದ ಬಗ್ಗೆ ಮಾಹಿತಿ ಇರುವುದಿಲ್ಲ. ಅತ್ಯಂತ ಸುಲಭ ಮತ್ತು ಸರಳವಾಗಿ ಈ ರೀತಿ ನಾವು ಸಂದೇಶಗಳನ್ನು ಮತ್ತೊಬ್ಬರಿಗೆ ಕಳುಹಿಸಬಹುದಾಗಿದೆ.
ಯಾವುದೇ ಬಳಕೆದಾರರು ಐಒಎಸ್ ಮತ್ತು ಆಂಡ್ರಾಯ್ಡ್ನಲ್ಲಿ ಫೋನಿನಲ್ಲಿ ಸೇವ್ ಮಾಡದಿರುವ ನಂಬರ್ ಗಳಿಗೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸುವುದು ಹೇಗೆ..?
ಮೊದಲು ನಿಮ್ಮ ಯಾವುದೇ ಐಒಎಸ್ ಮತ್ತು ಆಂಡ್ರಾಯ್ಡ್ ಫೋನ್ ಬ್ರೌಸರ್ ಓಪನ್ ಮಾಡಿರಿ. ಬಳಿಕ ಈ ಕೆಳಗಿನ ಲಿಂಕ್ ಅನ್ನು ಕಾಪಿ ಮಾಡಿ ಅಡ್ರೆಸ್ ಬಾರ್ ನಲ್ಲಿ ಪೇಸ್ಟ್ ಮಾಡಿ. ಲಿಂಕ್ ಇಲ್ಲಿದೆ ನೋಡಿ: ‘http://wa.me/xxxxxxxxxx’ or ‘http://api.whatsapp.com/send?phone=xxxxxxxxxxx’
ಯಾವುದೇ ‘Xxxxxxxxxx’ ಫೋನ್ ನಂಬರ್ ಗೆ ನೀವು ಸಂದೇಶವನ್ನು ಕಳುಹಿಸಬೇಕಾದರೆ ನೀವು ದೇಶದ ಕೋಡ್ನೊಂದಿಗೆ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಉದಾ: ನೀವು ಈ ಸಂಖ್ಯೆ +919911111111 ಗೆ ಸಂದೇಶವನ್ನು ಕಳುಹಿಸಲು ಬಯಸಿದರೆ, ನೀವು ಅಡ್ರೆಸ್ ಬಾರ್ ನಲ್ಲಿ http://wa.me/919911111111 ಅನ್ನು ನಮೂದಿಸಬೇಕು. ಇಲ್ಲಿ ನೀಡಲಾದ 91 ಸಂಖ್ಯೆಯು ಭಾರತ ದೇಶದ ಸಂಕೇತವಾಗಿದೆ.
ನೀವು ಅಡ್ರೆಸ್ ಬಾರ್ ನಲ್ಲಿ ಲಿಂಕ್ ಹಾಕಿದ ಬಳಿಕ WhatsApp web ಆಪ್ಶನ್ ಕ್ಲಿಕ್ ಮಾಡಿ.
ಬಳಿಕ ನೀವು ನಿಮ್ಮ ಮೊಬೈಲ್ ಸಂಖ್ಯೆಯ WhatsApp web ಪುಟವನ್ನು ತೆರೆಯಿರಿ.
ಈಗ ನೀವು ನಂಬರ್ ಸೇವ್ ಮಾಡಿರದ ವ್ಯಕ್ತಿಗೆ ಸುಲಭವಾಗಿ ವಾಟ್ಸಾಪ್ ಸಂದೇಶವನ್ನು ಕಳುಹಿಸಬಹುದು.