Hair care tips : ಮೆಹಂದಿ ನಮ್ಮ ಕೂದಲಿಗೆ ಒಂದಲ್ಲ ಹಲಾವರು ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗುವುದಲ್ಲದೆ, ಉದ್ದವಾಗಿ ಬೆಳೆಯುತ್ತವೆ. ಆದರೆ ಗೋರಂಟಿಗೆ ಈ ಕೆಳಗೆ ನೀಡಿರುವ ವಸ್ತುಗಳನ್ನು ಸೇರಿಸಿ ಹಚ್ಚಿಕೊಂಡರೆ ನಿಮ್ಮ ಕೂದಲು ಕಪ್ಪು ಮತ್ತು ಹೊಳೆಯುತ್ತವೆ.. ಹೆಚ್ಚಿನ ಮಾಹಿತಿ ಇಲ್ಲಿದೆ.. ನೋಡಿ..
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೂದಲು ಉದುರುವುದು, ಒಣ ಕೂದಲು, ಎಣ್ಣೆಯುಕ್ತ ಕೂದಲು, ತಲೆಹೊಟ್ಟು, ಬಿಳಿ ಕೂದಲು ಹೀಗೆ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಕಡಿಮೆ ಮಾಡಲು ಮಹಿಳೆಯರು ತೈಲಗಳು ಮತ್ತು ಶಾಂಪೂಗಳ ಜೊತೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಉತ್ಪನ್ನಗಳನ್ನು ಬಳಸುತ್ತಾರೆ. ಸಾಕಷ್ಟು ಖರ್ಚು ಮಾಡುತ್ತಾರೆ. ಆದರೂ, ಈ ಸಮಸ್ಯೆಗಳು ಕಡಿಮೆಯಾಗುವುದಿಲ್ಲ..
ಹಿಂದಿನ ಕಾಲದಿಂದಲೂ ಕೂದಲಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಮೆಹಂದಿ ಬಳಸಲಾಗುತ್ತದೆ. ಇಂದಿಗೂ ಅನೇಕ ಜನರು ಇದನ್ನು ಬಳಸುತ್ತಾರೆ. ನೈಸರ್ಗಿಕ ಬಣ್ಣ, ಚಿಕಿತ್ಸಕ ಗೋರಂಟಿ ನಮ್ಮ ಕೂದಲಿಗೆ ಉತ್ತಮ ಬಣ್ಣವನ್ನು ನೀಡುವುದು ಮಾತ್ರವಲ್ಲದೆ ಕೂದಲನ್ನು ಸ್ಟ್ರಾಂಗ್ ಮಾಡುತ್ತದೆ.
ನಮ್ಮ ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡಲು ಮೆಹಂದಿ ತುಂಬಾ ಪರಿಣಾಮಕಾರಿಯಾಗಿದೆ. ಇದಲ್ಲದೆ ಇದು ನಮ್ಮ ಕೂದಲಿನ ಬೇರುಗಳನ್ನು ಬಲವಾಗಿ ಮಾಡುತ್ತದೆ. ಇದು ತಲೆಹೊಟ್ಟನ್ನು ನಾಶ ಮಾಡುತ್ತದೆ. ಅಲ್ಲದೆ, ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನೀವಾರಿಸುತ್ತದೆ..
ಚಹಾ ಎಲೆಗಳು : ಟೀ ಎಲೆಗಳನ್ನು ಗೋರಂಟಿಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲು ಕಪ್ಪಾಗುತ್ತದೆ. ಇದಕ್ಕಾಗಿ ಮೊದಲು ಚಹಾ ಎಲೆಗಳನ್ನು ನೀರಿನಲ್ಲಿ ಕುದಿಸಿ. ತಣ್ಣಗಾದ ನಂತರ ಮೆಹಂದಿಗೆ ಈ ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ಹಚಿಕ್ಕೊಳ್ಳಿ..
ದಾಸವಾಳ ಹೂ : ನೀವು ಗೋರಂಟಿಯಲ್ಲಿ ದಾಸವಾಳ ಹೂಗಳನ್ನು ಸೇರಿಸಬಹುದು. ಒಣಗಿದ ದಾಸವಾಳ ಹೂಗಳನ್ನು ಮೆಹಂದಿಗೆ ಮಿಶ್ರಣ ಮಾಡಿ. ಇದನ್ನು ನಿಮ್ಮ ಕೂದಲಿಗೆ ಹಚ್ಚುವುದರಿಂದ ನಿಮ್ಮ ಕೂದಲಿನ ಬಣ್ಣ ಸುಧಾರಿಸುತ್ತದೆ. ದಾಸವಾಳದ ಹೂವುಗಳು ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡುತ್ತದೆ.
ಅಲೋ ವೆರಾ : ತಾಜಾ ಅಲೋ ತಿರುಳನ್ನು ಗೋರಂಟಿಯಲ್ಲಿ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲು ಚೆನ್ನಾಗಿ ಹೈಡ್ರೀಕರಿಸುತ್ತದೆ. ಅಲೋವೆರಾ ನಮ್ಮ ಕೂದಲನ್ನು ಮೃದು ಮತ್ತು ಸ್ಟ್ರಾಂಗ್ ಮಾಡುತ್ತದೆ. ಮೇಲಾಗಿ ಇದನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಹೊಳೆಯುತ್ತದೆ.
ಮೊಟ್ಟೆ : ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲಗಳಾಗಿವೆ. ಇವುಗಳನ್ನು ಗೋರಂಟಿಯಲ್ಲಿ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲಿಗೆ ಹೆಚ್ಚುವರಿ ಪೋಷಣೆ ಸಿಗುತ್ತದೆ. ಮೊಟ್ಟೆಗಳು ನಮ್ಮ ಕೂದಲನ್ನು ಬಲಿಷ್ಠಗೊಳಿಸುತ್ತವೆ. ಇದು ಕೂದಲನ್ನು ಹೆಚ್ಚು ಹೊಳೆಯುವಂತೆ ಮಾಡುತ್ತದೆ.