krishna blessings indication on leg: ದ್ವಾಪರಯುಗದ ಶ್ರೀಕೃಷ್ಣನನ್ನು ಪೂಜಿಸಿ ಶುಭ ಫಲಗಳನ್ನು ಕರುಣಿಸಲೆಂದು ಬೇಡಿಕೊಳ್ಳಲಾಗುತ್ತದೆ. ಅಷ್ಟೇ ಅಲ್ಲದೆ, ನಂದಲೋಲ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆಯೇ ಇದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಬಾಲ್ಯದಿಂದಲೂ ಚೇಷ್ಟೆ ಮಾಡುತ್ತಾ ತನ್ನ ಪವಾಡಗಳಿಂದಲೇ ಜನಮನ ಗೆದ್ದ ಬಾಲಗೋಪಾಲನ ಪಾದದಲ್ಲಿ ಕೆಲವು ಪವಿತ್ರ ಗುರುತುಗಳಿದ್ದವು. ಈ ಬಗ್ಗೆ ಕೆಲವು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಈ ಗುರುತುಗಳು ಕಲಿಯುಗದಲ್ಲಿ ಜನಿಸಿದ ಮಾನವ ಕುಲದ ಕೆಲವರಲ್ಲಿ ಕಂಡುಬರುತ್ತದೆ ಎಂದೂ ಹೇಳಲಾಗುತ್ತದೆ. ಒಂದು ವೇಳೆ ಶ್ರೀಕೃಷ್ಣನ ಪಾದದಲ್ಲಿದ್ದ ಆ ಚಿಹ್ನೆಗಳು ನಿಮ್ಮ ಪಾದದಲ್ಲೂ ಇದ್ದರೆ, ನಿಮಗೆ ಐಶ್ವರ್ಯವೇ ಧರೆಗಿಳಿದು ಬರಲಿದೆ. ಶ್ರೀಕೃಷ್ಣನ ಪಾದದಲ್ಲಿದ್ದ ಆ ವಿಶೇಷ ಚಿಹ್ನೆಗಳಾವುವು? ಎಂಬುದನ್ನು ಮುಂದೆ ತಿಳಿದುಕೊಳ್ಳೋಣ
ಶ್ರೀ ಕೃಷ್ಣನ ಪಾದದಲ್ಲಿ ಅರ್ಧ ಚಂದ್ರಾಕೃತಿಯ ಚಿಹ್ನೆ ಇತ್ತು ಎಂದು ಹೇಳಲಾಗುತ್ತದೆ. ಈ ಚಿಹ್ನೆ ನಿಮ್ಮ ಕಾಲಲಿದ್ದರೆ, ನಿಮ್ಮಷ್ಟು ಅದೃಷ್ಟವಂತರು ಮತ್ಯಾರು ಇಲ್ಲ. ನೀವು ಕೈಯಿಟ್ಟ ಕಾರ್ಯದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ.
ವಿಷ್ಣುವಿನ ಅವತಾರವಾದ ಶ್ರೀ ಕೃಷ್ಣನ ಪಾದದಲ್ಲಿ ಮತ್ಸ್ಯ ಚಿಹ್ನೆ ಇತ್ತು ಎನ್ನಲಾಗಿದೆ. ಇದು ಬಹಳ ಶುಭ ಚಿಹ್ನೆಯಾಗಿದ್ದು, ಪ್ರತೀ ಕಾರ್ಯದಲ್ಲೂ ಶ್ರೀಕೃಷ್ಣನ ಅನುಗ್ರಹ ಇರುತ್ತದೆ.
ಶಂಖವೆಂಬುದು ಲಕ್ಷ್ಮೀದೇವಿಗೆ ತುಂಬಾ ಪ್ರಿಯವಾದುದು, ಜೊತೆಗೆ ಸಮುದ್ರ ಮಥನದ ಸಮಯದಲ್ಲಿ ಉದ್ಭವಗೊಂಡ ದೈವೀ ಅಂಶ. ಈ ಶಂಖದ ಚಿಹ್ನೆಯೂ ಶ್ರೀಕೃಷ್ಣನ ಪಾದದಲ್ಲಿ ಕಂಡುಬಂದಿದೆ.
ಇನ್ನು ಶ್ರೀಕೃಷ್ಣನ ಪಾದದಲ್ಲಿ ಬಿಲ್ಲಿನ ಚಿಹ್ನೆ ಕೂಡ ಇತ್ತು ಎನ್ನಲಾಗಿದೆ. ಈ ಚಿಹ್ನೆ ನಿಮ್ಮ ಪಾದದಲ್ಲೂ ಇದ್ದರೆ ಶೌರ್ಯ, ಧೈರ್ಯವಂತರಾಗಿರುತ್ತೀರಿ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)