Vastu Shastra: ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದರ ಪ್ರಕಾರ, ಕೆಲಸಗಳನ್ನು ಮಾಡಿದರೆ ವ್ಯಕ್ತಿಯು ಯಶಸ್ಸಿನ ಕಡೆ ಸಾಗುತ್ತಾನೆ ಎಂದು ನಂಬಲಾಗಿದೆ. ಒಂದು ವೇಳೆ ತಪ್ಪುಗಳನ್ನು ಮಾಡಿದರೆ, ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ವಾಸ್ತು ಶಾಸ್ತ್ರದಲ್ಲಿ, ಅಂತಹ ಅನೇಕ ವಿಷಯಗಳ ಬಗ್ಗೆ ಹೇಳಲಾಗಿದೆ. ಆ ವಿಚಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ವ್ಯಕ್ತಿಯು ಪ್ರಗತಿ ಹೊಂದಬಹುದು. ಇನ್ನು ಕೆಲವೊಂದು ವಸ್ತುಗಳನ್ನು ಬೇರೊಬ್ಬರಿಂದ ಪಡೆಯಬಾರದು ಎಂಬ ಹೇಳಲಾಗುತ್ತದೆ. ಅಂತಹ ವಸ್ತುಗಳು ಯಾವುದೆಂದು ತಿಳಿಯೋಣ.
ರಾತ್ರಿ ಮಲಗುವ ಸಂದರ್ಭದಲ್ಲಿ ನೀವು ನಿಮ್ಮ ಹಾಸಿಗೆಯನ್ನು ಮಾತ್ರ ಬಳಸಬೇಕು. ಇತರರ ಹಾಸಿಗೆಯ ಮೇಲೆ ಮಲಗುವುದರಿಂದ ವಾಸ್ತು ದೋಷಗಳು ಉಂಟಾಗುತ್ತವೆ. ಜತೆಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇನ್ನು ಬೇರೊಬ್ಬರ ವಾಚ್ ಗಳನ್ನು ಧರಿಸುವುದು ಕೂಡ ಒಳ್ಳೆಯದಲ್ಲ. ಗಡಿಯಾರವನ್ನು ಜೀವನದ ಸ್ಥಿತಿಗೆ ಹೋಲಿಸಲಾಗುತ್ತದೆ. ಒಂದು ವೇಳೆ ಬೇರೆಯವರ ಕೈಗಡಿಯಾದ ಧರಿಸಿದರೆ ಅಥವಾ ಕಸಿದುಕೊಂಡರೆ, ಅವರಲ್ಲಿರುವ ಸಮಸ್ಯೆಗಳು ನಿಮಗೆ ತೊಂದರೆಯನ್ನು ನೀಡಬಹುದು.
ಅನೇಕ ಜನರಿಗೆ ಬೇರೆಯವರಿಂದ ಪೆನ್ ಅಥವಾ ಪೆನ್ಸಿಲ್ ಕೇಳುವ ಅಭ್ಯಾಸವಿರುತ್ತದೆ. ಅಥವಾ ಇನ್ನೂ ಕೆಲವರು ಇಂತಹ ವಸ್ತುಗಳನ್ನು ಕಳ್ಳತನ ಮಾಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಹೀಗೆ ಮಾಡುವುದು ಅಶುಭ ಲಕ್ಷಣ. ಜೊತೆಗೆ ಆರ್ಥಿಕ ಸಮಸ್ಯೆ ಕೂಡ ಬರಬಹುದು.
ಅನೇಕ ಜನರಿಗೆ ಬೇರೆಯವರ ಬಟ್ಟೆಗಳನ್ನು ಧರಿಸುವ ಅಭ್ಯಾಸವಿರುತ್ತದೆ. ಹೀಗೆ ಮಾಡುವುದರಿಂದ ಆ ವ್ಯಕ್ತಿಯ ದುರದೃಷ್ಟವು ನಿಮಗೆ ಬರಬಹುದು. ಹೀಗಾಗಿ ತಪ್ಪಾಗಿಯೂ ಸಹ ಇನ್ನೊಬ್ಬರ ಬಟ್ಟೆಗಳನ್ನು ಧರಿಸಬೇಡಿ.