ರೈಲ್ವೆ ಟಿಕೆಟ್ ನಲ್ಲಿ ಯಾಕಿರುತ್ತದೆ PNR ನಂಬರ್ , ಪ್ರಯಾಣಿಕರಿಗೆ ಇದು ಹೇಗೆ ಸಹಕಾರಿ ?

PNR ಸಂಖ್ಯೆಯು 10-ಅಂಕಿಯ ವಿಶಿಷ್ಟ ಸಂಖ್ಯೆಯಾಗಿದ್ದು ಅದನ್ನು ಕಾಯ್ದಿರಿಸಲಾದ ಪ್ರತಿ ಟಿಕೆಟ್‌ಗೆ ನೀಡಲಾಗುತ್ತದೆ.

ಬೆಂಗಳೂರು :  ರೈಲಿನಲ್ಲಿ ಪ್ರಯಾನಿಸುವ ಸಲುವಾಗಿ ಟಿಕೆಟ್ ತೆಗೆದುಕೊಂಡಾಗ, ಆ ಟಿಕೆಟ್‌ನಲ್ಲಿ 10 ಅಂಕೆಗಳ PNR ಸಂಖ್ಯೆಯನ್ನು ಮುದ್ರಿಸಲಾಗುತ್ತದೆ. ಇದು ಕೇವಲ ಒಂದು ಸಂಖ್ಯೆಯಲ್ಲ. ,  ಈ ಸಂಖ್ಯೆಯು ಅನೇಕ ಉಪಯೋಗಗಳನ್ನು ಹೊಂದಿದೆ. PNR ಸಂಖ್ಯೆಯ ಪೂರ್ಣ ರೂಪ  ಅಂದರೆ ಪ್ಯಾಸೆಂಜರ್ ನೇಮ್ ರೆಕಾರ್ಡ್. ಈ ಸಂಖ್ಯೆಯು ಉಪಯುಕ್ತ ಸಂಖ್ಯೆಯಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

PNR ಸಂಖ್ಯೆಯು 10-ಅಂಕಿಯ ವಿಶಿಷ್ಟ ಸಂಖ್ಯೆಯಾಗಿದ್ದು ಅದನ್ನು ಕಾಯ್ದಿರಿಸಲಾದ ಪ್ರತಿ ಟಿಕೆಟ್‌ಗೆ ನೀಡಲಾಗುತ್ತದೆ. ಇದು ಪ್ರಯಾಣಿಕ ಅಥವಾ ಪ್ರಯಾಣಿಕರ ಜೊತೆಯಲ್ಲಿರುವ ಗುಂಪಿನ ಪ್ರಯಾಣದ ವಿವರವನ್ನು ಒಳಗೊಂಡಿರುತ್ತದೆ.   

2 /5

ಪಿಎನ್‌ಆರ್ ಸಂಖ್ಯೆಯಿಂದ ಟಿಕೆಟ್‌ನ ಸ್ಟೇಟಸ್ ತಿಳಿಯುತ್ತದೆ. ಅಂದರೆ, PNR ಸಂಖ್ಯೆಯು ಕಾಯ್ದಿರಿಸಿದ ರೈಲು ಟಿಕೆಟ್‌ನ ಪ್ರಸ್ತುತ ಸ್ಥಿತಿಯನ್ನು ದೃಢೀಕರಿಸಿ, ವೈಟಿಂಗ್ ಲಿಸ್ಟ್ ಅಥವಾ  RAC ಅನ್ನು ತೋರಿಸುತ್ತದೆ.

3 /5

ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ  ಡೇಟಾಬೇಸ್ ಅನ್ನು ನಡೆಸುತ್ತದೆ. ಇದರಲ್ಲಿ ಪ್ರಯಾಣಿಕರ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಐಆರ್‌ಸಿಟಿಸಿ ವೆಬ್‌ಸೈಟ್, ಖಾಸಗಿ ಟ್ರಾವೆಲ್ ವೆಬ್‌ಸೈಟ್‌ಗಳು ಅಥವಾ ಟಿಕೆಟ್ ಕೌಂಟರ್‌ಗಳಲ್ಲಿ ಒಬ್ಬ ವ್ಯಕ್ತಿಯು ಭಾರತೀಯ ರೈಲ್ವೆಗೆ ಟಿಕೆಟ್ ಖರೀದಿಸಿದಾಗ ಪ್ರತಿ ಬಾರಿಯೂ ಸಿಸ್ಟಮ್ 10-ಅಂಕಿಯ PNR ಸಂಖ್ಯೆಯನ್ನು ಜನರೇಟ್ ಮಾಡುತ್ತದೆ. 

4 /5

ಒಂದು PNR ಸಂಖ್ಯೆಗೆ ಗರಿಷ್ಠ ಆರು ಪ್ರಯಾಣಿಕರು ಮಾತ್ರ ಸೇರಬಹುದು. ಅಂದರೆ, ಒಮ್ಮೆ  ಗರಿಷ್ಠ ಆರು ಜನರಿಗೆ ಟಿಕೆಟ್ ಕಾಯ್ದಿರಿಸಬಹುದು.   

5 /5

PNR ಸಂಖ್ಯೆಯಲ್ಲಿ, ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ, ಬರ್ತ್ ಆದ್ಯತೆ, ರೈಲು ಸಂಖ್ಯೆ, ದಿನಾಂಕ, ಬೋರ್ಡಿಂಗ್ ನಿಲ್ದಾಣ, ವರ್ಗ, ಕೋಟಾ ಇತ್ಯಾದಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.