ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಪಾರಾಗಲು ಇಂದಿನಿಂದಲೇ ನಿಮ್ಮ ಆಹಾರದಲ್ಲಿರಲಿ ಈ 5 ಆರೋಗ್ಯಕರ ಎಣ್ಣೆ

Cooking Oils To Reduce Bad Cholesterol: ಅಧಿಕ ಕೊಲೆಸ್ಟ್ರಾಲ್ ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನು ತಪ್ಪಿಸಲು ನಿಮ್ಮ ದೈನಂದಿನ ಆಹಾರದಲ್ಲಿ ಆರೋಗ್ಯಕರ ಅಡುಗೆ ಎಣ್ಣೆಗಳನ್ನು ಬಳಸುವುದು ಹೆಚ್ಚು ಸೂಕ್ತವಾಗಿದೆ. ಅಂತಹ ಆರೋಗ್ಯಕರ ಅಡುಗೆ ಎಣ್ಣೆಗಳ ಬಗ್ಗೆ ಇಲ್ಲಿದೆ ಮಾಹಿತಿ.

Cooking Oils To Reduce Bad Cholesterol: ಪ್ರಸ್ತುತ ಬಿಪಿ, ಶುಗರ್ ನಂತೆಯೇ ಕೆಟ್ಟ ಕೊಲೆಸ್ಟ್ರಾಲ್ ಕೂಡ ಬಹುತೇಕ ಜನರ ಸಾಮಾನ್ಯ ಸಮಸ್ಯೆ ಆಗಿದೆ. ವಾಸ್ತವವಾಗಿ, ಪಿತ್ತರಸ, ವಿಟಮಿನ್ ಡಿ, ಸ್ಟೀರಾಯ್ಡ್ ಹಾರ್ಮೋನುಗಳು ಮತ್ತು ಜೀವಕೋಶ ಪೊರೆಗಳ ಉತ್ಪಾದನೆಗೆ ಕೊಲೆಸ್ಟ್ರಾಲ್ ಬಹಳ ಮುಖ್ಯ. ಆದರೆ, ಅಧಿಕ ಕೊಲೆಸ್ಟ್ರಾಲ್ ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನು ತಪ್ಪಿಸಲು ನಿಮ್ಮ ದೈನಂದಿನ ಆಹಾರದಲ್ಲಿ ಆರೋಗ್ಯಕರ ಅಡುಗೆ ಎಣ್ಣೆಗಳನ್ನು ಬಳಸುವುದು ಹೆಚ್ಚು ಸೂಕ್ತವಾಗಿದೆ. ಅಂತಹ ಆರೋಗ್ಯಕರ ಅಡುಗೆ ಎಣ್ಣೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಆಲಿವ್ ಎಣ್ಣೆ:  ತುಂಬಾ ಪೌಷ್ಟಿಕಾಂಶವೆಂದು ಪರಿಗಣಿಸಲಾಗಿರುವ ಆಲಿವ್ ಎಣ್ಣೆಯು ಮೊನೊಸಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಆಲಿವ್ ಎಣ್ಣೆ ಬಳಸಿ ಮಧ್ಯಮ ಉರಿಯಲ್ಲಿ ಆಹಾರ ತಯಾರಿಸುವುದರಿಡ್ನ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.

2 /5

ಕಡಲೆಕಾಯಿ ಎಣ್ಣೆ: ಮಾಂಸಾಹಾರ ತಯಾರಿಕೆಗೆ ಕಡಲೆಕಾಯಿ ಎಣ್ಣೆಯನ್ನು ಹೆಚ್ಚು ಸೂಕ್ತ ಎಂದು ಪರಿಗಣಿಸಲಾಗುತ್ತದೆ. 

3 /5

ಎಳ್ಳಿನ ಎಣ್ಣೆ: ಉತ್ತಮ ಆರೋಗ್ಯಕ್ಕೆ ಎಳ್ಳೆಣ್ಣೆ ಅಥವಾ ಎಳ್ಳಿನ ಎಣ್ಣೆಯನ್ನು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. ಈ ಎಣ್ಣೆ ರುಚಿಕರ ಮಾತ್ರವಲಾಲ್ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಕೂಡ ಪ್ರಯೋಜನಕಾರಿ ಆಗಿದೆ.

4 /5

ಆವಕಾಡೊ ಎಣ್ಣೆ: ಆವಕಾಡೊ ಹಣ್ಣಿನ ತಿರುಲತ್ತು ಒತ್ತಿ ತಯಾರಿಸಲ್ಪಡುವ ಈ ಎಣ್ಣೆಯು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

5 /5

ಚಿಯಾ ಸೀಡ್ಸ್ ಆಯಿಲ್: ಚಿಯಾ ಸೀಡ್ಸ್ ಆಯಿಲ್ ನಲ್ಲಿ ಆಲ್ಫಾ-ಲಿನೋಲೆನಿಕ್ ಆಮ್ಲ ಹೇರಳವಾಗಿ ಕಂಡು ಬರುತ್ತದೆ. ಇದು ಹೃದಯದ ಆರೋಗ್ಯಕ್ಕೆ ಅಗತ್ಯವಾದ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿದ್ದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.