India@75: ಈ ಸ್ವಾತಂತ್ರ್ಯ ದಿನಾಚರಣೆಯಲ್ಲಿ ದೇಶಭಕ್ತಿ ಚಿಮ್ಮಿಸುವ ಚಿತ್ರಗೀತೆಗಳನ್ನು ಕೇಳಿ ಆನಂದಿಸಿ

ದೇಶಭಕ್ತಿಯನ್ನು ಚಿಮ್ಮಿಸುವ ಕೆಲವು ಸೂಪರ್ ಹಿಟ್ ಹಿಂದಿ ಹಾಡುಗಳ ಪಟ್ಟಿ ಇಲ್ಲಿವೆ.

ದೇಶದಾದ್ಯಂತ 75ನೇ ಸ್ವಾಂತ್ರ್ಯೋತ್ಸವದ ಸಂಭ್ರಮ ಕಳೆಗಟ್ಟಿದೆ. ಆಗಸ್ಟ್ 15ರ ದಿನವು ಎಲ್ಲಾ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ಬ್ರಿಟಿಷ್ ಆಡಳಿತದ ದೌರ್ಜನ್ಯದಿಂದ ದೇಶವನ್ನು ಮುಕ್ತಗೊಳಿಸಲು ಹಲವಾರು ವರ್ಷಗಳಿಂದ ಹೋರಾಡಿದ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನವನ್ನು ದೇಶವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತದೆ.

ನಮ್ಮ ದೇಶದ ಸುರಕ್ಷತೆಗಾಗಿ ಗಡಿಗಳಲ್ಲಿ ಮತ್ತು ಬೇರೆ ಬೇರೆ ಸ್ಥಳಗಳಲ್ಲಿ ಹೋರಾಡುವ ನಮ್ಮ ಕೆಚ್ಚೆದೆಯ ವೀರ ಸೈನಿಕರು ಮತ್ತು ರಕ್ಷಣಾ ಸಿಬ್ಬಂದಿಗಳಿಗೆ ದೇಶದ ಜನರು ನಮನ ಸಲ್ಲಿಸುವ ದಿನವಿದು. ಈ ಸ್ವಾತಂತ್ರ್ಯ ದಿನಾಚರಣೆಯಂದು ನಮ್ಮ ಎಲ್ಲಾ ಧೈರ್ಯಶಾಲಿಗಳಿಗೆ ಗೌರವ ಸಲ್ಲಿಸಲು ನಿಮ್ಮಲ್ಲಿ ದೇಶಭಕ್ತಿ ಭಾವನೆಯನ್ನು ಚಿಮ್ಮಿಸುವ ಕೆಲವು ಸೂಪರ್ ಹಿಟ್ ಹಿಂದಿ ಹಾಡುಗಳ ಪಟ್ಟಿ ಇಲ್ಲಿವೆ ನೋಡಿ…

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ದೇಶಭಕ್ತಿ ಮತ್ತು ನಮ್ಮ ದೇಶದ ಮೇಲಿನ ಪ್ರೀತಿಯ ಬಗ್ಗೆ ಮಾತನಾಡುವಾಗ ಮನಸ್ಸಿಗೆ ಬರುವ ಮೊದಲ ಹಾಡು ‘ವಂದೇ ಮಾತರಂ’. ಇದು ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಸಂಗೀತ ನಿರ್ದೇಶನದ ಪ್ರಸಿದ್ಧ ಹಾಡಾಗಿದೆ. ಅನೇಕ ಕಲಾವಿದರು ಕೂಡ ಈ ಹಾಡಿಗಾಗಿ ಕೆಲಸ ಮಾಡಿದ್ದಾರೆ. ‘ವಂದೇ ಮಾತರಂ’ ಭಾರತದ ರಾಷ್ಟ್ರಗೀತೆಯಾಗಿದೆ.

2 /5

‘ತೇರಿ ಮಿಟ್ಟಿ’ ದೇಶಭಕ್ತಿ ಗೀತೆಗಳ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಯಾಗಿದೆ. ಬಿ.ಫಾರೆಕ್ ಹಾಡಿರುವ ಈ ಹಾಡು ಅಕ್ಷಯ್ ಕುಮಾರ್ ಮತ್ತು ಪರಿಣಿತಿ ಚೋಪ್ರಾ ಅಭಿನಯದ ‘ಕೇಸರಿ’ ಚಿತ್ರದ ಹಾಡಾಗಿದೆ. ಸೈನಿಕರ ತ್ಯಾಗ, ಬಲ ಮತ್ತು ದೇಶದ ಮೇಲಿನ ಪ್ರೀತಿಯನ್ನು ಇದು ಪ್ರತಿಬಿಂಬಿಸುತ್ತದೆ.

3 /5

‘ಚಕ್ ದೇ ಇಂಡಿಯಾ’ ಚಿತ್ರದ ಈ ಹಾಡು ದೇಶಭಕ್ತಿ ಮಾತ್ರವಲ್ಲ ನಿಮ್ಮ ಮನಸ್ಥಿತಿಯನ್ನೂ ಬದಲಾಯಿಸುತ್ತದೆ. ಶಾರೂಖ್ ಖಾನ್ ಮತ್ತು ಮಹಿಳಾ ಹಾಕಿ ತಂಡದ ಹುಡುಗಿಯರು ತಮ್ಮ ಅಂತಾರಾಷ್ಟ್ರೀಯ ಸ್ಪರ್ಧೆಗೆ ತಯಾರಿ ನಡೆಸಿದಾಗ ಈ ಹಾಡು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತದೆ. ಹಲವು ವರ್ಷಗಳಿಂದ ‘ಚಕ್ ದೇ ಇಂಡಿಯಾ’ ಹಾಡು ಹಲವಾರು ಭಾರತೀಯರಿಗೆ ವಿಭಿನ್ನ ಕಾರ್ಯಕ್ಷೇತ್ರಗಳಲ್ಲಿ ಪ್ರೇರಣೆಯಾಗಿದೆ.

4 /5

‘ಸಂದೇಸೆ ಆತೇ ಹೈ’ ಬಹಳ ಹಳೆಯ ಮತ್ತು ಭಾವನಾತ್ಮಕ ಹಾಡು. ಜಾವೇದ್ ಅಖ್ತರ್ ಬರೆದಿದ್ದು, ಅನು ಮಲಿಕ್ ಸಂಯೋಜಿಸಿದ್ದಾರೆ. ಈ ಹಾಡನ್ನು ರೂಪ್ ಕುಮಾರ್ ರಾಥೋಡ್ ಮತ್ತು ಸೋನು ನಿಗಮ್ ಹಾಡಿದ್ದಾರೆ. ‘ಬಾರ್ಡರ್’ ಚಿತ್ರದ ಈ ಹಾಡು ದೇಶವನ್ನು ರಕ್ಷಿಸಲು ತಮ್ಮ ಕುಟುಂಬದಿಂದ ದೂರವಿರುವ ಸೈನಿಕರ ನೋವು, ಸಂಕಟ ಮತ್ತು ಹಂಬಲವನ್ನು ಸೂಕ್ತವಾಗಿ ವಿವರಿಸುತ್ತದೆ.

5 /5

ಮಹಾಲಕ್ಷ್ಮಿ ಅಯ್ಯರ್ ಹಾಡಿರುವ ‘ದೇಸ್ ರಂಗೀಲಾ’ 2006ರಲ್ಲಿ ಅಮೀರ್ ಖಾನ್ ಮತ್ತು ಕಾಜೋಲ್ ನಟಿಸಿದ ‘ಫನಾ’ ಚಿತ್ರದ ಹಾಡಾಗಿದೆ. ಈ ಹಾಡಿನಲ್ಲಿ ನಟಿ ನಮ್ಮ ದೇಶದ ವೈಭವ ಮತ್ತು ವೈವಿಧ್ಯತೆಯನ್ನು ಎತ್ತಿ ತೋರಿಸುವ ನೃತ್ಯ ಪ್ರದರ್ಶನ ನೀಡುತ್ತಾರೆ.