66ನೇ ವಯಸ್ಸಿನಲ್ಲಿ 2ನೇ ಮದುವೆಯಾದ ಭಾರತೀಯ ಕ್ರಿಕೆಟಿಗ; ಚುಂಬನದ ಫೋಟೋ ವೈರಲ್!

ಇಬ್ಬರ ವಯಸ್ಸಿನಲ್ಲೂ 28 ವರ್ಷಗಳ ವ್ಯತ್ಯಾಸವಿದ್ದು, ಈ ಜೋಡಿಯ ವಿವಾಹದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ.

ಭಾರತದ ಮಾಜಿ ಕ್ರಿಕೆಟಿಗ ಅರುಣ್ ಲಾಲ್ 66ನೇ ವಯಸ್ಸಿನಲ್ಲಿ 2ನೇ ಮದುವೆಗೆ ಆಗುವ ಮೂಲಕ ಸುದ್ದಿಯಲ್ಲಿದ್ದಾರೆ. ಅವರು 38 ವರ್ಷದ ಬುಲ್ಬುಲ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಇಬ್ಬರ ವಯಸ್ಸಿನಲ್ಲೂ 28 ವರ್ಷಗಳ ವ್ಯತ್ಯಾಸವಿದ್ದು, ಈ ಜೋಡಿಯ ವಿವಾಹದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಮೇ 2ರಂದು ಅರುಣ್ ಲಾಲ್ ಮತ್ತು ಅವರ ಗೆಳತಿ ಬುಲ್ಬುಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಭಾರತದ ಮಾಜಿ ಓಪನರ್ ಅರುಣ್ ಲಾಲ್ 66ನೇ ವಯಸ್ಸಿನಲ್ಲಿ ಬುಲ್ಬುಲ್ ಸಹಾ ಅವರನ್ನು ವಿವಾಹವಾಗಿದ್ದಾರೆ. ಇಬ್ಬರೂ ಬಹಳ ದಿನಗಳಿಂದ ಪರಸ್ಪರ ಪರಿಚಿತರಾಗಿದ್ದರು. ಅರುಣ್ ಮತ್ತು ಬುಲ್ಬುಲ್ 1 ತಿಂಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಬ್ಬರೂ ದೀರ್ಘಕಾಲ ಸಂಬಂಧ ಹೊಂದಿದ್ದರು. ಇತ್ತೀಚೆಗೆ ಇವರಿಬ್ಬರ ಅರಿಶಿನ ಶಾಸ್ತ್ರದ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

2 /5

ಅರುಣ್ ಲಾಲ್ ಈ ಹಿಂದೆ ರೀನಾ ಎಂಬುವರನ್ನು ಮದುವೆಯಾಗಿದ್ದರು. ರೀನಾ ಅವರು ಅರುಣ್ ಅವರ 2ನೇ ಮದುವೆಗೆ ಒಪ್ಪಿಗೆ ನೀಡಿದ್ದರು. ಹೀಗಾಗಿ  ಬುಲ್ಬುಲ್ ಜೊತೆ ಅವರು ಮದುವೆಯಾದರು. ರೀನಾ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ತನ್ನ ಗಂಡನ 2ನೇ ಮದುವೆಯಿಂದ ಅವರು ತುಂಬಾ ಖುಷಿಯಲ್ಲಿದ್ದಾರಂತೆ.

3 /5

ಅರುಣ್ ಲಾಲ್ ಮತ್ತು ಬುಲ್ಬುಲ್ ಸಹಾ ಅವರ ವಿವಾಹದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಕೋಲ್ಕತ್ತಾದ ಹೋಟೆಲ್‌ನಲ್ಲಿ ಅರುಣ್ ಲಾಲ್ ಮದುವೆ ನಡೆದಿದೆ. ಅರುಣ್ ಲಾಲ್ ಬುಲ್ಬುಲ್ ಸಾಹಾಗೆ ಮುತ್ತಿಟ್ಟಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ.

4 /5

ಅರುಣ್ ಲಾಲ್ ಉತ್ತರ ಪ್ರದೇಶದ ಮೊರಾದಾಬಾದ್‍ನಲ್ಲಿ 1955ರಲ್ಲಿ ಜನಿಸಿದರು. ಅರುಣ್ ಕೂಡ ಕೆಲವು ದಿನಗಳ ಕಾಲ ಕಾಮೆಂಟರಿ ಮಾಡಿದ್ದರು. ಆದರೆ, 2016ರಲ್ಲಿ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ನಂತರ ಅವರು ಕಾಮೆಂಟರಿ ನಿಲ್ಲಿಸಿದರು. ಅರುಣ್ ಅವರು ಬಂಗಾಳ ಕ್ರಿಕೆಟ್ ತಂಡದ ಕೋಚ್ ಆಗಿದ್ದಾರೆ. 

5 /5

ಅರುಣ್ ಲಾಲ್ ಅವರು 1982 ಮತ್ತು 89ರ ನಡುವೆ ಭಾರತಕ್ಕಾಗಿ ಒಟ್ಟು 16 ಟೆಸ್ಟ್ ಮತ್ತು 13 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ ಅವರು ಟೆಸ್ಟ್‌ನಲ್ಲಿ 729 ಮತ್ತು ಏಕದಿನ ಪಂದ್ಯಗಳಲ್ಲಿ 122 ರನ್ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ ಟೆಸ್ಟ್‌ನಲ್ಲಿ 6 ಅರ್ಧಶತಕಗಳು ಮತ್ತು ಏಕದಿನದಲ್ಲಿ 1 ಅರ್ಧಶತಕ ಮೂಡಿಬಂದಿವೆ.