ಆರ್‌ಸಿಬಿ ಆಟಗಾರ್ತಿ ಶ್ರೇಯಾಂಕಾ ಪಾಟೀಲ್‌ ನಿಜವಾದ ವಯಸ್ಸೆಷ್ಟು ಗೊತ್ತಾ? ಚಿಕ್ಕ ವಯಸ್ಸಿನಲ್ಲೇ ಇಷ್ಟು ದೊಡ್ಡ ಸಾಧನೆ ಮಾಡಿದ್ರು ನಮ್ಮ ಬೆಂಗಳೂರು ಬೆಡಗಿ!

RCB Player Shreyanka Patil Real Age: ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2024 ಪಂದ್ಯದಲ್ಲಿ ಶ್ರೇಯಾಂಕಾ ಪಾಟೀಲ್ 3.3 ಓವರ್ ಬೌಲ್ ಮಾಡಿ 12 ರನ್ ನೀಡಿ 4 ವಿಕೆಟ್ ಪಡೆದು ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ಇದೀಗ ಈ ಬೆಂಗಳೂರು ಬೆಡಗಿಯ ನಿಜವಾದ ವಯಸ್ಸಿನ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ.. 
 

1 /5

ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2024 (ಡಬ್ಲ್ಯುಪಿಎಲ್ 2024) ಫೈನಲ್ ಪಂದ್ಯದಲ್ಲಿ ಶ್ರೇಯಾಂಕಾ ಪಾಟೀಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಊಹಿಸಲೂ ಸಾಧ್ಯವಾಗದ ಸಾಧನೆ ಮಾಡಿದ್ದಾರೆ.  

2 /5

ಶ್ರೇಯಾಂಕಾ ಪಾಟೀಲ್ ಅವರು 31 ಜುಲೈ 2002 ರಂದು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು. ಸದ್ಯ ಇವರಿಗೆ 21 ವರ್ಷ.. ವಿರಾಟ್ ಕೊಹ್ಲಿಯವರನ್ನು ರೋಲ್‌ ಮಾಡೆಲ್‌ ಆಗಿ ಇಟ್ಟುಕೊಂಡ ಈ ಚೆಲುವೆ ತನ್ನ 9 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು.   

3 /5

ಇನ್ನು ಶ್ರೇಯಾಂಕಾ ಪಾಟೀಲ್ ಅತ್ಯುತ್ತಮ ಆಫ್ ಸ್ಪಿನ್ ಬೌಲರ್. ಭಾರತದ ಪರ 2 ಏಕದಿನ ಪಂದ್ಯಗಳಲ್ಲಿ 4 ವಿಕೆಟ್ ಹಾಗೂ 6 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ 8 ವಿಕೆಟ್ ಪಡೆದಿದ್ದಾರೆ..   

4 /5

ವಿದೇಶಿ ಲೀಗ್‌ಗೆ ಒಪ್ಪಂದ ಮಾಡಿಕೊಂಡ ಮೊದಲ ಭಾರತೀಯ ಮಹಿಳಾ ಕ್ರಿಕೆಟಿರ್ ಶ್ರೇಯಾಂಕಾ ಪಾಟೀಲ್‌.. ನಿನ್ನೆ ನಡೆದ ಪಂದ್ಯದಲ್ಲಿ 3.3 ಓವರ್ ಬೌಲ್ ಮಾಡಿ 12 ರನ್ ನೀಡಿ 4 ವಿಕೆಟ್ ತಮ್ಮ ಖಾತೆಯಲ್ಲಿ ಸೇರಿಸಿಕೊಂಡು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮ್ಯಾಗ್ ಲ್ಯಾನಿಂಗ್ (23), ಮಿನ್ನು ಮಣಿ (5), ಅನುರಾಧಾ ರೆಡ್ಡಿ (10) ಮತ್ತು ತಾನಿಯಾ ಭಾಟಿಯಾ (0) ಅವರನ್ನು ಫೈನಲ್ ಪಂದ್ಯದಲ್ಲಿ ಶ್ರೇಯಾಂಕಾ ಪಾಟೀಲ್ ಔಟ್ ಮಾಡಿದರು.   

5 /5

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಶ್ರೇಯಾಂಕಾ ಪಾಟೀಲ್ ಅವರಿಗೆ ಡಬ್ಲ್ಯುಪಿಎಲ್ 2024 ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಕ್ಕಾಗಿ ಪರ್ಪಲ್ ಕ್ಯಾಪ್ ಪ್ರಶಸ್ತಿ ಮತ್ತು 5 ಲಕ್ಷ ರೂ. ನೀಡಲಾಗಿದೆ.. WPL 2024 ರಲ್ಲಿ ಶ್ರೇಯಾಂಕಾ ಪಾಟೀಲ್ ಗರಿಷ್ಠ 13 ವಿಕೆಟ್ ಪಡೆದು... ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡು.. ಇದಕ್ಕಾಗಿ ಅವರು ಹೆಚ್ಚುವರಿಯಾಗಿ 5 ಲಕ್ಷ ರೂ. ಪಡೆದಿದ್ದಾರೆ..