Dhruva Sarja : ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ.. ಅಬ್ಬಬ್ಬಾ ಏನ್ರೀ ಅವರ ಸ್ಟೈಲ್, ವರ್ಕ್, ಖಡಕ್ ಲುಕ್, ಡೈಲಾಗ್ ಪಾತ್ರದ ಒಳಗೆ ಹೋಗಿ ಜೀವಿಸಿಬಿಡುತ್ತಾರೆ. ನಿಮ್ಗೆ ಗೊತ್ತಿರೋ ಹಾಗೇ ಮೊನ್ನೆ ಮೊನ್ನೆಯಷ್ಟೇ ರಿಲೀಸ್ ಆಗಿರೋ ಮಾರ್ಟಿನ್ ಸಿನಿಮಾದ ಟೀಸರ್ ಎಲ್ಲೆಡೆ ಒಳ್ಳೆ ರೆಸ್ಪಾನ್ಸ್ ಪಡ್ಕೊಂಡಿದೆ. ಇದೀಗ ಧ್ರುವ ಅದೃಷ್ಟದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯೊಂದು ಶುರುವಾಗಿದೆ.
ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ.. ಅಬ್ಬಬ್ಬಾ ಏನ್ರೀ ಅವರ ಸ್ಟೈಲ್, ವರ್ಕ್, ಖಡಕ್ ಲುಕ್, ಡೈಲಾಗ್ ಪಾತ್ರದ ಒಳಗೆ ಹೋಗಿ ಜೀವಿಸಿಬಿಡುತ್ತಾರೆ. ನಿಮ್ಗೆ ಗೊತ್ತಿರೋ ಹಾಗೇ ಮೊನ್ನೆ ಮೊನ್ನೆಯಷ್ಟೇ ರಿಲೀಸ್ ಆಗಿರೋ ಮಾರ್ಟಿನ್ ಸಿನಿಮಾದ ಟೀಸರ್ ಎಲ್ಲೆಡೆ ಒಳ್ಳೆ ರೆಸ್ಪಾನ್ಸ್ ಪಡ್ಕೊಂಡಿದೆ. ಇದೀಗ ಧ್ರುವ ಅದೃಷ್ಟದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯೊಂದು ಶುರುವಾಗಿದೆ.
ಹೌದು.. ನೀವು ಧ್ರುವ ಸರ್ಜಾ ಅವರನ್ನ ಹತ್ತಿರದಿಂದ ನೋಡಿದ್ರೆ ಅವರ ಕೈಯಲ್ಲಿ ಒಂದು ಗುಳ್ಳೆ ಕಾಣಿಸುತ್ತದೆ. ಅದು ಅವರಿಗೆ ಅದೃಷ್ಟದ ಸಂಕೇತ ಅಂತ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಸೋ ಅದು ಲಕ್ಕಿ ಸಿಂಬಲ್ ಅಂತ ಹೇಳಲಾಗುತ್ತಿದೆ. ಮಾರ್ಟಿನ್ ಸಿನಿಮಾ ರಿಲೀಸ್ ಬಳಿಕ ಅದು ಕೂಡ ಇತಿಹಾಸದ ಪುಟ ಸೇರೋದು ಕನ್ಫರ್ಮ್ ಆಗಿದೆ.
ಮಾವ ಅರ್ಜುನ್ ಸರ್ಜಾ ಸಲಹೆಯಂತೆ ನಟನೆ ತರಬೇತಿ ಪಡೆದ ಧ್ರುವ, ನಿರ್ದೇಶಕ A.P ಅರ್ಜುನ್ ಅವರ 'ಅದ್ಧೂರಿ' ಚಿತ್ರಕ್ಕಾಗಿ ನಡೆಸಿದ ಆಡಿಷನ್ ನಲ್ಲಿ ಆಯ್ಕೆಯಾದರು.
2012 ರಲ್ಲಿ ತೆರೆಕಂಡ 'ಅದ್ಧೂರಿ' ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದರು.
ನಂತರ 2013 ರಲ್ಲಿ ಬಿಡುಗಡೆಗೊಂಡ 'ಬಹುದ್ಧೂರ್' ಚಿತ್ರದಲ್ಲಿ ರಾಧಿಕಾ ಪಂಡಿತ್ ಜೊತೆಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಯಶಸ್ಸು ಕಂಡರು.
2017ರಲ್ಲಿ ತೆರೆಗೆ ಬಂದ 'ಭರ್ಜರಿ' ಚಿತ್ರ ಕೂಡ ಶತದಿನ ಪೂರೈಸಿತು. ಧ್ರುವ ಸರ್ಜಾ ನಟಿಸಿದ ಮೊದಲ ಮೂರು ಚಿತ್ರಗಳು ಮೆಗಾಹಿಟ್ ಆಗಿವೆ.
ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಇವರ ಹಿರಿಯ ಸಹೋದರ. ಹಾಗೂ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಇವರ ಚಿಕ್ಕಪ್ಪ. ಈಗ ಮದ್ವೆಯಾಗಿ ಪುಟ್ಟ ಹೆಣ್ಣು ಮಗು ಕೂಡ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗಿದೆ.