ಆರೋಗ್ಯವಾಗಿದ್ದರೂ ಸಹ ಪ್ರಯಾಣದ ವೇಳೆ ಕೆಲವರಿಗೆ ವಾಮಿಟಿಂಗ್ ಸಮಸ್ಯೆ ಹೆಚ್ಚು ಕಾಡುತ್ತದೆ. ಇನ್ನೂ ಕೆಲವರಂತೂ ಈ ವಾಂತಿ ಸಮಸ್ಯೆಗೆ ಹೆದರಿ ಪ್ರಯಾಣ ಮಾಡುವುದನ್ನೇ ತಪ್ಪಿಸುತ್ತಾರೆ.
ಬೆಂಗಳೂರು: ಪ್ರಯಾಣದ ವೇಳೆ ಕೆಲವರಿಗೆ ತಲೆತಿರುಗುವಿಕೆ, ವಾಂತಿ ಅಥವಾ ವಾಕರಿಕೆ ಸಮಸ್ಯೆ ಇರುತ್ತದೆ. ಆರೋಗ್ಯವಾಗಿದ್ದರೂ ಸಹ ಪ್ರಯಾಣದ ವೇಳೆ ಕೆಲವರಿಗೆ ವಾಮಿಟಿಂಗ್ ಸಮಸ್ಯೆ ಹೆಚ್ಚು ಕಾಡುತ್ತದೆ. ಇನ್ನೂ ಕೆಲವರಂತೂ ಈ ವಾಂತಿ ಸಮಸ್ಯೆಗೆ ಹೆದರಿ ಪ್ರಯಾಣ ಮಾಡುವುದನ್ನೇ ತಪ್ಪಿಸುತ್ತಾರೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನೀವು ನಿಮ್ಮ ಟ್ರಾವೆಲ್ ಬ್ಯಾಗ್ನಲ್ಲಿ ಕೆಲವು ಚಮತ್ಕಾರಿ ವಸ್ತುಗಳನ್ನು ಕೊಂಡೊಯ್ಯುವ ಮೂಲಕ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮಗೂ ಟ್ರಾವೆಲ್ ಮಾಡುವಾಗ ವಾಂತಿ ಬರುತ್ತಾ? ಇದನ್ನು ತಪ್ಪಿಸಲು ನೀವು ಎಲ್ಲಾದರೂ ಪ್ರಯಾಣ ಮಾಡುವಾಗ ಕೆಲವು ವಸ್ತುಗಳನ್ನು ಮರೆಯದೇ ನಿಮ್ಮ ಟ್ರಾವೆಲ್ ಬ್ಯಾಗ್ನಲ್ಲಿ ಕೊಂಡೊಯ್ಯಿರಿ. ಇದರಿಂದ ನೀವು ವಾಕರಿಕೆ, ವಾಂತಿ ಸಮಸ್ಯೆಗೆ ಗುಡ್ ಬೈ ಹೇಳಿ.
ಪುದೀನ ಎಲೆಗಳು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಪ್ರಯಾಣದ ವೇಳೆ ವಾಕರಿಕೆ-ವಾಂತಿ ಬರುವಂತೆ ಭಾಸವಾಗುತ್ತಿದ್ದರೆ ಇದರ ಒಂದೆರಡು ದಳವನ್ನು ತಿನ್ನಿರಿ. ಇದು ನಿಮ್ಮ ವಾಂತಿ-ವಾಕರಿಕೆಯಂತಹ ಸಮಸ್ಯೆಗಳಿಗೆ ಸುಲಭ ಪರಿಹಾರ ನೀಡಬಲ್ಲದು.
ಆರೋಗ್ಯ ವರ್ಧಕವಗಿರುವ ನಿಂಬೆಹಣ್ಣು ಸಹ ವಾಕರಿಕೆ, ವಾಂತಿ ಸಮಸ್ಯೆಗೆ ಸುಲಭ ಪರಿಹಾರ ನೀಡಬಲ್ಲದು. ಇದಕ್ಕಾಗಿ ನೀವು ಪ್ರಯಾಣ ಮಾಡುವಾಗ ನಿಂಬೆ ಹಣ್ಣಿನ ಶರಬತ್ತನ್ನು ಸೇವಿಸಿ.
ಶುಂಠಿಯೂ ಸಹ ವಾಂತಿ ಮತ್ತು ವಾಕರಿಕೆ ಸಮಸ್ಯೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನೀವು ಪ್ರಯಾಣದ ಸಮಯದಲ್ಲಿ ಶುಂಠಿ ಕ್ಯಾಂಡಿ, ಶುಂಠಿ ಚಹಾ ಸೇವಿಸುವುದು ತುಂಬಾ ಪ್ರಯೋಜನಕಾರಿ ಆಗಿದೆ.
ಏಲಕ್ಕಿ ಬಾಳೆಯನ್ನು ಆರೋಗ್ಯದ ಗಣಿ ಎಂದು ಪರಿಗಣಿಸಲಾಗುತ್ತದೆ. ಪ್ರಯಾಣದ ಸಮಯದಲ್ಲಿ ಏಲಕ್ಕಿ ಬಾಳೆಹಣ್ಣನ್ನು ತಿನ್ನುವುದರಿಂದಲೂ ಸಹ ವಾಕರಿ,ಕೆ, ವಾಂತಿ ಸಮಸ್ಯೆಗೆ ಪರಿಹಾರ ಪಡೆಯಬಹುದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.