IPL 2021: ಮೊದಲ ಹಂತದಲ್ಲಿ ಮಿಂಚಿದ್ದ ಈ ಸ್ಟಾರ್ ಆಟಗಾರರ ಮೇಲಿದೆ ಅಭಿಮಾನಿಗಳ ಕಣ್ಣು..!

ಯುಎಇಯಲ್ಲಿ ಸೆ.19 ರಿಂದ 14ನೇ ಆವೃತ್ತಿಯ ಐಪಿಎಲ್ ಪುನರಾರಂಭವಾಗಲಿದ್ದು, ಅಕ್ಟೋಬರ್ 15ಕ್ಕೆ ಫೈನಲ್ ಪಂದ್ಯ ನಡೆಯಲಿದೆ.

ಕೊರೊನಾ ಕಾರಣದಿಂದ ಅರ್ಧಕ್ಕೆ ಸ್ಥಗಿತವಾಗಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ರಿಂದ ಮತ್ತೆ ಪುನರಾರಂಭಗೊಳ್ಳಲಿದೆ. 2ನೇ ಹಂತದ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳು ತುದಿಗಾಲ ಮೇಲೆ ನಿಂತಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆಯಲಿರುವ ಇನ್ನುಳಿದ ಪಂದ್ಯಗಳನ್ನು ಆಡಲು ಈಗಾಗಲೇ ವಿವಿಧ ತಂಡಗಳ ಆಟಗಾರರು ತರಬೇತಿ ನಡೆಸುತ್ತಿದ್ದಾರೆ. ಮೊದಲ ಹಂತದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಗಮನ ಸೆಳೆದಿದ್ದ ಆಟಗಾರರು 2ನೇ ಹಂತದಲ್ಲಿಯೂ ಅದೇ ಲಯವನ್ನು ಕಂಡುಕೊಳ್ಳಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಅಭಿಮಾನಿಗಳು ಕೂಡ ಈ ಸ್ಟಾರ್ ಆಟಗಾರರ ಮೇಲೆ ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ (RCB) ವೇಗದ ಬೌಲರ್ ಹರ್ಷಲ್ ಪಟೇಲ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಮುಂಬೈ ಇಂಡಿಯನ್ಸ್ (MI) ವಿರುದ್ಧದ ಮೊದಲ ಪಂದ್ಯದಲ್ಲಿ ಈ ವೇಗಿ 5 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದರು. ಸ್ಥಿರ ಪ್ರದರ್ಶನದೊಂದಿಗೆ ಪರ್ಪಲ್ ಕ್ಯಾಪ್‌ ಹೊಂದಿರುವ ಅವರು 7 ಪಂದ್ಯಗಳಿಂದ 17 ವಿಕೆಟ್ ಪಡೆದಿದ್ದಾರೆ.

2 /5

ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಈ ಮೊದಲು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದರು. ತಮ್ಮ ಹಿಂದಿನ ಫ್ರಾಂಚೈಸಿಗಳನ್ನು ನಿರಾಶೆಗೊಳಿಸಿದ್ದ ಗ್ಲೇನ್ ಮ್ಯಾಕ್ಸ್ ವೆಲ್ ಆರ್‌ಸಿಬಿ ಸೇರಿದ ಬಳಿಕ ಎದುರಾಳಿ ತಂಡಗಳ ವಿರುದ್ಧ ಅಬ್ಬರಿಸಿದ್ದರು. ಮೊದಲ ಹಂತದಲ್ಲಿ ತಾನಾಡಿದ 6 ಇನ್ನಿಂಗ್ಸ್‌ ಗಳಿಂದ 223 ರನ್ ಭಾರಿಸಿರುವ ಮ್ಯಾಕ್ಸ್ ವೇಲ್ ಮೇಲೆ ಆರ್‌ಸಿಬಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.  

3 /5

ಹರ್ಷಲ್ ಪಟೇಲ್ ನಂತರ ಬೌಲಿಂಗ್ ನಲ್ಲಿ ಗಮನ ಸೆಳೆದ ಮತ್ತೊಬ್ಬ ಬೌಲರ್ ಎಂದರೆ ಅವೇಶ್ ಖಾನ್. ದೆಹಲಿ ಕ್ಯಾಪಿಟಲ್ಸ್ (DC) ತಂಡದ ಬೌಲರ್ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ 2ನೇ ಬೌಲರ್ ಆಗಿದ್ದಾರೆ. 8 ಪಂದ್ಯಗಳಲ್ಲಿ ಅವರು 14 ವಿಕೆಟ್‌ ಗಳಿಸಿದ್ದಾರೆ.

4 /5

ಸಿಎಸ್‌ಕೆ ಪರ ಸತತ 5 ಅರ್ಧ ಶತಕಗಳೊಂದಿಗೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ 7 ಪಂದ್ಯಗಳಲ್ಲಿ ಸರಾಸರಿ 64.00 ರಷ್ಟು ರನ್ ಗಳಿಸಿದ್ದಾರೆ. ಮೊದಲ ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಡು ಪ್ಲೆಸಿಸ್ 2ನೇ ಹಂತದಲ್ಲಿಯೂ ತಮ್ಮ ಬ್ಯಾಟಿಂಗ್ ವೈಭವವನ್ನು ಮುಂದುವರೆಸುತ್ತಾರಾ? ಕಾದು ನೋಡಬೇಕಿದೆ.    

5 /5

ದೆಹಲಿ ಕ್ಯಾಪಿಟಲ್ಸ್ ನ ಶಿಖರ್ ಧವನ್ ಮೇಲೆಯೂ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸದ್ಯ ಆಯೇಷಾ ಮುಖರ್ಜಿಯವರಿಗೆ ವಿಚ್ಛೇದನ ನೀಡಿ ಸುದ್ದಿಯಲ್ಲಿರುವ ಧವನ್ ರನ್ನು ವಿಶ್ರಾಂತಿ ಕಾರಣ ನೀಡಿ ಟಿ 20 ವಿಶ್ವಕಪ್ ತಂಡದಿಂದ ಕೈಬಿಡಲಾಗಿದೆ. ಐಪಿಎಲ್ ಟೂರ್ನಿಯಲ್ಲಿ ಪ್ರಸ್ತುತ ಆರೆಂಜ್ ಕ್ಯಾಪ್ ಹೊಂದಿರುವ ಧವನ್ 3 ಅರ್ಧ ಶತಕ ಭಾರಿಸಿದ್ದಾರೆ.