Health Tips: ತೊಡೆಯ ತುರಿಕೆಯಿಂದ ಉಂಟಾಗುವ ದದ್ದುಗಳಿಗೆ ಮನೆಮದ್ದು ಇಲ್ಲಿದೆ ನೋಡಿ

How To Get Rid Of Itchy Thighs: ತೆಂಗಿನ ಎಣ್ಣೆಯಲ್ಲಿ ಕಂಡುಬರುವ ಆಂಟಿಫಂಗಲ್ ಗುಣಲಕ್ಷಣಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ತುರಿಕೆ, ಅಲರ್ಜಿ ಮತ್ತು ದದ್ದುಗಳಿಗೆ ಮುಕ್ತಿ ನೀಡುತ್ತದೆ.

ತೊಡೆಯ ತುರಿಕೆಯಿಂದಾಗುವ ದದ್ದುಗಳಿಗೆ​ ಮನೆಮದ್ದು: ಬಿಸಿಯಾದ ಹವಾಮಾನದಿಂದ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಪೈಕಿ ತೊಡೆಗಳಲ್ಲಿ ತುರಿಕೆ ಉಂಟಾಗುವುದು. ಇದರಿಂದ ದದ್ದುಗಳಾಗಿ ನಿಮ್ಮನ್ನು ಇನ್ನಿಲ್ಲದಂತೆ ಕಾಡುತ್ತವೆ. ಬೇಸಿಗೆಯಲ್ಲಿ ಸಾಕಷ್ಟು ಬೆವರುವಿಕೆ ಇರುತ್ತದೆ, ಇದರಿಂದ ಚರ್ಮದ ಸಮಸ್ಯೆ ಎದುರಿಸುವುದು ಅನಿವಾರ್ಯ. ಕೆಲವೊಮ್ಮೆ ಇದು ಬಿಗಿಯಾದ ಒಳ ಉಡುಪುಗಳ ಕಾರಣದಿಂದಲೂ ಸಂಭವಿಸುತ್ತದೆ. ಈ ಸಮಸ್ಯೆ ನಿರ್ಲಕ್ಷಿಸುವುದು ತುಂಬಾ ಹಾನಿಕಾರಕ. ಇದರಿಂದ ಮುಕ್ತಿ ಪಡೆಯಲು ಅಡುಗೆಮನೆಯಲ್ಲಿನ ಕೆಲವು ವಸ್ತುಗಳ ಸಹಕಾರಿಯಾಗಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.

1 /5

ಜೇನುತುಪ್ಪವು ಉರಿಯೂತದ ಮತ್ತು ನಂಜುನಿರೋಧಕ ಗುಣಲಕ್ಷಣ ಹೊಂದಿದೆ. ಇದರ ಸಹಾಯದಿಂದ ಚರ್ಮದ ದದ್ದುಗಳಿಗೆ ಮುಕ್ತಿ ನೀಡಬಹುದು. ನೀವು 2 ಚಮಚ ಜೇನುತುಪ್ಪದಲ್ಲಿ 1 ಚಮಚ ನೀರನ್ನು ಬೆರೆಸಿ ನಂತರ ಅದನ್ನು ಹತ್ತಿ ಉಂಡೆಗಳ ಸಹಾಯದಿಂದ ತುರಿಕೆ ಇರುವ ಜಾಗಕ್ಕೆ ಹಚ್ಚಿರಿ. ಜೇನುತುಪ್ಪ ಒಣಗಿದಾಗ ಅದನ್ನು ನೀರಿನಿಂದ ಸ್ವಚ್ಛಗೊಳಿಸಿ.

2 /5

ಕೊತ್ತಂಬರಿ ಸೊಪ್ಪನ್ನು ರುಬ್ಬಿ ಅದಕ್ಕೆ ನಿಂಬೆರಸ ಬೆರೆಸಿರಿ. ಇದೀಗ ಈ ಪೇಸ್ಟ್ ಅನ್ನು ತುರಿಕೆ ಇರುವ ಭಾಗಗಳಿಗೆ ಹಚ್ಚಿ ಮತ್ತು ಸುಮಾರು 20 ನಿಮಿಷಗಳ ಕಾಲ ಬಿಡಿ. ನೀವು ಈ ಪ್ರಕ್ರಿಯೆಯನ್ನು ದಿನಕ್ಕೆ 3 ಬಾರಿ ಮಾಡಿದ್ರೆ ಅದು ಉತ್ತಮ ಪ್ರಯೋಜನ ನೀಡುತ್ತದೆ.

3 /5

ಅಲೋವೆರಾ ಜೆಲ್ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ತುರಿಕೆ ಮತ್ತು ದದ್ದುಗಳಿಂದ ಪರಿಹಾರ ಪಡೆಯಲು ಸಹ ನೀವು ಇದನ್ನು ಬಳಸಬಹುದು. ನೀವು ಅಲೋವೆರಾ ಜೆಲ್ ಜೊತೆಗೆ ಟೀ ಟ್ರೀ ಎಣ್ಣೆಯ ಕೆಲವು ಹನಿಗಳನ್ನು ಮಿಶ್ರಣ ಮಾಡಿ. ಇದನ್ನು ತುರಿಕೆ ಇರುವ ಜಾಗಕ್ಕೆ ಹಚ್ಚಿ ಸ್ವಲ್ಪ ಸಮಯ ಒಣಗುವವರೆಗೆ ಕಾಯಿರಿ ನಂತರ ಶುದ್ಧ ನೀರಿನಿಂದ ತೊಳೆಯಿರಿ.

4 /5

ನೀವು ಪೂಜೆಗೆ ಕರ್ಪೂರ ಬಳಸಿರಬೇಕು, ಆದರೆ ಅದು ಚರ್ಮಕ್ಕೂ ಒಳ್ಳೆಯದು. ಕರ್ಪೂರದ ಪುಡಿಯನ್ನು ಹಚ್ಚಿದರೆ ತುರಿಕೆ, ದದ್ದುಗಳ ನಿವಾರಣೆಯಾಗುತ್ತದೆ.

5 /5

ತೆಂಗಿನ ಎಣ್ಣೆಯಲ್ಲಿ ಜೀವಸತ್ವಗಳು ಮತ್ತು ಖನಿಜಗಳಿಗೆ ಕೊರತೆಯಿಲ್ಲ. ಇದರಲ್ಲಿ ಕಂಡುಬರುವ ಆಂಟಿಫಂಗಲ್ ಗುಣಲಕ್ಷಣಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ತುರಿಕೆ, ಅಲರ್ಜಿ ಮತ್ತು ದದ್ದುಗಳಿಗೆ ಮುಕ್ತಿ ನೀಡುತ್ತದೆ. ನೀವು ಗಾಯವಾಗಿರುವ ಜಾಗಕ್ಕೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿದ್ರೆ ಪ್ರಯೋಜನ ಪಡೆಯುತ್ತೀರಿ. (ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)