ಶ್ರೀದೇವಿ ಝಲಕ್‌ನಲ್ಲಿ ಜಾನ್ವಿ : ಕೆಂಪು ಸೀರೆಯಲ್ಲಿ ಕಣ್ಕುಕ್ಕಿತು ಧಡಕ್‌ ಬೆಡಗಿ ಸೌಂದರ್ಯ..!

Janhvi Kapoor in hot red saree : ಬಾಲಿವುಡ್‌ ಸ್ಟಾರ್‌ ನಟಿ ಶ್ರೀದೇವಿ ಮಗಳ ಸೌಂದರ್ಯಕ್ಕೆ ಸರಿಸಾಟಿಯಾರು..?. ಅಮ್ಮನಂತೆ ಮಗಳೂ ಸಹ ಅಂದಗಾರ್ತಿ. ಸದ್ಯ ಜಾನ್ವಿ ತಮ್ಮ ಮುಂಬರುವ ಚಿತ್ರ 'ಮಿಲಿ' ಟ್ರೈಲರ್ ಬಿಡುಗಡೆ ಇವೆಂಟ್‌ನಲ್ಲಿ ಕೆಂಪು ಸೀರೆಯನ್ನು ಧರಿಸಿ ಹಾರ್ಟ್‌ ಮಿರ್ಚಿತರ ಕಂಗೊಳಿಸಿ ಪಡ್ಡೆ ಯುವಕರಿಗೆ ಊಟ, ನಿದ್ದೆ ಸೇರದಂತೆ ಮಾಡಿದ್ದಾರೆ.
 

  • Oct 16, 2022, 18:25 PM IST

Janhvi Kapoor in hot red saree : ಬಾಲಿವುಡ್‌ ಸ್ಟಾರ್‌ ನಟಿ ಶ್ರೀದೇವಿ ಮಗಳ ಸೌಂದರ್ಯಕ್ಕೆ ಸರಿಸಾಟಿಯಾರು..?. ಅಮ್ಮನಂತೆ ಮಗಳೂ ಸಹ ಅಂದಗಾರ್ತಿ. ಸದ್ಯ ಜಾನ್ವಿ ತಮ್ಮ ಮುಂಬರುವ ಚಿತ್ರ 'ಮಿಲಿ' ಟ್ರೈಲರ್ ಬಿಡುಗಡೆ ಇವೆಂಟ್‌ನಲ್ಲಿ ಕೆಂಪು ಸೀರೆಯನ್ನು ಧರಿಸಿ ಹಾರ್ಟ್‌ ಮಿರ್ಚಿತರ ಕಂಗೊಳಿಸಿ ಪಡ್ಡೆ ಯುವಕರಿಗೆ ಊಟ, ನಿದ್ದೆ ಸೇರದಂತೆ ಮಾಡಿದ್ದಾರೆ.
 

1 /6

ಹೌದು... ಜಾನ್ವಿ ಕಪೂರ್ ಭಾರತೀಯ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರು. ಸೌಂದರ್ಯ ಗಣಿಯಂತಿರುವ ಜಾನ್ವಿ ಲಕ್ಷಾಂತರ ಅಭಿಮಾನಿಗಳ ಜಾನ್‌. ಸದ್ಯ ʼಮಿಲಿʼ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಮೂವಿಯಲ್ಲಿ ನಟಿಸಿದ್ದು, ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ.

2 /6

ಇನ್ನು ಕೆಂಪು ಸೀರೆ ಧರಿಸಿ ಕ್ಯಾಮೆರಾಗೆ ಪೋಸ್‌ ಕೊಟ್ಟಿರುವ ಚೆಂದುಳ್ಳಿ ಚೆಲುವೆ ಹಾಟ್‌ ಫೋಟೋಸ್‌ಗಳು ಇಂಟರ್‌ನೆಟ್‌ ತಳ ಬುಡವನ್ನೆ ಅಲುಗಾಡಿಸುತ್ತಿವೆ. ಅಲ್ಲದೆ, ಜಾನ್ವಿಯನ್ನು ನೋಡಿದಾಗ ಶ್ರೀದೇವಿಯವರನ್ನ ನೋಡುವಂತೆ ಭಾಸವಾಗುತ್ತಿದೆ.

3 /6

ಶನಿವಾರ ನಡೆದ ʼಮಿಲಿʼ ಚಿತ್ರದ ಟ್ರೈಲರ್‌ ಬಿಡುಗಡೆ ಸಮಾರಂಭದಲ್ಲಿ ಜಾನ್ವಿ ಕಪೂರ್ ತನ್ನ ತಂದೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಸಹ-ನಟರಾದ ಸನ್ನಿ ಕೌಶಲ್ ಮತ್ತು ಮನೋಜ್ ಪಹ್ವಾ ಅವರೊಂದಿಗೆ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. 

4 /6

ಜಾನ್ವಿ ಮನೀಶ್ ಮಲ್ಹೋತ್ರಾ ಅವರ ಸುಂದರವಾದ ಜಾರ್ಜೆಟ್ ಸೀರೆ ಮತ್ತು ಮ್ಯಾಚಿಂಗ್ ಬ್ಲೌಸ್ ಧರಿಸಿದ್ದರು. ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೋಗನ್ನು ಹಂಚಿಕೊಂಡಿದ್ದಾರೆ, ಫೋಟೋಸ್‌ಗಳಿಗೆ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

5 /6

ಜಾನ್ವಿ ಫೋಟೋಸ್‌ಗಳಿಗೆ ಕಾಮೆಂಟ್‌ಗಳ ಮಳೆ ಸುರಿಯುತ್ತಿದೆ. "ಚಾಂದಿನಿ ಚಿತ್ರದಲ್ಲಿ ಶ್ರೀದೇವಿಯ ಝಲಕ್" ಇದು ಎಂದು ನೆಟ್ಟಿಗರು ಬರೆಯುತ್ತಿದ್ದಾರೆ. ಮತ್ತೊಬ್ಬರು, "ಬ್ಯೂಟಿ" ಲವ್‌ ಇಮೋಜಿ ಹಾಕುತ್ತಿದ್ದಾರೆ. ಕೆಲ ಅಭಿಮಾನಿಗಳಂತೂ ಹಾರ್ಟ್‌ ಮತ್ತು ಬೆಂಕಿಯ ಎಮೋಜಿಗಳನ್ನು ಬಿಟ್ಟು ಬಿಡದೆ ಕ್ಲಿಕ್‌ ಮಾಡುತ್ತಿದ್ದಾರೆ.

6 /6

ಕೆಂಪು ಸೀರೆ, ಅಂದವಾದ ಕಿವಿಯೋಲೆಗಳು, ಉಂಗುರಗಳು ಮತ್ತು ಹೈ ಹೀಲ್ಸ್‌ನಲ್ಲಿ ಯವಕರಿಗೆ ಕಿಚ್ಚೆಬ್ಬಿಸುವ ನೋಟ.. ಜಾನ್ವಿ ಅದ್ಭುತ. ನ್ಯೂಡ್ ರೂಜ್ ಲಿಪ್ ಶೇಡ್ ಹಚ್ಚಿ, ಸ್ಲೀಕ್ ಐಲೈನರ್ ಹಾಕಿ, ಡ್ಯೂ ಸ್ಕಿನ್ ಬೇಸ್, ಬ್ಲಶ್ಡ್ ಕೆನ್ನೆಗಳು, ಬೀಮಿಂಗ್ ಹೈಲೈಟರ್ ಮತ್ತು ಗ್ಲಾಮ್ ಪಿಕ್ಸ್, ಅದ್ಭುತ ಕೇಶ ವಿನ್ಯಾಸದಲ್ಲಿ ಗಂಧರ್ವ ಕನ್ಯೆಯಂತೆ ಜಾನ್ವಿ ಕಂಗೊಳಿಸುತ್ತಿದ್ದಾರೆ.