ಡಿವೋರ್ಸ್‌ ಕೊಡಲು ಪತಿಯ ಬಳಿ 900 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟ ಸ್ಟಾರ್‌ ನಟಿ..!

Jennifer Lopez: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಸೆಲೆಬ್ರಿಟಿಗಳ ಬಗ್ಗೆ ಅಂತೂ ಕೇಳುವುದೇ ಬೇಡ. ಯಾವಗ ಯಾವ ಸೆಲೆಬ್ರಿಟಿ ವಿಚ್ಛೇದನ ಘೋಷಿಸುತ್ತಾರೆ ಎಂಬುದರ ಮೇಲೆ ಇದೀಗ ಪರಿಸ್ಥಿತಿ ಬದಲಾಗಿದೆ. ಚಿತ್ರದ ಶೂಟಿಂಗ್ ವೇಳೆಯೇ ಪ್ರೀತಿಸಿ ಮದುವೆಯಾಗುತ್ತಾರೆ. ನಂತರ ಒಬ್ಬರನ್ನೊಬ್ಬರು ಪರಸ್ಪರ ಅರ್ಥಮಾಡಿಕೊಳ್ಳಲಾಗಿದೆ ಡಿವೋರ್ಸ್‌ ಪಡೆದು ದೂರವಾಗುತ್ತಾರೆ. ಎಷ್ಟೋ ಸೆಲೆಬ್ರಿಟಿಗಳ ಜೀವನ ಹೀಗೇಯೇ ಇರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಸೆಲೆಬ್ರಿಟಿಗಳ ಬಗ್ಗೆ ಅಂತೂ ಕೇಳುವುದೇ ಬೇಡ. ಯಾವಗ ಯಾವ ಸೆಲೆಬ್ರಿಟಿ ವಿಚ್ಛೇದನ ಘೋಷಿಸುತ್ತಾರೆ ಎಂಬುದರ ಮೇಲೆ ಇದೀಗ ಪರಿಸ್ಥಿತಿ ಬದಲಾಗಿದೆ. ಚಿತ್ರದ ಶೂಟಿಂಗ್ ವೇಳೆಯೇ ಪ್ರೀತಿಸಿ ಮದುವೆಯಾಗುತ್ತಾರೆ. ನಂತರ ಒಬ್ಬರನ್ನೊಬ್ಬರು ಪರಸ್ಪರ ಅರ್ಥಮಾಡಿಕೊಳ್ಳಲಾಗಿದೆ ಡಿವೋರ್ಸ್‌ ಪಡೆದು ದೂರವಾಗುತ್ತಾರೆ. ಎಷ್ಟೋ ಸೆಲೆಬ್ರಿಟಿಗಳ ಜೀವನ ಹೀಗೇಯೇ ಇರುತ್ತದೆ.  

2 /5

ಭಾಷೆ ಯಾವುದೇ ಇರಲಿ, ಇಂಡಸ್ಟ್ರಿ ಯಾವುದೇ ಆಗಿರಲಿ ಸೆಲೆಬ್ರಿಟಿಗಳು ವಿಚ್ಛೇದನ ಪಡೆಯುವುವವರಲ್ಲಿ ಕಡಿಮೆಯಾಗಿಲ್ಲ. ಇತ್ತೀಚೆಗೆ ಟಾಲಿವುಡ್‌ನಿಂದ ಹಿಡಿದು ಬಾಲಿವುಡ್‌ ತನಕ ಅದೆಷ್ಟೋ ಸೆಲೆಬ್ರಿಟಿ ಕಪಲ್ಸ್‌ ವಿಚ್ಛೇಧನ ಪಡೆದು ಪರ್ತ್ಯೇಕವಾಗಿ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಕೆಲವರು ಮತ್ತೊಬ್ಬರ ಜೊತೆ ಸುಂದರವಾದ ಜೀವನ ಕಟ್ಟಿಕೊಂಡಿದ್ದಾರೆ.   

3 /5

ಇತ್ತೀಚೆಗೆ ಹಾಲಿವುಡ್ ನ ಖ್ಯಾತ ನಟಿ ಹಾಗೂ ಗಾಯಕಿ ಜೆನ್ನಿಫರ್ ಲೋಪೆಜ್ ಹೆಸರೂ ಈ ಪಟ್ಟಿಯಲ್ಲಿ ಕೇಳಿ ಬರುತ್ತಿದೆ. ಜೆನ್ನಿಫರ್ ಲೋಪೆಜ್ ತನ್ನ ಪತಿಯಿಂದ ದೂರವಾಗಿದ್ದಾರೆ. 2022 ರಲ್ಲಿ ಬೆನ್ ಅಫ್ಲೆಕ್ ಅವರನ್ನು ವಿವಾಹವಾದ ನಟಿ ಶೀಘ್ರದಲ್ಲೇ ತಮ್ಮ ಸಂಬಂಧಕ್ಕೆ ವಿದಾಯ ಹೇಳಲು ತಯಾರಾಗುತ್ತಿದ್ದಾರೆ. ಜೆನ್ನಿಫರ್ ಲೋಪೆಜ್ ಈಗಾಗಲೇ ಮೂರು ಜನರನ್ನು ಮದುವೆಯಾಗಿ ವಿಚ್ಛೇದನ ಪಡೆದಿದ್ದಾಳೆ. ಬೆನ್ ಅಫ್ಲೆಕ್ ಅವರ ನಾಲ್ಕನೇ ಪತಿ, ದಂಪತಿಗಳು ಇತ್ತೀಚೆಗೆ ತಮ್ಮ ಸಂಬಂಧವನ್ನು ಕೊನೆಗೊಳಿಸಲು ತಯಾರಿ ನಡೆಸುತ್ತಿದ್ದಾರೆ.  

4 /5

ಈ ಇಬ್ಬರು 2021ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ನಂತರ ಅವರು 2022 ರಲ್ಲಿ ವಿವಾಹವಾದರು. ಇಬ್ಬರ ನಡುವಿನ ಭಿನ್ನಾಭಿಪ್ರಾಯದಿಂದ ದಂಪತಿ ವಿಚ್ಛೇದನಕ್ಕೆ ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ. ಬೆನ್ ಅಫ್ಲೆಕ್ ಮತ್ತು ಲೋಪೆಜ್ ಕೊನೆಯ ಬಾರಿಗೆ ಮಾರ್ಚ್ 30 ರಂದು ಒಟ್ಟಿಗೆ ಕಾಣಿಸಿಕೊಂಡರು. ದಂಪತಿಗಳು ಒಂದು ತಿಂಗಳ ಹಿಂದೆ ವಿಚ್ಛೇದನದ ಪತ್ರವನ್ನು ಅಂತಿಮಗೊಳಿಸಿದ್ದಾರೆ. ಆದರೆ ಅದನ್ನು ಘೋಷಿಸಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಾರೆ.  

5 /5

ಪ್ರಸ್ತುತ, ದಂಪತಿಗಳು ಬೆವರ್ಲಿ ಹಿಲ್ಸ್‌ನಲ್ಲಿರುವ ತಮ್ಮ ದುಬಾರಿ ಭವನವನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಈ ವರ್ಷದ ಆರಂಭದಲ್ಲಿ ಖರೀದಿಸಿದ ಬಂಗಲೆಯನ್ನು ಮಾರಾಟಕ್ಕೆ ಇಡಲಾಗಿರುವುದರಿಂದ ದಂಪತಿಗಳು ಡೈವರ್ಸ್ ತೆಗೆದುಕೊಳ್ಳಲು ಹೊರಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಬೆನ್ ಆಸ್ತಿ 1800 ಕೋಟಿಯಾಗಿದ್ದರೆ, ಜೆನ್ನಿಫರ್ 900 ಕೋಟಿಗೆ ತನ್ನ ಪತಿಯಿಂದ ಜೀವನಾಂಶವಾಗಿ ಬೇಡಿಕೆ ಇಟ್ಟಿದ್ದಾಳೆ. ಇದು ಸಂಭವಿಸಿದರೆ, ಇದು ವಿಶ್ವದ ಅತ್ಯಂತ ದುಬಾರಿ ವಿಚ್ಛೇದನ ಎಂದು ದಾಖಲಾಗಲಿದೆ, ಮತ್ತೊಂದೆಡೆ, ಜೆನ್ನಿಫರ್ಗೆ ಆಸ್ತಿಯ ಕೊರತೆಯಿಲ್ಲ. ಆಕೆಯ ನಿವ್ವಳ ಮೌಲ್ಯ ಸುಮಾರು $500 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 4000 ಕೋಟಿ ರೂ. ಈಗಾಗಲೇ ನಾಲ್ಕು ಬಾರಿ ವಿಚ್ಛೇದನ ಪಡೆದಿರುವ ಜೆನ್ನಿಫರ್ ಐದನೇ ವಿಚ್ಛೇದನಕ್ಕೆ ಸಿದ್ಧವಾಗಿದ್ದಾಳೆ.