Kalyana Yoga 2025: ಕಲ್ಯಾಣ ಯೋಗದಿಂದ 2025ರಲ್ಲಿ ಈ ರಾಶಿಯವರಿಗೆ ಕೂಡಿ ಬರಲಿದೆ ಮದುವೆ ಭಾಗ್ಯ!!

Kalyana Yoga 2025: 2025ರಲ್ಲಿ ಸಿಂಹ ರಾಶಿಯವರು ಮದುವೆಗೆ ತುಂಬಾ ಯೋಗ ಫಲಗಳನ್ನು ಹೊಂದಿದ್ದಾರೆ. ಕನ್ಯಾ ರಾಶಿಯವರಿಗೂ ಸಹ ತುಂಬಾ ಒಳ್ಳೆಯ ಮದುವೆಯ ಯೋಗವಿದೆ. ಮದುವೆ ನಿಧಾನವಾದರೂ ಪ್ರಧಾನವಾಗಲಿದೆ. ಅದರಂತೆ ತುಲಾ ರಾಶಿಯವರಿಗೆ ಶನಿಯ ಬಲವಿರುತ್ತದೆ. ಹೀಗಾಗಿ ಮದುವೆಗೆ ತುಂಬಾ ಶುಭ ಫಲ ಸಿಗಲಿದೆ. 

Kalyana Yoga 2025: 2025ರಲ್ಲಿ ಯಾವ ರಾಶಿಯವರಿಗೆ ಮದುವೆಯಾಗುವ ಯೋಗ ಇದೆ? ಮದುವೆಯಾಗುವ ಯೋಗದ ಫಲಗಳು ಯಾವ ತಿಂಗಳಿನಿಂದ ಯಾವ ತಿಂಗಳ ಮಧ್ಯದಲ್ಲಿ ಇದೆ. ಯಾವ ತಿಂಗಳಿನಲ್ಲಿ ವಿವಾಹವಾದರೆ ಉತ್ತಮ? ಯಾವ ರಾಶಿಯವರಿಗೆ ಗುರು ಬಲ ಇದೆ ಎಂಬುದರ ಬಗ್ಗೆ ತಿಳಿಯಿರಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

2025ರಲ್ಲಿ ಮೇಷ ರಾಶಿಯು ಗುರು ಬಲವನ್ನು ಕಳೆದುಕೊಳ್ಳುತ್ತದೆ. ಮೇಷ ರಾಶಿಯವರ ಮೂರನೇ ಸ್ಥಾನಕ್ಕೆ ಗುರು ಸಾಗಲಿದ್ದಾನೆ. ಆದರೂ ಸಹ ಮೇಷ ರಾಶಿಯವರಿಗೆ ಮದುವೆಯ ಯೋಗವಿದೆ. ಮೇಷ ರಾಶಿಯವರಿಗೆ ಸಪ್ತಮ ಸ್ಥಾನ ಅಂದರೆ ಮೇಷ ರಾಶಿಯ ಏಳನೇ ಮನೆಯ ಮೇಲೆ ಗುರುವಿನ ದೃಷ್ಟಿ ಬೀಳುವುದರಿಂದ ಕಂಕಣ ಬಲದ ಯೋಗ ಸಿಗಲಿದೆ. ಮೇಷದಲ್ಲಿ ಗುರುವಿನ ಸ್ಥಾನ ಬಲವಿಲ್ಲದೇ ಇದ್ದರೂ ಗುರುವಿನ ಶುಭ ದೃಷ್ಟಿಯ ಪ್ರಭಾವದಿಂದ ಮೇಷ ರಾಶಿಯವರಿಗೆ ಹೊಸ ವರ್ಷದಲ್ಲಿ ವಿವಾಹ ಯೋಗ ಕೂಡಿ ಬರಲಿದೆ.

2 /5

ವೃಷಭ ರಾಶಿಯ 2ನೇ ಮನೆಯಲ್ಲಿ ಗುರು ಬಲವಿದೆ. ಇದರ ಪ್ರಭಾವದಿಂದ 2025ರಲ್ಲಿ ಮದುವೆಯ ಯೋಗ ಈ ರಾಶಿಗಿದೆ. ಈ ವರ್ಷ ಅದ್ಭುತ ಫಲವನ್ನು ವೃಷಭ ರಾಶಿಯವರು ಪಡೆಯಲಿದ್ದಾರೆ. 2025ರಲ್ಲಿ ೧೨ ರಾಶಿಗಳ ಪೈಕಿ ವೃಷಭ ರಾಶಿಯವರು ಅತ್ಯಂತ ಶುಭ ಫಲವನ್ನು ಪಡೆಯಲಿದ್ದಾರೆ. ಶನಿ ಹಾಗೂ ಗುರು ಸ್ಥಾನ ಜಾತಕದಲ್ಲಿ ಉತ್ತಮವಾಗಿದ್ದು, ಈ ಎರಡೂ ಗ್ರಹಗಳ ಆಶೀರ್ವಾದಿಂದ ವರ್ಷವಿಡೀ ವೃಷಭ ರಾಶಿಯವರು ಜೀವನದಲ್ಲಿ ಆರ್ಥಿಕ ಸಮೃದ್ಧಿ ಕಾಣಲಿದ್ದಾರೆ.

3 /5

ಮಿಥುನ ರಾಶಿಯವರ ಜನ್ಮ ಗುರುವಿನ ದೃಷ್ಟಿ ಸಪ್ತಮ ಸ್ಥಾನದಲ್ಲಿ ಬೀಳುವುದರಿಂದ 2025ರಲ್ಲಿ ಮದುವೆಯಾಗುವ ಯೋಗ ಸಿಗಲಿದೆ. ಆದರೆ ನೀವು ಯಾವುದೇ ಕಾರಣಕ್ಕೂ ಅವಸರ ಮಾಡಬೇಡಿ. ಸಮಯ ತೆಗೆದುಕೊಂಡ ನಂತರವಷ್ಟೇ ಉತ್ತಮ ಸಂಗಾತಿಯನ್ನು ಆಯ್ಕೆ ಮಾಡಬೇಕು. ಎಲ್ಲವನ್ನೂ ವಿಚಾರಿಸಿಯೇ ಸಂಗಾತಿಯನ್ನು ಆಯ್ಕೆ ಮಾಡಿ ಮದುವೆಯಾಗುವುದು ಉತ್ತಮ.

4 /5

2025ರಲ್ಲಿ ಇನ್ನುಳಿದ ಯಾವೆಲ್ಲಾ ರಾಶಿಯವರಿಗೆ ಮದುವೆಯಾಗುವ ಯೋಗವಿದೆ? 2025ರಲ್ಲಿ ಸಿಂಹ ರಾಶಿಯವರು ಮದುವೆಗೆ ತುಂಬಾ ಯೋಗ ಫಲಗಳನ್ನು ಹೊಂದಿದ್ದಾರೆ. ಕನ್ಯಾ ರಾಶಿಯವರಿಗೂ ಸಹ ತುಂಬಾ ಒಳ್ಳೆಯ ಮದುವೆಯ ಯೋಗವಿದೆ. ಮದುವೆ ನಿಧಾನವಾದರೂ ಪ್ರಧಾನವಾಗಲಿದೆ. ಅದರಂತೆ ತುಲಾ ರಾಶಿಯವರಿಗೆ ಶನಿಯ ಬಲವಿರುತ್ತದೆ. ಹೀಗಾಗಿ ಮದುವೆಗೆ ತುಂಬಾ ಶುಭ ಫಲ ಸಿಗಲಿದೆ. ಹೊಸ ವರ್ಷ ಮದುವೆಗೆ ಒಳ್ಳೆಯ ಸಮಯ ತುಲಾ ರಾಶಿಯವರಿಗೆ ಇದೆ. ಹನ್ನೆರಡು ವರ್ಷಕ್ಕೊಮ್ಮೆ ಶುಭ ಯೋಗ ಧನು ರಾಶಿಯವರಿಗೆ ಬಂದಿದೆ. ಇವರಿಗೂ ಸಹ ಮದುವೆಗೆ ಶುಭ ಯೋಗವಿದೆ. 2025ರಲ್ಲಿ ಕುಂಭ ರಾಶಿಗೂ ಸಹ ಮದುವೆಗೆ ಒಳ್ಳೆಯ ಸಮಯವಿದೆ. ಕೊನೆಯದಾಗಿ ಮೀನ ರಾಶಿಯವರಿಗೂ ಕಲ್ಯಾಣದ ಯೋಗವಿದೆ. ಆದರೆ ಕೆಲ ರಾಶಿಯವರು ಮದುವೆಯಾಗುವಾಗ ತುಂಬಾ ಜಾಗರೂಕರಾಗಿರಬೇಕು.

5 /5

ಕಟಕ, ವೃಶ್ಚಿಕ, ಮಕರ ರಾಶಿಯವರಿಗೆ ಮದುವೆಗೆ ಶುಭ ಯೋಗವಿಲ್ಲ. ಆದರೆ ಇವರಿಗೆ ಗುರು ಬಲ ಇಲ್ಲದೇ ಇದ್ದರೂ ಸಹ ಸೂರ್ಯ ಹಾಗೂ ಶುಕ್ರ ಬಲವಿದ್ದಾಗ ಮದುವೆ ಮಾಡಬಹುದು. ಹೀಗಾಗಿ ಗುರು ಬಲವಿದ್ದರೆ ಮಾತ್ರ ಮದುವೆ ಮಾಡಬೇಕು ಎಂದರ್ಥವಲ್ಲ. ಗುರು ಬಲ ವರ್ಷವಿಡೀ ಇರುತ್ತದೆ. ಆದರೆ ಸೂರ್ಯ ಹಾಗೂ ಶುಕ್ರ ಬಲ ಆಗಾಗ ಬಂದು ಹೋಗುವುದರಿಂದ ಅದನ್ನು ಸರಿಯಾಗಿ ನೋಡಿಕೊಂಡು ಮದುವೆ ಮಾಡಿಕೊಳ್ಳುವುದು ಉತ್ತಮ.