ಸಿಎಂ ಜೊತೆ ಮದುವೆ..ಮನೆಯವರ ಜೊತೆ ಕಲಹ..ತನಗಿಂತ 12 ವರ್ಷ ಹಿರಿಯ ರಾಜಕಾರಣಿಯನ್ನು ಎರಡನೇ ವಿವಾಹವಾದ ಈ ಸ್ಟಾರ್‌ ನಟಿ ಯಾರು ಗೊತ್ತಾ..?

RADHIKA KUMARASWAMY: ಕರ್ನಾಟಕದಲ್ಲಿ ಈ ನಟಿಯ ಮದುವೆ ವಿಷಯ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ಸ್ಯಾಂಡಲ್‌ವುಡ್‌ನಲ್ಲಂತೂ ಈ ನಟಿಯ ಮದುವೆ ವಿಚಾರ ಬಿರುಗಾಳಿ ಎಬ್ಬಿಸಿತ್ತು. ಅಷ್ಟಕ್ಕೂ ತನ್ನ ಮೈ ಮಾಟದಿಂದ ಮೋಡಿ ಮಾಡಿದ್ದ ಆ ನಟಿ ಸಡನ್‌ ಆಗಿ ಕರ್ನಾಟಕ ಜನತೆಗೆ ಶಾಕ್‌ ಕೊಟ್ಟಿದ್ದರು, ಮಾಜಿ ಮುಖ್ಯಮಂತ್ರಿಯನ್ನು ಮದುವೆಯಾಗಿ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದರು.

1 /6

ಕರ್ನಾಟಕದಲ್ಲಿ ಈ ನಟಿಯ ಮದುವೆ ವಿಷಯ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ಸ್ಯಾಂಡಲ್‌ವುಡ್‌ನಲ್ಲಂತೂ ಈ ನಟಿಯ ಮದುವೆ ವಿಚಾರ ಬಿರುಗಾಳಿ ಎಬ್ಬಿಸಿತ್ತು. ಅಷ್ಟಕ್ಕೂ ತನ್ನ ಮೈ ಮಾಟದಿಂದ ಮೋಡಿ ಮಾಡಿದ್ದ ಆ ನಟಿ ಸಡನ್‌ ಆಗಿ ಕರ್ನಾಟಕ ಜನತೆಗೆ ಶಾಕ್‌ ಕೊಟ್ಟಿದ್ದರು, ಮಾಜಿ ಮುಖ್ಯಮಂತ್ರಿಯನ್ನು ಮದುವೆಯಾಗಿ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದರು.  

2 /6

ನಾವು ಈ ದಿನ ಹೇಳುತ್ತಿರುವುದು ಬೇರಾರ ಕುರಿತು ಅಲ್ಲ ನಟಿ ರಾಧಿಕ ಕುಮಾರಸ್ವಾಮಿ, ನಟಿ ರಾಧಿಕಾ ಕುಮಾರಸ್ವಾಮಿ ಅವರು ತನ್ನ ಸೌಂದರ್ಯ ಹಾಗೂ ತನ್ನ ನಟನೆಯಿಂದ ಪಡ್ಡೆ ಹುಡುಗರ ನಿದ್ದೆ ಕೆಡಸಿದ ಬೆಡಗಿ.  

3 /6

ಕನ್ನಡ ಫಿಲಿಂ ಇಂಡಸ್ಟ್ರಿಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಅವರ ಕುರಿತು ವಿಶೇಷ ಪರಿಚಯವೇನು ಅಗತ್ಯವಿಲ್ಲ. ಸದಾ ತನ್ನ ಸಿನಿಮಾ ಹಾಗೂ ತನ್ನ ಸೌಂದರ್ಯದಿಂದ ಸುದ್ದಿಯಲ್ಲಿದ್ದ ನಟಿ 2006ರಲ್ಲಿ ತನ್ನ ಮದುವೆಯ ಕುರಿತು ಸುದ್ದಿಯಾದರು, ತಾನು ಮಾಜಿ ಮುಖ್ಯಮಂತ್ರಿಯನ್ನು ಮದುವೆಯಾಗಿದ್ದೇನೆ ಎಂದು ಹೇಳುವ ಮೂಲಕ ಅಭಿಮಾನಿಗಳ ಮೇಲೆ ಬಾಂಬ್‌ ಬೀಸಿದ್ದರು.

4 /6

ನಟಿ, ರಾಜಕಾರಣಿಯನ್ನು ಎರಡನೇ ಮದುವೆಯಾಗಲು ಬಯಸಿದ್ದರು, ಕುಮಾರಸ್ವಾ,ಇ ಅವರಿಗೆ ಆಗಾಗಲೆ ಮದುವೆಯಾಗಿ ಮಕ್ಕಳಿದ್ದರು, ಆದರೂ ಕೂಡ ನಟಿ ಆತನನ್ನು ಮದುವೆಯಾಗಲು ಬಯಸಿದ್ದರು, ಈ ಘಟನೆ ನಡೆದ ನಂತರ ನಟಿಗೆ ಸಿನಿಮಾಗಳಲ್ಲಿ ಅವಕಾಶ ಕೈ ತಪ್ಪಿತ್ತು, ಎಲ್ಲೆಲ್ಲಿಯೂ ನಟಿಯದ್ದೆ ಸುದ್ದಿ ಹರಿದಾಡ ತೊಡಗಿತ್ತು.

5 /6

ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಅನಿತಾ ಕುಮಾರಸ್ವಾಮಿ ಅವರನ್ನು 1986ರಲ್ಲಿ ಮೊದಲನೆ ಮದುವೆಯಾಗಿದ್ದರು, ನಂತರ ಅವರು ರಾಧಿಕಾ ಕುಮಾರಸ್ವಾಮಿ ಅವರನ್ನು 2000ರಲ್ಲಿ ಎರಡನೇ ಮದುವೆಯಾಗಿದ್ದರು, ಈ ಇಬ್ಬರು ಮದುವೆಯಾದ ಹಲವು ವರ್ಷಗಳ ತನಕ ಈ ವಿಷಯ ಗುಟ್ಟಾಗಿಯೇ ಇತ್ತು, ಆದರೆ 2006ರಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ತಾನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮದುವೆಯಾಗಿರುವುದಾಗಿ ಗುಟ್ಟು ಬಿಚ್ಚಿಟ್ಟಿದ್ದರು.

6 /6

ತಮ್ಮ ಮನೆಯವರ ಒಪ್ಪಿಗೆ ಇಲ್ಲದಿದ್ದರೂ ಸಹ ನಟಿ ರಾಧಿಕಾ ಕುಮಾರಸ್ವಾಮಿ ಮನೆಯವರಿಗೆ ವಿರೋಧವಾಗಿ ಕುಮಾರಸ್ವಾಮಿಯವರನ್ನು ಎರಡನೇ ಮದುವೆಯಾಗಲು ನಿರ್ಧರಿಸಿದ್ದರು, ಅಷ್ಟಕ್ಕೂ ನಟಿ ತಮ್ಮ ಪತಿಗಿಂತ 12 ವರ್ಷ ಚಿಕ್ಕವರು.