ಈ ಐದು ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಮಕ್ಕಳ ಹೈಟ್ ಹೆಚ್ಚುತ್ತದೆ

ಚಿಕ್ಕ ವಯಸ್ಸಿನಿಂದಲೇ ಸರಿಯಾದ ಪೋಷಣೆ ಮತ್ತು ಆಹಾರವನ್ನು ಒದಗಿಸುವುದು ಮಗುವಿನ ಎತ್ತರವನ್ನು ಕೆಲವು ಇಂಚುಗಳಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ. 

ಬೆಂಗಳೂರು : ಉತ್ತಮ ಎತ್ತರ ಮತ್ತು ದೈಹಿಕ ಬೆಳವಣಿಗೆ ನಿಮ್ಮ ವ್ಯಕ್ತಿತ್ವದ ಪ್ರಮುಖ ಭಾಗವಾಗಿದೆ. ಹೆಚ್ಚಿನ ಪೋಷಕರು ತಮ್ಮ ಮಕ್ಕಳ ಎತ್ತರ ಮತ್ತು ದೈಹಿಕ ಬೆಳವಣಿಗೆಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಪರಿಸರ, ಆಹಾರ ಮತ್ತು ವ್ಯಾಯಾಮದಂತಹ ಅನೇಕ ಅಂಶಗಳು ನಿಮ್ಮ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತವೆ.  ಮಗುವಿನ ಅಂತಿಮ ಎತ್ತರದ 60 ರಿಂದ 80 ಪ್ರತಿಶತವು ನಿಮ್ಮ ಜೀನ್‌ಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೂ, ಚಿಕ್ಕ ವಯಸ್ಸಿನಿಂದಲೇ ಸರಿಯಾದ ಪೋಷಣೆ ಮತ್ತು ಆಹಾರವನ್ನು ಒದಗಿಸುವುದು ಮಗುವಿನ ಎತ್ತರವನ್ನು ಕೆಲವು ಇಂಚುಗಳಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಅದು ವಯಸ್ಕರಾಗಿರಲಿ ಅಥವಾ ಮಕ್ಕಳಿರಲಿ, ಸಮತೋಲಿತ ಮತ್ತು ಪೌಷ್ಟಿಕ ಆಹಾರವು ಪ್ರತಿಯೊಬ್ಬರಿಗೂ ಮೂಲಭೂತ ಅವಶ್ಯಕತೆಯಾಗಿದೆ. ಎಲ್ಲಾ ಪೋಷಕಾಂಶಗಳು ಸಮೃದ್ಧವಾಗಿರುವ ಊಟ ಮತ್ತು ತಿಂಡಿಗಳು ದೇಹದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅವರ ಆಹಾರದಲ್ಲಿ ಹೆಚ್ಚು ತಾಜಾ ಹಣ್ಣುಗಳು, ಧಾನ್ಯಗಳು, ಡೈರಿ ಮತ್ತು ಪ್ರೋಟೀನ್ ಮೂಲಗಳನ್ನು ಸೇರಿಸಿ. ಸಿಹಿ ಮತ್ತು ಸಂಸ್ಕರಿಸಿದ ಆಹಾರವನ್ನು ತಪ್ಪಿಸಿ.  

2 /5

ಮಕ್ಕಳು ಸಾಕಷ್ಟು ಪೋಷಕಾಂಶಗಳನ್ನು ಪಡೆಯುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು, ಕೆಲವು ಪೋಷಕರು ಅನಗತ್ಯವಾಗಿ ಮಾತ್ರೆಗಳನ್ನು ನೀಡುತ್ತಾರೆ. ಮಕ್ಕಳಿಗೆ ಪೋಷಕಾಂಶಗಳ ಕೊರತೆಯಿದ್ದರೆ ಅಥವಾ ಬೆಳವಣಿಗೆಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿದ ನಂತರವಷ್ಟೇ ಮಾತ್ರೆಗಳನ್ನು ನೀಡಬೇಕು. 

3 /5

ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಪ್ರತಿದಿನ ವ್ಯಾಯಾಮ ಮಾಡಲು ಕಲಿಸುವುದು ಮಗುವಿನ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದೈಹಿಕವಾಗಿ ಸಕ್ರಿಯವಾಗಿರುವುದು ದೇಹದ ಎತ್ತರವನ್ನು ಹೆಚ್ಚಿಸುವುದು ಸೇರಿದಂತೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.  ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಲು ಸ್ಟ್ರೆಚಿಂಗ್, ಯೋಗ ಮತ್ತು ಧ್ಯಾನ ಕೂಡ ತುಂಬಾ ಪ್ರಯೋಜನಕಾರಿ. ವ್ಯಾಯಾಮವು ಬೆನ್ನುಮೂಳೆಯನ್ನು ವಿಸ್ತರಿಸುತ್ತದೆ ಮತ್ತು ನಿಮ್ಮ ಮಗುವಿನ ಭಂಗಿಯನ್ನು ಸುಧಾರಿಸುತ್ತದೆ.  

4 /5

ಮಕ್ಕಳ ಎತ್ತರವನ್ನು ಹೆಚ್ಚಿಸಲು ಹ್ಯಾಂಗಿಂಗ್ ಬಾರ್  ಯಾವಾಗಲೂ ಅತ್ಯುತ್ತಮ ಮಾರ್ಗವೆಂದು ಪರಿಗಣಿಸಲಾಗಿದೆ. ಹ್ಯಾಂಗಿಂಗ್ ಬಾರ್  ಮೂಲಕ ನೇತಾಡುವುದರಿಂದ ಬೆನ್ನುಮೂಳೆ ಉದ್ದವಾಗುತ್ತದೆ. ಅವುಗಳ ಎತ್ತರವನ್ನು ಹೆಚ್ಚಿಸುತ್ತದೆ. ಬಾರ್‌ನಿಂದ ನಿರಂತರವಾಗಿ ನೇತಾಡುವುದರಿಂದ ಕಾಲಾನಂತರದಲ್ಲಿ ಎತ್ತರವನ್ನು ಹೆಚ್ಚಿಸಬಹುದ ಜೊತೆಗೆ, ಇದು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

5 /5

ಜನರು ತಮ್ಮ ಜೀವನದಲ್ಲಿ ನಿದ್ರೆಗೆ ಸರಿಯಾದ ಪ್ರಾಮುಖ್ಯತೆ ನೀಡುವುದಿಲ್ಲ. ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪ್ರತಿಯೊಬ್ಬರಿಗೂ 7-8 ಗಂಟೆಗಳ ನಿದ್ದೆ ಅತ್ಯಗತ್ಯ. ಮಕ್ಕಳು ಹೆಚ್ಚು ಸಕ್ರಿಯರಾಗಿರುವುದರಿಂದ ವಯಸ್ಕರಿಗಿಂತ ಹೆಚ್ಚು ನಿದ್ರೆಯ ಅಗತ್ಯವಿರುತ್ತದೆ. ನಿಮ್ಮ ಮಕ್ಕಳು ಸಮಯಕ್ಕೆ ಸರಿಯಾಗಿ ನಿದ್ರಿಸುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ರಾತ್ರಿಯಿಡೀ ಶಾಂತಿಯುತವಾಗಿ ಮಲಗುತ್ತಾರೆಯೇ ಎನ್ನುವುದನ್ನು ಗಮನಿಸಿ. ಇಲ್ಲವಾದರೆ ವೈದ್ಯರನ್ನು ಸಂಪರ್ಕಿಸಿ.