ಚಳಿಗಾಲದಲ್ಲಿ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ. ಹುರಿದ ಬೆಳ್ಳುಳ್ಳಿಯನ್ನು (Roasted Garlic) ಸೇವಿಸಿದರೆ ಚಳಿಗಾಲದಲ್ಲಿ (Winter Season) ತಲೆದೋರಬಹುದಾದ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಚಳಿಗಾಲದಲ್ಲಿ ನೀವು ಆರೋಗ್ಯಕರವಾಗಿರಬೇಕೆಂದರೆ ಹುರಿದ ಬೆಳ್ಳುಳ್ಳಿಯನ್ನು ನಿತ್ಯವೂ ಸೇವಿಸಿ..
ನವದೆಹಲಿ : ಚಳಿಗಾಲದ ಸಮಯದಲ್ಲಿ ಎಲ್ಲಿ ನೋಡಿದರೂ ಅನಾರೋಗ್ಯದ್ದೇ ಮಾತು ಕೇಳಿಬರುತ್ತದೆ. ಈ ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ದೊಡ್ಡ ತಲೆನೋವು. ಚಳಿಗಾಲದಲ್ಲಿ ಶೀತ, ಕೆಮ್ಮು, ಜ್ವರ, ಮೈಕೈನೋವಿನಂತಹ ರೋಗಗಳು ಸಾಮಾನ್ಯವಾಗಿರುತ್ತದೆ. ಚಳಿಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಬೇಕಾದರೆ ನಿತ್ಯವೂ ಹುರಿದ ಬೆಳ್ಳುಳ್ಳಿಯನ್ನು ಸೇವಿಸಿ. ಬೆಳ್ಳುಳ್ಳಿಯಲ್ಲಿ ಮ್ಯಾಂಗನೀಸ್, ಪೋಟಾಶಿಯಂ, ಐರನ್, ಕ್ಯಾಲ್ಶಿಯಂ, ಮತ್ತು ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಈ ಕಾರಣದಿಂದ ಚಳಿಗಾಲದಲ್ಲಿ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ರೋಗಗಳಿಂದ ಮುಕ್ತಿ ಪಡೆಯಬಹುದು.
ಚಳಿಗಾಲದಲ್ಲಿ ನೆಗಡಿ, (Cold) ಫ್ಲೂ (Flu) ಅಂತಹ ಸಮಸ್ಯೆಗಳಿಂದ ಬಚಾವಾಗಬೇಕಾದರೆ, ಹುರಿದ ಬೆಳ್ಳುಳ್ಳಿ ಸುಲಭ ಉಪಾಯ. ಬೆಳ್ಳುಳ್ಳಿಯಲ್ಲಿ ಎಲ್ಲಾ ಔಷಧಿಯ ಗುಣಗಳು ಅಡಗಿವೆ. ಬೆಳ್ಳುಳ್ಳಿಯ ಚಹಾ ಅಥವಾ ದಿನಾ ಹುರಿದ ಬೆಳ್ಳುಳ್ಳಿ ಸೇವನೆಯಿಂದ ರೋಗಗಳಿಂದ ಶೀಘ್ರ ಗುಣಮುಖರಾಗಬಹುದು.
ಬೆಳ್ಳುಳ್ಳಿಯಲ್ಲಿಹೃದಯ ಸಂಬಂಧಿ ರೋಗಗಳಿಗೂ (Heart Disease) ರಾಮಬಾಣ. ಇದು ದೇಹದ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕರಿಸುತ್ತದೆ. ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲನ್ನು ಇದು ಕಡಿಮೆಮಾಡುತ್ತದೆ. ಹುರಿದ ಬೆಳ್ಳುಳ್ಳಿ ಸೇವಿಸುವುದರಿಂದ ರಕ್ತದೊತ್ತಡ ಸಮಸ್ಯೆಯನ್ನು ಕೂಡಾ ನಿವಾರಿಸಬಹುದು.
ರೋಗಗಳ ಜೊತೆ ಹೋರಾಡಬೇಕಾದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ (Immunity) ಹೆಚ್ಚಿನ ಪ್ರಮಾಣದಲ್ಲಿರಬೇಕು. ಹೀಗಾಗಬೇಕಾದರೆ ಜೇನುತುಪ್ಪದೊಂದಿಗೆ (Honey) ಹುರಿದ ಬೆಳ್ಳುಳ್ಳಿಯನ್ನು ಸೇರಿಸಿ ಸೇವಿಸಬೇಕು. ಹೀಗೆ ಮಾಡುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ರೋಗಗಳ ವಿರೋಧ ಹೋರಾಡಲು ದೇಹ ಶಕ್ತವಾಗುತ್ತದೆ.
ಚಳಿಗಾದಲ್ಲಿ ಕರಿದ ಹುರಿದ ತಿಂಡಿ ಎಷ್ಟು ತಿಂದರೂ ಮತ್ತೆ ಮತ್ತೆ ಬೇಕು ಅನ್ನಿಸುತ್ತದೆ. ಈ ಕಾರಣದಿಂದ ದೇಹ ತೂಕವೂ (Weight gain) ಹೆಚ್ಚುತ್ತದೆ. ಹುರಿದ ಬೆಳ್ಳುಳ್ಳಿ ಸೇವನೆ ದೇಹ ತೂಕ ನಿಯಂತ್ರಿಸುವಲ್ಲಿಯೂ ಕೆಲಸ ಮಾಡುತ್ತದೆ.
ಅಸ್ತಮ (Asthma) ರೋಗಕ್ಕೆ ಹುರಿದ ಬೆಳ್ಳುಳ್ಳಿ ದಿವ್ಯ ಔಷಧ. ಪ್ರತಿನಿತ್ಯ ಹಾಲಿನ ಜೊತೆ ಎರಡು ಎಸಳು ಹುರಿದ ಬೆಳ್ಳುಳ್ಳಿ ಸೇವಿಸಿದರೆ ಅಸ್ತಮಾ ನೋಡ ನೋಡುತ್ತಿದ್ದಂತೆ ನಿಯಂತ್ರಣಕ್ಕೆ ಬರುತ್ತದೆ.