ಛಲ ಅಂದ್ರೆ ಹೀಗಿರಬೇಕು... 23 ಸರ್ಜರಿ.. 4 ವರ್ಷ ವ್ಹೀಲ್‌ಚೇರ್‌ಗೆ ಸೀಮಿತ.. ಸತ್ತು ಬದುಕುಳಿದ ವ್ಯಕ್ತಿ ಈಗ ಸ್ಟಾರ್..!

Chiyaan Vikram : ಈ ಸೌತ್‌ ಸ್ಟಾರ್ ಹೀರೋ 4 ವರ್ಷ ವ್ಹೀಲ್ ಚೇರ್‌ಗೆ ಸೀಮಿತವಾಗಿದ್ದರು..  ಬರೋಬ್ಬರಿ 23 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ... ಇಷ್ಟೇಲ್ಲಾ ಆದರೂ ಹಿಂದೇಟು ಹಾಕದ ನಟ ಇಂದು ಭಾರತೀಯ ಸೂಪರ್‌ ಸ್ಟಾರ್‌ ನಟರಲ್ಲಿ ಒಬ್ಬರು.. ಯಾರು ಆ ನಾಯಕ..? ಬನ್ನಿ ನೋಡೋಣ..

1 /7

ತಮಿಳು ಸಿನಿರಂಗದ ಪ್ರತಿಭಾನ್ವಿತ ನಟರಲ್ಲಿ ಚಿಯಾನ್‌ ವಿಕ್ರಮ್ ಕೂಡ ಒಬ್ಬರು.. ಕಾಲಿವುಡ್‌ ಜೊತೆಗೆ ಟಾಲಿವುಡ್‌ನಲ್ಲೂ ಒಳ್ಳೆಯ ಕ್ರೇಜ್ ಗಿಟ್ಟಿಸಿಕೊಂಡಿರುವ ನಾಯಕ. 90ರ ದಶಕದಲ್ಲಿ ವಿಕ್ರಮ್ ಅವರ ಚಿತ್ರಗಳಿಗೆ ಅಷ್ಟೊಂದು ಕ್ರೇಜ್ ಇರಲಿಲ್ಲ, ಆದರೆ ಈಗ ಇವರ ಕ್ರೇಜ್‌ ಹೇಳತೀರದ್ದು..  

2 /7

ಹೆಚ್ಚಾಗಿ ಸೌತ್‌ ಸಿನಿಪ್ರೇಕ್ಷಕರಿಗೆ ವಿಕ್ರಮ್‌ ಅವರು, ಅಪರಿಚಿತ ಸಿನಿಮಾದ ಮೂಲಕ ಪರಿಚಯ. ಈ ಸಿನಿಮಾದಲ್ಲಿ ಅವರ ಅಮೋಘ ಅಭಿನಯದ ಎಂಥಹವನ್ನೂ ಅಚ್ಚರಿಗೊಳಿಸುತ್ತದೆ.. ಇಂದಿಗೂ ಈ ಸಿನಿಮಾವನ್ನು ಜನ ಅದೇ ಕುತೂಹಲದಿಂದ ನೋಡುತ್ತಾರೆ..  

3 /7

 ಅಪರಿಚಿತ ಚಿತ್ರದ ನಂತರ ವಿಕ್ರಮ್ ಗೆ ಆ ರೇಂಜ್ ನಲ್ಲಿ ಮತ್ತೊಂದು ಹಿಟ್ ಸಿನಿಮಾ ಸಿಗಲಿಲ್ಲ. ಆ ಮೂಲಕ ಸೌತ್‌ನಲ್ಲಿ ಅವರ ಮಾರುಕಟ್ಟೆ ಸಂಪೂರ್ಣ ಕುಸಿಯುವ ಹಂತಕ್ಕೆ ಬಂದಿತು. ಇದರ ನಡುವೆ ಮಲ್ಲಣ್ಣ ಸೇರಿದಂತೆ ಹಲವು ಸಿನಿಮಾಗಳು ರಿಲೀಸ್‌ ಆದರೂ ಅಷ್ಟಾಗಿ ಸದ್ದು ಮಾಡಲಿಲ್ಲ..   

4 /7

ಚಿತ್ರಕ್ಕಾಗಿ ಪ್ರಾಣ ಕೊಡುವ ಕಲಾವಿದರಲ್ಲಿ ವಿಕ್ರಮ್ ಕೂಡ ಒಬ್ಬರು. ಚಿತ್ರಕ್ಕೆ ಏನು ಬೇಕೋ ಅದಕ್ಕಿಂತ ಹೆಚ್ಚು ಶ್ರಮವಹಿಸುವ ನಾಯಕ. ಅನೇಕರು ವಿಕ್ರಮ್ ಅವರನ್ನು ನಿರ್ದೇಶಕರ ನಾಯಕ ಎಂದೂ ಕರೆಯುತ್ತಾರೆ. ಏಕೆಂದರೆ ಒಬ್ಬ ನಿರ್ದೇಶಕನ ದೃಷ್ಟಿಯನ್ನು ಬಹಳ ಬೇಗನೆ ಹಿಡಿಯುತ್ತಾನೆ...  

5 /7

ಇದೀಗ ಅವರ ಪುನರಾಗಮನಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವಿಕ್ರಮ ಅಭಿನಯದ ತಂಗಾಲನ್ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಈ ಚಿತ್ರದ ಟೀಸರ್‌ಗಳು ಮತ್ತು ಗ್ಲಿಂಪ್‌ಗಳು ಪ್ರೇಕ್ಷಕರಲ್ಲಿ ನಿರೀಕ್ಷೆಗಳನ್ನು ಹೆಚ್ಚಿಸಿದೆ.   

6 /7

ಈಗ ಸ್ಟಾರ್ ಹೀರೋ ಆಗಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ವಿಕ್ರಮ್ 4 ವರ್ಷಗಳ ಕಾಲ ವ್ಹೀಲ್‌ ಚೇರ್ ಮೇಲೆ ಜೀವನ ಕಳೆದಿದ್ದಾರೆ.. ಹೌದು, ವಿಕ್ರಮ್ 12 ನೇ ವಯಸ್ಸಿನಲ್ಲಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.   

7 /7

ಬಲಗಾಲು ತೆಗೆಯುವ ಹಂತಕ್ಕೆ ಹೋದರೂ, ವಿಕ್ರಂನ ತಾಯಿ ಅದಕ್ಕೆ ಒಪ್ಪಲಿಲ್ಲ. ಹಾಗಾಗಿ ಆ ಕಾಲನ್ನು ಉಳಿಸಿಕೊಳ್ಳಲು ಬರೋಬ್ಬರಿ 23 ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಆ ಅಪಘಾತದ ನಂತರ, ಅವರು ಸುಮಾರು 4 ವರ್ಷಗಳ ಕಾಲ ವ್ಹೀಲ್‌ಚೇರ್‌ನಲ್ಲಿ ಜೀವನ ಕಳೆಯುವಂತಾಯಿತು. ಇದನ್ನು ಸ್ವತಃ ವಿಕ್ರಮ್ ಅವರೇ ಹೇಳಿಕೊಂಡಿದ್ದಾರೆ..